ಹಟಗಾರ ಪೀಠಾರೋಹಣಕ್ಕೆ ಮುಖ್ಯಮಂತ್ರಿಗೆ ಆಮಂತ್ರಣ
ಮಹಾಲಿಂಗಪುರ : ಫೆ. 3 ರಂದು ಜರುಗಲಿರುವ ಹಟಗಾರ ಸಮಾಜದ ಜಗದ್ಗುರು ಚಿಕ್ಕ ರೇವಣಸಿದ್ಧ ಶ್ರೀಗಳ ಪೀಠಾರೋಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಮಂತ್ರಿಸಲಾಯಿತು.
ಸಮೀಪದ ಬನಹಟ್ಟಿಯಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಆಗಮಿಸಲು ಕೋರಿ ಸ್ಥಳೀಯ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಭೇಟಿಯಾಗಿ ಆಮಂತ್ರಣ ನೀಡಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹಾಗೂ ಸಮಾಜದ ಮುಖಂಡರಾದ ಲಕ್ಕಪ್ಪ ಚಮಕೇರಿ, ಜಿ.ಎಸ್.ಗೊಂಬಿ, ಮಲ್ಲಪ್ಪ ಬಾವಿಕಟ್ಟಿ, ರಾಜೇಂದ್ರ ಅಂಬಲಿ, ಶಂಕರ ಜುಂಜಪ್ಪನವರ, ಮಲ್ಲಿಕಾರ್ಜುನ ಬಾಣಕಾರ, ಶಂಕರ ಸೋರಗಾಂವಿ, ಶ್ರೀಶೈಲ ಬೀಳಗಿ, ರಾಜೇಂದ್ರ ಭದ್ರಣ್ಣವರ,ಪ್ರವೀಣ ದಬಾಡಿ ಮುಂತಾದವರಿದ್ದರು