ನೇಕಾರರಿಗೆ ಸರ್ಕಾರದಿಂದ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ
ನೇಕಾರ ಬಾಂಧವರು ಸದುಪಯೋಗ ಪಡೆದುಕೊಳ್ಳಲು ಶಿವಲಿಂಗ್ ಟಿರಕಿ ಕರೆ.
ಮಹಾಲಿಂಗಪುರ 03: ಇದೀಗ ವಿದ್ಯುತ್ ಚಾಲಿತ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಪರಿಹಾರ ಧನ ಪಡೆಯಲು ಇಲಾಖೆಯ ಮೂಲಕ ಅರ್ಜಿ ಕರೆದಿದ್ದು ನೇಕಾರ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ್ ಟಿರಕಿ ತಿಳಿಸಿದ್ದಾರೆ.
ರಾಜ್ಯದ ವೃತ್ತಿಪರ ನೇಕಾರರಿಗೆ ಕೊನೆಗೂ ಸರ್ಕಾರ ಎರಡನೆಯ ಅಲೆಯ ಪರಿಹಾರವನ್ನು ಘೋಷಣೆ ಮಾಡಿರುವುದಕ್ಕೆ ಸಂಘದ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಿದ್ದ ಅವರು, ಸರ್ಕಾರ ನೇಕಾರ ಸಮ್ಮಾನ ಯೋಜನೆಯನ್ನು ಜಾರಿಗೆ ತಂದು ಪ್ರತಿವರ್ಷ 54ಸಾವಿರ ಕೈಮಗ್ಗ ನೇಕಾರರಿಗೆ 2ಸಾವಿರ ರೂಗಳನ್ನು ಮಾತ್ರ ಕೊಡುವುದಾಗಿ ಹೇಳಿ, ವಿದ್ಯುತ್ ಚಾಲಿತ ಮಗ್ಗದವರಿಗೆ ಅನ್ಯಾಯ ಮಾಡಿದೆ. ಕೈಮಗ್ಗ ನೇಕಾರರಿಗೆ ಇದರ ಜೊತೆಗೆ ಕೋವಿಡ್ ಪರಿಹಾರವನ್ನೂ ನೀಡದೆ ತಾರಾತಮ್ಯ ಕೂಡ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಕೈಮಗ್ಗದ ನೇಕಾರರು ಉದ್ಯೋಗವಿಲ್ಲದೆ ಕಂಗಾಲಾಗಿ ಸಾಲದ ಬಾಧೆಯಿಂದ ಸಾಕಷ್ಟು ತೊಂದರೆಗೀಡಾಗಿ ಆತ್ಮಹತ್ಯೆ ಅಂತಹ ಕೃತ್ಯಗಳಿಗೆ ಈಡಾಗುತ್ತಿದ್ದಾರೆ. ಯಜಮಾನನಿಲ್ಲದ ಪರಿವಾರ ಸಂಕಷ್ಟಕ್ಕೆ ಒಳಗಾಗಿ ಬೀದಿಗೆ ಬಿದ್ದಿವೆ. ಇದು ಎಲ್ಲ ವಿಧ ನೇಕಾರರ ಸ್ಥಿತಿಯೂ ಆಗಿದೆ, ಕಾರಣ ಎಲ್ಲ ನೇಕಾರರನ್ನು ಸಮ್ಮಾನ ಯೋಜನೆ ಅಡಿಗೆ ( ಮಗ್ಗ ಹಾಗೂ ಮಗ್ಗ ಪೂರ್ವ ಒಟ್ಟು ಇಬ್ಬರಿಗೆ) ಸೇರೆ್ಡ ಮಾಡಿ ಸರ್ಕಾರ ಅವರ ಸರಳ ಬದುಕಿಗೆ ಸಹಕಾರಿಯಾಗಬೇಕು ಎಂದರು.
ಸರ್ಕಾರಗಳು ಈ ತಾರತಮ್ಯ ನೀತಿ ಬಿಟ್ಟು ರೈತರಂತೆ ಕೆಂದ್ರ ಸರ್ಕಾರ ಆರು ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರ ನಾಲ್ಕು ಸಾವಿರ ರೂಪಾಯಿಗಳನ್ನು ನೇಕಾರರಿಗೆ ಕೊಡುವ ಮೂಲಕ ರೈತ ಮತ್ತು ನೇಕಾರರು ಒಂದೇ ಎನ್ನುವ ಮಾತಿನಂತೆ ನೇಕಾರ ಸಮ್ಮಾನ ಯೋಜನೆಯಲ್ಲಿ ಕನಿಷ್ಟ ವಾರ್ಷಿಕ ಹತ್ತು ಸಾವಿರ ರೂಪಾಯಿಗಳನ್ನು ತಕ್ಷಣವೇ ವಿತರಿಸುವಂತೆಯೂ ಕ್ರಮ ಕೈಗೊಂಡು ರಾಜ್ಯದಲ್ಲಿರುವ ಕಟ್ಟಕಡೆಯ ವೃತ್ತಿಪರ ನೇಕಾರರಿಗೆ ಸರ್ಕಾರದಿಂದ ಪರಿಹಾರ ಸಿಗುವಂತಾಗಬೇಕೆಂದು ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ರದ್ದುಗೊಳಿಸಿ ಎಲ್ಲ ನೇಕಾರರ ಅರ್ಜಿಗಳು ಸಮಾಪ್ತಿಗೊಳ್ಳುವವರೆಗೆ ಮುಂದುವರಿಸಲು