ಮಹಲಿಂಗಪುರ

ಓದು ಕರ್ನಾಟಕ ಕಿಟ್ ಪರಿಚಯ ತರಬೇತಿ ಶಿಬಿರ

ಓದು ಕರ್ನಾಟಕ  ಕಿಟ್ ಪರಿಚಯ ತರಬೇತಿ ಶಿಬಿರ

ಮಹಾಲಿಂಗಪುರ 29: ಓದು ಕರ್ನಾಟಕ ಒಂದು ವಿಶಿಷ್ಟ ಕಾರ್ಯಕ್ರಮ ಕಳೆದೆರಡು ವರ್ಷಗಳಲ್ಲಿ ಕೋವಿಡ್‌-19 ಮಹಾಮಾರಿಯಿಂದ ಉಂಟಾದ ಕಲಿಕಾ ಅಂತರವನ್ನು ನಿವಾರಿಸಿ, ಬುನಾದಿ ಸಾಮರ್ಥ್ಯಗಳಾದ ಓದು-ಬರಹ ಹಾಗೂ ಸಂಖ್ಯಾ ಸಾಮರ್ಥ್ಯಗಳ ಕಲಿಕೆಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಸಿ.ಆರ್‌.ಪಿ ಎಸ್‌.ಎನ್‌.ಬ್ಯಾಳಿ ಹೇಳಿದರು. 

ಜನವರಿ 28ರಂದು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯುಆರ್‌ಸಿ, ಕೆಜಿಎಸ್ ಮತ್ತು ಎಂಪಿಎಸ್ ಮಹಾಲಿಂಗಪುರ ಹಾಗೂ ಮದಭಾವಿ, ಸೈದಾಪುರ ಕ್ಲಸ್ಟರ್ ಗಳ 4 ಮತ್ತು 5ನೇ ತರಗತಿ ಬೋಧಿಸುವ ಶಿಕ್ಷಕರಿಗೆ  ‘ಓದು ಕರ್ನಾಟಕ‘ ಕಿಟ್ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. 

ತರಬೇತಿಯಲ್ಲಿ ಸಿಆರ್‌ಪಿ ವಾಯ್‌.ಎಸ್‌.ಲಮಾನಿ, ಎಲ್‌.ಎ. ಬಿಸರಡ್ಡಿ, ಟಿ.ಎಂ.ನಾಯಕವಾಡಿ, ಕ್ಲಸ್ಟರ್‌ಗಳ ಮುಖ್ಯ ಗುರುಗಳು, ಶಿಕ್ಷಕರು ಹಾಜರಿದ್ದರು. 


ಸುದ್ದಿ ಓದಿ