ಮಹಲಿಂಗಪುರ

ಮಹಾಲಿಂಗಪುರ ಪಟ್ಟಣಕ್ಕೆ ಸಚಿವ ಕೆ.ಎಸ್‌. ಈಶ್ವರ​‍್ಪ ಆಕಸ್ಮಿಕ ಭೇಟಿ, ಗಣ್ಯರಿಂದ ಸನ್ಮಾನ

ಮಹಾಲಿಂಗಪುರ ಪಟ್ಟಣಕ್ಕೆ ಸಚಿವ ಕೆ.ಎಸ್‌. ಈಶ್ವರ​‍್ಪ ಆಕಸ್ಮಿಕ ಭೇಟಿ, ಗಣ್ಯರಿಂದ ಸನ್ಮಾನ

ಮಹಾಲಿಂಗಪುರ04:  ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವ ಕೆ. ಎಸ್‌. ಈಶ್ವರ​‍್ಪ ಅವರು ಶುಕ್ರವಾರ ಪಟ್ಟಣದ ಜಿಎಲ್ ಬಿಸಿ ಅತಿಥಿ ಗೃಹಕ್ಕೆ ಆಕಸ್ಮಿಕ ಭೇಟಿ ನೀಡಿದ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಭಾಜಪ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಊರಿನ ಗಣ್ಯರು ಸನ್ಮಾನಿಸಿ ಗೌರವಿಸಿದರು. 

ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಜಗದಾಳ ಗ್ರಾಮದ ಪಂಚಾಯತ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವ ಕೆ.ಎಸ್‌. ಈಶ್ವರ​‍್ಪ ಅವಸರದಲ್ಲಿ ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರಿಸದೆ ಪ್ರಯಾಣ ಬೆಳೆಸಿದರು. 

ಎಂ. ಐ. ಕೋಳಿಗುಡ್ಡ, ಅಶೋಕ ಅಂಗಡಿ, ಎಂ. ಸಿ. ಬಂಡಿ, ಜಿ. ಎಸ್‌. ಗೊಂಬಿ, ಹಣಮಂತ ಜಮಾದಾರ, ಶ್ರೀಮಂತ ಹಳ್ಳಿ, ಮಹಾಲಿಂಗ ಕುಳ್ಳೊಳ್ಳಿ, ಪುರಸಭೆ ಸದಸ್ಯರಾದ ರಾಜು ಚಮಕೇರಿ, ಚನಬಸು ಯರಗಟ್ಟಿ ಹಾಗೂ ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಸಜನಸಾಬ ಪೆಂಡಾರಿ ಮತ್ತು ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ವಿರೂಪಾಕ್ಷ ಉಳ್ಳಾಗಡ್ಡಿ, ತಿಪ್ಪಣ್ಣ ಬಂಡಿವಡ್ಡರ, ಪ್ರಶಾಂತ ನಡುವಿನಮನಿ, ಬಸವರಾಜ ಮಡಿವಾಳ ಇನ್ನೂ ಹಲವಾರು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. 

ಸುದ್ದಿ ಓದಿ