ರೋಗಿಯನ್ನು ಗುಣಮುಖ ಮಾಡುವದು ವೈದ್ಯನ ಕರ್ತವ್ಯ: ಡಾ. ಹನುಮಂತಪ್ಪ ಪಿ ಎಚ್
ಶಿಗ್ಗಾವಿ 02: ವೈದ್ಯನಾಗಿ ಉತ್ತಮ ಸೇವೆ ನೀಡಬೇಕಾದರೆ ವೈದ್ಯರ ಸೇವೆ ಪಡೆಯುವವರು ಒಳ್ಳೆಯ ಮನಸ್ಸು ಹೊಂದಿರಬೇಕು, ರೋಗಿಗೆ ವೈದ್ಯರು ನನ್ನನ್ನು ಕಾಳಜಿಯಿಂದ ನೋಡುತ್ತಿದ್ದಾರೆ ಎಂದು ಗೊತ್ತಾಗಬೇಕು ಆಗ ರೋಗಿ ಅರ್ಧಭಾಗ ಗುಣಮುಖನಾಗುತ್ತಾನೆ, ರೋಗಿಯನ್ನು ಗುಣಮುಖ ಮಾಡುವದು ವೈದ್ಯನ ಕರ್ತವ್ಯವಾಗಬೇಕು ಎಂದು ಡಾ. ಹನುಮಂತಪ್ಪ ಪಿ ಎಚ್ ಹೇಳಿದರು.
ಪಟ್ಟಣದ ಫೀನಿಕ್ಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯರಾಗುವದು ಮತ್ತು ಸೇವೆ ನೀಡುವದು ಕಷ್ಟವಾದದ್ದು, ತಾಯಿ ಜನ್ಮ ನೀಡಿದರೆ ವೈದ್ಯರು ಆರೋಗ್ಯ ನೀಡುತ್ತಾರೆ, ಶಿಗ್ಗಾವಿಗೆ ಬಂದು 19 ವರ್ಷ ಸೇವೆ ನೀಡಿದ್ದೆನೆ, ನಾನು ಇಲ್ಲಿಗೆ ಬಂದಾಗ ಚಿಕನ್ ಗುನ್ಯ ಬಂದಿಂತ್ತು ಅದನ್ನು ಸಮರ್ಥವಾಗಿ ನಿಭಾಯಿಸಿದ್ದೆ, ವೈದ್ಯನಾಗುವದು ಪುಣ್ಯ ಕೆಲಸ ಮತ್ತು ಅವರ ಜವಾಬ್ದಾರ ಹೆಚ್ಚಿದೆ ಅವರನ್ನು ಜನತೆ ಉನ್ನತವಾಗಿ ಕಾಣುತ್ತಾರೆ, ಕೋವಿಡ್ನಂತ ಸಮಯದಲ್ಲಿ ಧೈರ್ಯವಾಗಿ ಎಲ್ಲವನ್ನು ನಿಬಾಯಿಸಿದ್ದೆವೆ, ವೈದ್ಯರ ಸಂಘ, ಫೀನಿಕ್ಸ್ ಸಂಸ್ಥೆ ಹಾಗೂ ಪತ್ರಕರ್ತರ ನಮ್ಮ ಜೊತೆ ಸಹಕಾರ ನೀಡಿದ್ದಾರೆ, ಇಲ್ಲಿನ ಜನತೆಯ ಜೊತೆ ಭಾವನಾತ್ಮಕ ಬಾಂಧವ್ಯವಿತ್ತು ಇಂದು ಅಗಲುವುದು ದುಖ:ವಾಗುತ್ತಿದೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಿಸುತ್ತೆನೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ 2019 ರಲ್ಲಿನ ಕೋವಿಡ್ ಪರಿಸ್ಥಿತಿ ಮರೆಯಲಾಗದು, ಅದರ ವಿರುದ್ದ ಈಡಿ ವೈದ್ಯ ಲೋಕವೇ ಸೈನಿಕರಂತೆ ಹೋರಾಡಿದೆ, ಕೋವಿಡ್ ಸಮಯದಲ್ಲಿ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲು ವೈದ್ಯರ ಶ್ರಮ ಇದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಫೀನಿಕ್ಸ ಇಂಟರನ್ಯಾಷನಲ್ ಶಾಲೆಯ ವತಿಯಿಂದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ವೈದ್ಯರ ಸಂಘದ ಅಧ್ಯಕ್ಷ ಡಾ ಪ್ರಶಾಂತ ಕೆ, ಸಂಸ್ಥೆಯ ಅದ್ಯಕ್ಷ ಡಾ ಎಮ್ ಎಮ್ ತಿರ್ಲಾಪೂರ, ಡಾ. ಲಕ್ಷಂಣ ನಾಯಕ, ಡಾ.ಸುಭಾಸ ಲೋಖ್ರೆ, ಡಾ. ವಿವೇಕ ಜೈನಕೇರಿ,ಡಾ ಪ್ರಭು ಪಾಟೀಲ್, ಡಾ ಐಪಿಕೆ ಶೆಟ್ಟರ, ಡಾ ಕುಮಾರಗೌಡ ಪಾಟೀಲ್, ಡಾ ರಾಣಿ ತಿರ್ಲಾಪೂರ, ಡಾ ಚಂದ್ರಿಕಾ ಪಾಟೀಲ್, ಡಾ ನಮೃತಾ, ಲಕ್ಷ್ಮೀಬಾಯಿ ಕಟ್ಟಿ, ಡಾ ಜೋತಿ ಕಂಬಾಳಿಮಠ, ಡಾ ಲಕ್ಷ್ಮಣ ನಾಯಕ ಡಾ ವಿ ಎಸ್ ದಮಾನಿಯವರ, ಡಾ ವಿವೇಕ ಜೈನಕೆರಿ, ಡಾ ಸುಬಾಷ ಲೋಕ್ರೆ, ಪ್ರಾಚಾರ ಮಂಜುನಾಥ ಮತ್ತು ಗೀರಿಶ ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ವಿವಿದ ಗಣ್ಯರು ಉಪಸ್ಥಿತರಿದ್ದರು.