ಇತಿಹಾಸ ಪುಸ್ತಕಗಳ ಲೋಕಾರೆ್ಣ
ಲೋಕದರ್ಶನ ವರದಿ
ಇತಿಹಾಸ ಪುಸ್ತಕಗಳ ಲೋಕಾರೆ್ಣ
ಧಾರವಾಡ 12 : ಇತಿಹಾಸವೆಂದರೆ ಕೇವಲ ಗತಕಾಲದ ಘಟನೆಗಳ ದಾಖಲೆಯಲ್ಲ, ಅದು ವರ್ತಮಾನಕ್ಕೆ ದಾರೀದೀಪವಾಗಿ, ಭವಿಷ್ಯಕ್ಕೆ ಮಾರ್ಗದರ್ಶಕವಾಗುವ ಜ್ಞಾನಸಂಪತ್ತು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತದ ಇತಿಹಾಸ ಮತ್ತು ಶಾಸನವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಹಿರಿಯ ಪ್ರಾಧ್ಯಾಪಕ ಡಾ. ಲೋಕೇಶ ಹೇಳಿದರು. ಅವರು ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ರೋಹಿಣಿ ರಾಚಣ್ಣವರ ಅವರು ರಚಿಸಿರುವ ಮಧ್ಯಯುಗೀನ ಭಾರತದ ಇತಿಹಾಸ ಮತ್ತು ಆಧುನಿಕ ಭಾರತದ ಇತಿಹಾಸ ಎಂಬೆರಡು ಕೃತಿಗಳನ್ನು ಲೋಕಾರೆ್ಣಗೊಳಿಸಿ ಮಾತನಾಡುತ್ತ, ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ, ಆಧಾರಸಹಿತವಾಗಿ ದಾಖಲಿಸುವ ಕಾರ್ಯವು ಸಮಾಜದ ಸಾಂಸ್ಕೃತಿಕ ಸ್ಮೃತಿಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ರೋಹಿಣಿ ರಾಚಣ್ಣವರ ಕೃತಿಗಳು ಇತಿಹಾಸ ಅಧ್ಯಯನ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗಲಿವೆ ಎಂದು ಹೇಳುತ್ತ, ರೋಹಿಣಿ ರಾಚಣ್ಣವರ ಅವರಿಗೆ ಒಳ್ಳೆಯ ಭವಿಷ್ಯವಿದ್ದು, ಸಂಶೋಧನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು. ಲೇಖಕಿ ರೋಹಿಣಿ ರಾಚಣ್ಣವರ ಮಾತನಾಡುತ್ತ, ಇತಿಹಾಸ ಅಧ್ಯಯನದ ಮೂಲಕ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೃತಿಗಳನ್ನು ರಚಿಸಲಾಗಿದ್ದು, ಮರೆವಿನ ಅಂಚಿನಲ್ಲಿರುವ ಚಾರಿತ್ರಿಕ ಸಂಗತಿಗಳನ್ನು ದಾಖಲಿಸಿ, ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ತಮ್ಮ ಬರವಣಿಗೆಯ ಆಶಯವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ. ಅಪಣ್ಣ ಹಂಜೆ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ, ನನ್ನ ವಿದ್ಯಾಗುರು ಡಾ. ಲೋಕೇಶ ಅವರು ನನ್ನ ಸಹೋದ್ಯೋಗಿ ರೋಹಿಣಿ ರಾಚಣ್ಣವರ ಅವರ ಇತಿಹಾಸ ಕೃತಿಗಳನ್ನು ಲೋಕಾರೆ್ಣ ಮಾಡಿರುವುದು ಸ್ಮರಣೀಯ ಸಂದರ್ಭವಾಗಿದ್ದು, ರೋಹಿಣಿ ಅವರು ನಿರಂತರ ಅಧ್ಯಯನಶೀಲರು, ಬಿಡುವಿನ ಸಮಯವನ್ನು ಓದು, ಸಂಶೋಧನೆ, ಚರ್ಚೆ, ಬರವಣಿಗೆಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತ ಸ್ನಾತಕ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ. ಅವರಿಗೆ ಬರವಣಿಗೆಯ ಎಲ್ಲ ಆಯಾಮಗಳೂ ಸಿದ್ಧಿಸಿದ್ದು, ಅವರು ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿಸಿಕೊಂಡು ಸಂಶೋಧನ ಕ್ಷೇತ್ರದಲ್ಲಿ ಮುಂದುವರಿ ಯಬೇಕೆಂದು ಹಾರೈಸಿದರು. ರೋಹಿಣಿ ಅವರ ಸಹೋದ್ಯೋಗಿಗಳಾದ ಡಾ. ಲಕ್ಷ್ಮಣ ಮುಳಗುಂದ, ಡಾ. ಸಾರಿಕಾ ಪಾಟೀಲ, ಡಾ. ಮಂಜುನಾಥ ತ್ಯಾಲಗಡಿ, ಡಾ. ನೇಮಾನಿ ಸತೀಶ, ಮಹಾನಂದಾ ಹಿರೇಮಠ, ಪವಿತ್ರಾ ಬಿ.ಸಿ., ಬಸವರಾಜ ಬಿ., ರಮೇಶ ಹುಲಕುಂದ, ಡಾ. ಶ್ರೀಶವಿಠ್ಠಲ, ಭೀಮೇಶ ಮಾತನಾಡಿ ಶುಭಹಾರೈಸಿದರು. ಕುಮಾರಿ ಬಸಮ್ಮ ಲೆಂಕಣ್ಣವರ ಪ್ರಾರ್ಥನೆ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಶಂಕ್ರ್ಪ ಬಡಿಗೇರ ಗಣ್ಯಮಾನ್ಯರನ್ನು ಸ್ವಾಗತಿಸಿದರು. ಸಾವಿತ್ರಿ ಟಿ. ವಂದನಾರೆ್ಣ ಮಾಡಿದರು. ಬಸವಂತಪ್ಪ ದೊಡ್ಡಮನಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.