ಹಗರಿಬೊಮ್ಮನಹಳ್ಳಿ

ಕಳ್ಳತನದಲ್ಲಿ ಭಾಗಿ: ವಾಸ ಸ್ಥಳ ಪರೀಶೀಲಿಸುವಂತೆ ಮನವಿ

ಕಳ್ಳತನದಲ್ಲಿ ಭಾಗಿ: ವಾಸ ಸ್ಥಳ ಪರೀಶೀಲಿಸುವಂತೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ  04: ದಿನ ಪತ್ರಿಕೆಗಳಲ್ಲಿ ಅ.31 ರಂದು ತಮ್ಮ ಇಲಾಖೆಯಿಂದ ಪ್ರಕಟಗೊಂಡಿರುವ ಕಳ್ಳತನದ ಹಾಗೂ ದರೋಡೆಗೆ ಸಂಬಂಧಿಸಿದ ಆರೋಪಿಗಳಾದ ರಮೇಶ, ಚಂದ್ರ​‍್ಪ, ಇಂದ್ರ, ಭೀಮ ಈ ವ್ಯಕ್ತಿಗಳ ಹಗರಿಬೊಮ್ಮನಹಳ್ಳಿ ತಾಲೂಕು ಸೇರಿದಂತೆ ಹಲವೆಡೆ ರಾಬರಿ, ದರೋಡೆ, ಕಳ್ಳತನದಂತಹ ಕೆಲಸಗಳನ್ನು ಮಾಡಿ ಸಿಕ್ಕಿಬಿದ್ದಿರುತ್ತಾರೆ. ಈ ನಾಲ್ವರ ಪೈಕಿ ಒಬ್ಬ “ರಮೇಶ” ಎನ್ನುವ ವ್ಯಕ್ತಿಯನ್ನೂ ಸಹ ಬಂದಿಸಿದ್ದು ಇವನ ವಾಸ ಸ್ಥಳವನ್ನು ಹಗರಿಬೊಮ್ಮನಹಳ್ಳಿಯ 23ನೇ ವಾರ್ಡ್‌ನ ಕುರದಗಡ್ಡಿ ಏರಿಯಾ ಎಂದು ಪತ್ರಿಕೆಗಳಲ್ಲಿ ನಿಮ್ಮ ಇಲಾಖೆಯಿಂದ ನಮೂದಿಸಿ ಪ್ರಕಟಿಸಿರುತ್ತೀರಿ ಇದು ಸತ್ಯಕ್ಕೆ ದೂರವಾಗಿದ್ದು, ಕೂಲಂಕುಷವಾಗಿ ಇದನ್ನು ಪರಿಶಿಲಿಸಬೇಕು ಎಂದು ಕುರದಗಡ್ಡಿ ದೈವಸ್ಥರಾದ ಎ.ಕೆ.ರಾಮಣ್ಣ ಹಾಗೂ ಕುರದಗಡ್ಡಿ ಯುವಶಕ್ತಿ ವೇದಿಕೆಯ ವೆಂಕಟೇಶ್ ಎ.ಪಿ. ಹೇಳಿದರು.  

 “ರಮೇಶ” ಎನ್ನುವ ವ್ಯಕ್ತಿಯು ಮೂಲತಃ ನಮ್ಮ ಗ್ರಾಮದವನೂ ಅಲ್ಲ ಮತ್ತು ಇಲ್ಲಿಯರೆಗೂ ಅವನು ಇಲ್ಲಿ ವಾಸವೂ ಇರುವುದಿಲ್ಲ. ಇವರ ಸಂಬಂದಿಕರೊಬ್ಬರು ಇತ್ತೀಚಿಗೆ ಬಾಡಿಗೆಗೆಂದು ಬಂದು ವಾಸವಾಗಿದ್ದು, ಇವನು ನಾಲ್ಕುದಿನಗಳ ಮಟ್ಟಿಗೆ ಸಂಬಂಧಿಕರ ಮನೆಗೆ ಉಳಿದುಕೊಳ್ಳಲು ಬಂದಿದ್ದಾಗ ತಮ್ಮ ಪೊಲೀಸ್ ಇಲಾಖೆಯವರು ಬಂದು ಅವನನ್ನು ಬಂಧಿಸಿರುವುದು ತಿಳಿದುಬಂದಿರುತ್ತದೆ. ಆದ ಕಾರಣ ಈ ಪ್ರಕರಣದಲ್ಲಿ ವಿನಾಕಾರಣ ನಮ್ಮ ಪಟ್ಟಣದ ರಾಮನಗರದ ಕುರದಗಡ್ಡಿ ಹೆಸರನ್ನು ನಮೂದಿಸಿ ತಾಲೂಕಿನಾಧ್ಯಂತ ನಮ್ಮ ಗ್ರಾಮಕ್ಕೆ ಕೆಟ್ಟಹೆಸರು ಬರುವಂತಾಗಿದೆ ದಯಮಾಡಿ ಈ ಕುರಿತು ಇಲಾಖೆಯು ಮೇಲಾಧಿಕಾರಿಗಳಿಗೆ ಈ ಕುರಿತು ಸ್ಪಷ್ಟನೆ ನೀಡಬೇಕು. ಅಲ್ಲದೇ ಮತ್ತೊಮ್ಮೆ ಎಲ್ಲಾ ಪತ್ರಿಕೆಗಳಿಗೂ ಸುದ್ದಿಗೋಷ್ಠಿ ಮೂಲಕ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು. ಇದುವರೆಗೂ ಯಾವುದೇ ರೀತಿಯ ಕಾನೂನು ಬಾಹೀರ ಚಟುವಟಿಕೆಯಲ್ಲಿ ಪಾಲ್ಗೊಳ್ಳದ ನಮ್ಮ ಕುರದಗಡ್ಡಿ ಗ್ರಾಮದ ಹೆಸರಿಗೆ ಬಂದಿರುವ ಕಳಂಕವನ್ನು ತೆಗೆದುಹಾಕಬೇಕೆಂದು ಈ ಮೂಲಕ ಸಮಸ್ತ ಗ್ರಾಮದ ದೈವಸ್ತರು ಮತ್ತು ಕುರದಗಡ್ಡಿ ಯುವಶಕ್ತಿ ವೇದಿಕೆ ತಮ್ಮ ಇಲಾಖೆಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.  

ಮನವಿ ಸ್ವೀಕರಿಸಿ ಮಾತನಾಡಿದ ಪಿ.ಎಸ್‌.ಐ ಶ್ರೀಮತಿ ಸರಳ ಮಾತನಾಡಿ ಈ ಪ್ರಕರಣದಲ್ಲಿ ರಮೇಶ್ ಎಂಬ ಆರೋಪಿಯನ್ನು ಕುರದಗಡ್ಡಿಯ ಅವರ ಸಂಬಂಧಿಕರ ಮನೆಯಲ್ಲಿ ಬಂದಿಸಿದ್ದರಿಂದ ಗ್ರಾಮದ ಹೆಸರನ್ನು ಹೇಳಲಾಗಿತ್ತು ಈ ಒಂದು ಸಣ್ಣ ಅಚಾತುರ್ಯದಿಂದ ಹಿಗಾಗಿದೆ. ಆದ್ದರಿಂದ ಆರೋಪಿಗೂ ಈ ಗ್ರಾಮಕ್ಕೂ ಯಾವುದೇ ಸಂಬಂಧವಿಲ್ಲ ಆದಷ್ಟು ಬೇಗನೆ ಮೇಲಾಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸದ್ಯದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.  

ಈ ಸಂದರ್ಭದಲ್ಲಿ ನಾಗಪ್ಪ, ಮಂಜಪ್ಪ, ಕೊಟ್ರೇಶ್, ವೀರೇಶ್, ಕೃಷ್ಣಮೂರ್ತಿ, ಸೋಮಪ್ಪ, ಗಾಳೆಪ್ಪ, ಹರೀಶ್, ಮಂಜುನಾಥ, ಹನುಮಂತ ಸೇರಿದಂತೆ ಕುರದಗಡ್ಡಿ ಗ್ರಾಮದ ದೈವಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ