ದೈನಂದಿನ ಬದುಕಿನಲ್ಲಿ ವಿದ್ಯುತ್ ಇಲ್ಲದೆಯೇ ಬದುಕು ಸಾಗಿಸುವುದು ಕಷ್ಟಕರ: ರಾಜೇಶ್ ಭಾಗೋಜಿ
ಮಹಾಲಿಂಗಪುರ 09: ಆಧುನೀಕರಣದ ಈ ದೈನಂದಿನ ಬದುಕಿನಲ್ಲಿ ವಿದ್ಯುತ್ ಇಲ್ಲದೆಯೇ ಬದುಕು ಸಾಗಿಸುವುದು ಕಷ್ಟಕರವಾಗಿದೆ ಎಂದು ನಗರ ವಿದ್ಯುತ್ ಶಾಖಾಧಿಕಾರಿ ರಾಜೇಶ್ ಭಾಗೋಜಿ ಹೇಳಿದರು.
ಮಂಗಳವಾರ ಮುಂಜಾನೆ ಸ್ಥಳೀಯ ಎಪಿಎಂಸಿ ಗಜಾನನ ಮಂದಿರದ ಆವರಣದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಹಯೋಗದಲ್ಲಿ ಸ್ಥಳೀಯ ಹೆಸ್ಕಾಂ ಹಮ್ಮಿಕ್ಕೊಂಡ 'ವಿದ್ಯುತ್ ವಿತರಣಾ ಮಾಸಾಚರಣೆ ಹಾಗೂ ಸುರಕ್ಷತಾ ಅಭಿಯಾನ' ಅಡಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯುತ್ ಬಳಕೆದಾರರಿಗೆ, ಅವಘಡಗಳಿಂದ ಬಚಾವಾಗಲು ಮತ್ತು ಸುರಕ್ಷಿತ ವಿದ್ಯುತ್ ಬಳಕೆ ಕುರಿತು ಸಲಹೆ ಸೂಚನೆಗಳನ್ನು ನೀಡಿ ಅವರು ಮಾತನಾಡಿದರು.
ವಿದ್ಯುತ್ ಜೊತೆ ಚೆಲ್ಲಾಟ ಬೇಡ: ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟದೆ ಹಾಗೂ ಮರದ ರೆಂಬೆಗಳನ್ನು ಕಡಿಯಲು ಹೆಸ್ಕಾಂನ್ನು ಸಂಪರ್ಕಿಸಿ. ವಿದ್ಯುತ್ ಕಂಬಗಳು ಮತ್ತು ಗೈ ಸೆಟ್ಗಳಿಗೆ ಸಾರ್ವಜನಿಕರು ಬಟ್ಟೆ ಒಣಗಿಸುವ ಮತ್ತು ಪ್ರಾಣಿಗಳನ್ನು ಕಟ್ಟುವುದಾಗಲಿ ಮಾಡಬಾರದು. ತಂತಿ ಬೇಲಿಗಳಿಗೆ ವಿದ್ಯುತ್ ಪ್ರವಹಿಸಬಾರದು. ವಿದ್ಯುತ್ ಮಾರ್ಗಗಳ ಕಡೆಗಳಲ್ಲಿ ಕಿಟಕಿ, ಬಾಲ್ಕನಿಗಳನ್ನು ನಿರ್ಮಿಸದೆ ವಿಧ್ಯುತ್ ಜಾಲದಿಂದ ಸುರಕ್ಷಿತ ಅಂತರವಿರಲಿ. ವದ್ದೆ ಕೈಗಳಿಂದ ಸ್ವಿಚ್ ಗಳನ್ನು ಮುಟ್ಟಬೇಡಿ. ವಿದ್ಯುತ್ ಲೈನ್ ಗಳ ಕೆಳಗೆ ಗಾಳಿ ಪಟ ಹಾರಿಸುವುದು, ಬ್ಯಾನರ್ ಬಂಟಿಂಗ್ಸ್ ಗಳನ್ನು ಕಟ್ಟುವುದಾಗಲಿ ಸಮೀಪದಿಂದ ಲೋಹದ ಸಾಮಾನುಗಳನ್ನು ಸಾಗಿಸುವುದಾಗಲಿ ಮಾಡಬೇಡಿ.ಇದು ಅಮೂಲ್ಯ ಪ್ರಾಣಕ್ಕೆ ಕುತ್ತು ತರಬಹುದು.
ವಿಧ್ಯುತ್ ಅವಘಡಗಳಿಂದ ಸುರಕ್ಷತೆ ಹೊಂದಲು: ಅಂಗೀಕೃತ ರಿಂದ ವೈರಿಂಗ್ ಕೆಲಸ ಮಾಡಿಸಿ.ಐಎ???ಯ್ ಗುಣಮಟ್ಟದ ಸಾಮಗ್ರಿಗಳ ಬಳಕೆ. ಅರ್ಥ ಲೀಕೇಜ್ ಸರ್ಕ್ಯೂಟ್ ಬ್ರೇಕರ್. ಲೂಸ್ ಕನೆಕ್ಷನ್ ತಡೆಗೆ ಫ್ಲಗ್ ಸಾಕೆಟ್, ತ್ರೀ ಪಿನ್ ಮತ್ತು ವೈರ್ ಕಟ್ ಆದ ಕಡೆಗಳಲ್ಲಿ ಇನ್ಸುಲೇಷನ್ ಟೇಪ್ ಬಳಸಬೇಕು. ಮಾನದಂಡದ ಫ್ಯೂಜ್ ವೈರ್ ಇರಲಿ.ಅಕ್ರಮ ವಿಧ್ಯುತ್ ಸಂಪರ್ಕ ಬೇಡ.
ವಿದ್ಯುತ್ ಅವಘಡ ಸಂಭವಿಸಿದಾಗ : ಮನೆ, ಗೋಡೌನ್ ಗಳಿಗೆ ಮತ್ತು ಇತರೆ ವಿಧ್ಯುತ್ ಪ್ರವಸಿದ ವಸ್ತು, ವ್ಯಕ್ತಿಗಳನ್ನು ತಕ್ಷಣ ಮುಟ್ಟಬಾರದು, ಸ್ವಿಚ್ ಆಫ್ ಮಾಡಿ, ತಾವು ಸುರಕ್ಷತೆ ಹೊಂದಿ ಕಾರ್ಯ ಪ್ರವೃತರಾಗಿ, ಪ್ರಥಮ ಚಿಕಿತ್ಸೆ ನೀಡಿ ನಂತರ ವೈದ್ಯಕೀಯ ನೆರವು ಕೊಡಿಸಿ.
ಹೆಸ್ಕಾಂ ಸಲಹೆ : ವಿದ್ಯುತ್ ರಿಪೇರಿ ಕಾಲಕ್ಕೆ ಸರಬರಾಜು ಕಡಿತಗೊಳಿಸಿ. ಕಾಲ ಕಾಲಕ್ಕೆ ಸಲಕರಣೆಗಳ ನಿರ್ವಹಣೆ ಇರಲಿ. ಅನಧಿಕೃತವಾಗಿ ರಿಪೇರಿ ಅಥವಾ ಕಂಬಗಳನ್ನು ಹತ್ತುವುದಾಗಲಿ ಮಾಡಬೇಡಿ. ವಿದ್ಯುತ್ ನಿಂದ ಸಂಭವಿಸುವ ಅವಘಡಗಳಿಗೆ 1912 ಸಂಖ್ಯೆಗೆ ಕರೆ ಮಾಡಿ ಅಹಿತಕರ ಘಟನೆಗಳನ್ನು ತಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ನಗರ ಶಾಖಾಧಿಕಾರಿ ರಾಜೇಶ್ ಭಾಗೋಜಿ, ಪವರ್ ಮ್ಯಾನ್ ಗಳಾದ ಕ್ರಿಷ್ಣಾ ಡೊಂಬರ, ಪರಶುರಾಮ ಛಲವಾದಿ, ಸಂತೋಷ ಕುಟಗೋಳಿ, ಸಂತೋಷ ಆರಿ, ವಿಶ್ವನಾಥ್ ಸಕ್ಕರೆಪ್ಪಗೋಳ, ಮಹಾಂತೇಶ ಯರಗಟ್ಟಿ, ಹಣ್ಮಂತ ತೇಲಿ, ಕಿರಣ ಬಿರಾಜನವರ ಮುಂತಾದವರಿದ್ದರು.