ನಕಲಿ ಛಾಪಾ ಕಾಗದ ಆಯ್ತು ಈಗ ನಕಲಿ ಸರಕಾರಿ ನೌಕರಿ ಆದೇಶ ಪತ್ರ ತಯಾರಿಕೆ ಪತ್ತೆ, ಕೇಸು ದಾಖಲು

ನಕಲಿ ಛಾಪಾ ಕಾಗದ ಆಯ್ತು ಈಗ ನಕಲಿ ಸರಕಾರಿ ನೌಕರಿ ಆದೇಶ ಪತ್ರ ತಯಾರಿಕೆ ಪತ್ತೆ, ಕೇಸು ದಾಖಲು
It became a fake printing paper and now the production of fake government job order letter has been

ಬೆಳಗಾವಿ : ನಕಲಿ ಛಾಪಾ ಕಾಗದ ತಯಾರಿಕೆಯಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿಯೇ ಸದ್ದು ಮಾಡಿದ್ದ ಖಾನಾಪುರ ತಾಲೂಕಿನಲ್ಲಿ ಈಗ ಹಣಕ್ಕಾಗಿ ನಕಲಿ ಸರಕಾರಿ ನೌಕರಿಯ ಆದೇಶ ಪ್ರತಿ ತಯಾರಿಸಿ ವಂಚಿಸುತ್ತಿದ್ದ ಪ್ರಕರಣ ಒಂದು ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. 

    ನಕಲಿ ಛಾಪಾ ಕಾಗದ ತಯಾರಿಕೆಯಲ್ಲಿ ಇಡಿ ದೇಶವೇ ನೋಡುವ ಹಾಗೆ ಆಗಿದ್ದ ಖಾನಾಪುರ ತಾಲೂಕಿನಲ್ಲಿ ಈಗ ನಕಲಿ ಸರಕಾರಿ ನೌಕರಿಯ ಆದೇಶ ಪ್ರತಿಯನ್ನು ತಯಾರಿಸಿ ಅಂಗವಾಡಿ ಕಾರ್ಯಕರ್ತೆಯರ ಸ್ಥಾನಕ್ಕಾಗಿ ಮಹಿಳೆಯರಿಂದ ಹಣ ಪಡೆದು ನಕಲಿ ಸರಕಾರಿ ನೌಕರಿ ಆದೇಶ ನೀಡಲಾಗಿತ್ತು.

    ಖಾನಾಪುರ ನಗರ ಸೇರಿದಂತೆ ತಾಲೂಕಿನ ಹಲವಾರು ಮಹಿಳೆರಿಂದ ಹಣ ಪಡೆದು ಸರಕಾರಿ ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸುತ್ತಿದ್ದ ಆಕಾಶ ಅಥಣಿಕರ ಎಂಬಾತನ ಮೇಲೆ ಈಗ ಸದ್ಯ ಖಾನಾಪೂರ ಪೊಲೀಸ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಸುದ್ದಿ ಓದಿ