ಬಳ್ಳಾರಿ

ಸ್ವಯಂ ಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯ: ಶಾಸಕ ಜೆ.ಎನ್‌.ಗಣೇಶ್

ಸ್ವಯಂ ಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯ: ಶಾಸಕ ಜೆ.ಎನ್‌.ಗಣೇಶ್

ಕಂಪ್ಲಿ11: ಮಹಿಳೆಯರ ಕೌಶಲ ಅಭಿವೃದ್ಧಿ, ಸದುಪಯೋಗ ಪಡೆಯುವ ಮೂಲಕ  ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು.   

ಪಟ್ಟಣದಲ್ಲಿ ಶುಕ್ರವಾರ ಪವಿತ್ರಾ ಚಾರಿಟಬಲ್ ಟ್ರಸ್ಟ್‌ನಿಂದ ಮೊಸಾಯಿಕ್ ವರ್ಕ್‌ಸ್ಕಿಲ್ ಅಡಿಯಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆಯ ಹೋಲಿಗೆ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಸಿ ಮಾತನಾಡಿ ಸ್ವಯಂ ಉದ್ಯೋಗದಿಂದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಸುಧಾರಿಸಿಕೊಳ್ಳಬಹುದು. ಸಾಂಪ್ರದಾಯಿಕ ಕುಶಲಕರ್ಮಿಗಳು ಹೊಸ ವಿನ್ಯಾಸ ಅಳವಡಿಸಿಕೊಳ್ಳುವ ಮೂಲಕ ವೃತ್ತಿ ನೈಪುಣ್ಯತೆ ಸಾಧಿಸಲು ಅವಕಾಶವಿದೆ. ಮಹಿಳೆಯರು ಸೂಕ್ತ ತರಬೇತಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು ಪವಿತ್ರಾ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ಪವಿತ್ರಾ ಶಿವನಗೌಡ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರ ಕೌಶಲ ಅಭಿವೃದ್ಧಿ, ಜೀವನೋಪಾಯ ಹೆಚ್ಚಿಸಲು ಪಿಎಂ ವಿಶ್ವಕರ್ಮ ಯೋಜನೆ ಮಹತ್ವದ್ದಾಗಿದ್ದು ಸದ್ಭಳಕೆ ಮಾಡಿಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದರು.ನಾಲ್ಕುನೂರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಶಿವನಗೌಡ, ವಿವೇಕಗೌಡ, ಭಟ್ಟ ಪ್ರಸಾದ್, ಸುಧಾಕರ, ಜಾಫರ್, ತರಬೇತುದಾರರಾದ ರಜನಿ, ಸ್ವಾತಿ, ಶೈಲಜಾ, ಉದಯಮೇರಿ, ಇ.ಸ್ವಾತಿ, ಸಾಧಿಕ್ ಬೇಗಮ್, ಬೇಗಮ್, ಪದ್ಮಾವತಿ, ಸುಧಾ, ವನಿತಾ, ಲಾವಣ್ಯ, ಯಲ್ಲಮ್ಮ, ಕವಿತಾ, ವಸಂತ ಸೇರಿ ಇತರರಿದ್ದರು. 


ಸುದ್ದಿ ಓದಿ