ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ: ಬಿರಾದಾರ
ಮುದ್ದೇಬಿಹಾಳ 19: ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಸಹ ಕೊರೋನಾ ಎರಡನೇ ಅಲೆ ಸೃಷ್ಠಿಸಿದೆ ಕಾರಣ ಸಾರ್ವಜನಿಕರು ನಿರ್ಲಕ್ಷ್ಯವಹಿಸದೇ ಅಗತ್ಯ ಸಂಚಾರ ನಿಲ್ಲಿಸಿ ಅತ್ಯಂತ ಜಾಗೃಕತೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಸಿ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಿಪಿಐ ಆನಂದ ವಾಗ್ಮೋರೆ ಹಾಗೂ ಪಿಎಸ್ಐಎಂಎಸ್ ಬಿರಾದಾರ ಹೇಳಿದರು.
ಪಟ್ಟಣದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರವಿವಾರ ಸಂಜೆ ತಾಲೂಕಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೊರೋನಾ ಜನ ಜಾಗೃತಿ ಸಭೆ ನಡೆಸಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಿ ಅರಿವು ಮೂಡಿಸಿ ಮಾತನಾಡಿದರು.
ಸಾರ್ವಜನಿಕರು ಕೊರೋನ ನಮಗೆ ಬಂದಿಲ್ಲ ಎನ್ನುವ ಹುಂಬು ಮನಸ್ಸು ಮಾಡಬಾರದು ಯಾವಗ ಹೇಗೇ ಬೇಕಾದರೂ ಕೊರೋನಾ ತಗುಲಬಹುದಾಗಿದೆ. ಈಗಾಗಲೇ ದೊಡ್ಡ ಪ್ರಮಾಣದ ಎರಡನೇ ಅಲೆ ಪ್ರಾರಂಭಗೊಂಡು ಜನರ ನೆಮ್ಮದಿ ಹಾಳುಗೆಡವುತ್ತಿದೆ. ಇದೊಂದು ಕಣ್ಣಿಗೆ ಕಾಣದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ಮಾರಕ ರೋಗಾಣುವಾಗಿದೆ.
ಕಾರಣ ಸಾರ್ವಜನಿಕರು ಸರಕಾರದ ಮತ್ತು ಆರೋಗ್ಯ ಇಲಾಖೆ ನಿಯಮಗಳನ್ನು ಸಂಪೂರ್ಣ ಪಾಲಿಸಬೇಕು ಹೊರಗಡೆ ಬಂದರೇ ಮಾಸ್ಕ್ ಧರಿಸಿಯೇ ಬರಬೇಕು ಆಗಾಗ ಸ್ಯಾನಿಟೈಜರ ಮೂಲಕ ಕೈಗಳನ್ನು ತೊಳೆದುಕೊಳ್ಳಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ಸರಕಾರದ ನಿಯಮ ಪಾಲಿಸದೇ ಮಾಸ್ಕ್ ಧರಿಸದೇ ಇರುವವರು ಸಂಚಾರದ ವೇಳೆ ಕಂಡುಬಂದರೇ ಅಂತವರ ಮೇಲೇ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದರು.
ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ರವಿ ಲಮಾಣಿ, ಶಾಂತಗೌಡ ಬನ್ನೇಟ್ಟಿ, ಸಲೀಮ ಹತ್ತರಕಿಹಾಳ, ಶಿವುಕುಮಾರ ಮಟ್ಯಾಳ, ಚಿದಾನಂದ ಸುರಗಿಹಳ್ಳಿ, ಮಲ್ಲು ಬೋಳರೆಡ್ಡಿ, ಮೋಲಾಸಾಬ ಮೋಕಾಶಿ, ಶಿವು ಮಾಶೇಟ್ಟಿಇ ಸೇರಿದಂತತೆ ಹಲವರು ಇದ್ದರು.