ಜೆಡಿಎಸ್ ಅಭ್ಯರ್ಥಿ ಡಾ. ಸೋಲಾಪೂರಗೆ ಅಭಿನಂದನಾ ಸಮಾರಂಭ.
ಮುದ್ದೇಬಿಹಾಳ: 2023ರ ಜನೇವರಿ 19ರಂದು ಮುದ್ದೇಬಿಹಾಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಪಂಚಯಾತ್ರೆ ಆಗಮಿಸಲಿದ್ದು ಅಂದಾಜು 30 ಸಾವಿರ ಜನ ಸೇರುವ ನಿರೀಕ್ಷೆ ಇದೆ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಹುಮ್ಮಸ್ಸು ತೋರಿಸುತ್ತಿದ್ದಾರೆ ಎಂದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ನ ಅಧಿಕೃತ ಅಭ್ಯರ್ಥಿ ಡಾ.ಸಿ.ಎಸ್.ಸೋಲಾಪೂರ ಹೇಳಿದರು.
ಪಟ್ಟಣದ ತಾಳಿಕೋಟೆ ಬೈಪಾಸ್ ರಸ್ತೆಯ ಎಂಜಿಎಂಕೆ ಶಾಲೆಯ ಹತ್ತಿರ ಇರುವ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಜೆಡಿಎಸ್ ಮುಖಂಡರು ನೀಡಿದ ಅಭಿನಂದನಾ ಪೂರ್ವಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
15 ರಂದು ಇಂಡಿ, 16ರಂದು ನಾಗಠಾಣ, 17ರಂದು ಸಿಂದಗಿ, 18ರಂದು ದೇವರ ಹಿಪ್ಪರಗಿ, 19 ರಂದು ತಾಳಿಕೋಟೆ, ನಾಲತವಾಡ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಆಗಮಿಸಲಿದ್ದು ಅಂದು ಬೃಹತ್ ಸಮಾರಂಭ ಏರ್ಪಡಿಸುವ ನಿಟ್ಟಿನಲ್ಲಿ ಜೆಡಿಎಸ್ನ ಎಲ್ಲರೂ ಶ್ರಮಿಸಬೇಕು. ಎಂದರು.
ನಾನು ಮತಕ್ಷೇತ್ರಕ್ಕೆ ಹೊಸಬನಲ್ಲ. ಈ ಹಿಂದೆ ಮತಕ್ಷೇತ್ರದ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಜನರೊಂದಿಗೆ ಪಕ್ಷಾತೀತ ಸಂಬಂಧ, ಬಾಂಧವ್ಯ, ಒಡನಾಟ ಹೊಂದಿದ್ದೇನೆ. ಮತಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಮತ್ತೇ ಜೆಡಿಎಸ್ನ ಹಿಂದಿನ ಆಡಳಿತ ಮರುಕಳಿಸುವ ವಿಶ್ವಾಸ ನನಗಿದೆ ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ ದೇಶಮುಖ ಮಾತನಾಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ 24000 ಕೋಟಿ ಸಾಲ ಮನ್ನಾ ಮಾಡುವ ಮೂಲಕ ಇಡೀ ದೇಶದಲ್ಲೇ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಮತ್ತೇ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಎಲ್ಲ ಮಹಿಳಾ ಸಂಘದವರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಜನಪ್ರೀಯ ಕೆಲಸಗಳನ್ನು ಮನೆಮನೆಗೆ ತಲುಪಿಸಿ ಜೆಡಿಎಸ್ ಅಭ್ಯಥರ್ಿ ಪರ ಮತ ಕೇಳೋಣ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುತ್ತು ಮಾದಿನಾಳ, ಪಕ್ಷದ ಹಿರಿಯ ಮುಖಂಡ ಜಲಾಲ ಮುದ್ನಾಳ, ಅರ್ಷದ್ ಮೋಮೀನ್, ಯಾಸೀನ್ ಅತ್ತಾರ, ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದಶರ್ಿ ಮಾಬುಬ್ಬಿ ಬಾಗವಾನ, ಪ್ರಶಾಂತ ಕಾಳೆ, ನೂರಅಹ್ಮದ್ ಮೇಸ್ತ್ರೀ, ತಾಳಿಕೋಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪ್ರಲ್ಹಾದ ಹಜೇರಿ, ಶರಣಗೌಡ ಬಿರಾದಾರ, ಮುತ್ತು ಮಾದಿನಾಳ, ಮಿಣಜಗಿಯ ಆನಂದ ಬಿರಾದಾರ, ಜೆಡಿಎಸ್ ತಾಲೂಕು ಉಪಾಧ್ಯಕ್ಷ ಶ್ರೀಶೈಲ ಭಿಕ್ಷಾವತಿಮಠ, ಮಹ್ಮದ್ ಹುಣಚಗಿ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ಘಟಕದ ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರು ಸೇರಿ ಹಲವರು ಇದ್ದರು.
ಜೆಡಿಎಸ್ ಸಂಸ್ಥಾಪಕ ಜಯಪ್ರಕಾಶ ನಾರಾಯಣ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಪುಷ್ಪಾರ್ಚನೆ ಮೂಲಕ ಸಮಾರಂಭ ಉದ್ಘಾಟಿಸಲಾಯಿತು. ಡಾ.ಸೋಲಾಪೂರ ಅವರನ್ನು ಮುದ್ದೇಬಿಹಾಳ, ತಾಳಿಕೋಟೆ ಘಟಕಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ಪಕ್ಷದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಕೊಡಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಕಾಶಿನಕುಂಟಿ ನಿರೂಪಿಸಿ ವಂದಿಸಿದರು.