ಅಂತರರಾಜ್ಯ ಕಳ್ಳರ ಬಂಧನ : 55.60 ಲಕ್ಷ ಮೌಲ್ಯದ 810 ಗ್ರಾಂ ಚಿನ್ನ, 8.5 ಕೆಜಿ ಬೆಳ್ಳಿ ವಶ : ಗೋಕಾಕ ಪೊಲೀಸರ ಕಾರ್ಯಾಚರಣೆ
ಬೆಳಗಾವಿ : ಜಿಲ್ಲೆಯ ಗೋಕಾಕ ತಾಲುಕಿನಲ್ಲಿ ನಡೆದ ಮನೆ ಹಾಗೂ ದೇವಸ್ಥಾನದ ಕಳ್ಳತನ ಮಾಡಿದ್ದ 8 ಆರೋಪಿತರನ್ನು ಖೇಡ್ಡಾಗೆ ಬಿಳಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿಯಾಗಿದ್ದು, ಬಂಧಿರನಿಂದ 55.60 ಲಕ್ಷ ಮೌಲ್ಯದ 810 ಗ್ರಾಂ ಚಿನ್ನಾಭರಣ ಹಾಗೂ 8.5 ಕೆಜಿ ತೂಕದ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಕಳೆದ ದಿ. 11-11-2022ರಂದು ಗೋಕಾಕದ ವಿವೇಕಾನಂದ ನಗರದ ಪ್ರಕಾಶ ಲಕ್ಷಣ ತೋಳಿನವರ ಇವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಅಲ್ಲದೇ ದಿ. 23-5-2023 ರಂದು ತವಗದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು.
ಇವೇರಡು ಕಳ್ಳತನ ಪ್ರಕರಣದ ಬಗ್ಗೆ ಗೋಕಾಕ .ಶಹರ ಮತ್ತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಈ ಪ್ರಕರಣಗಳ ಪತ್ತೆಗಾಗಿ ಗೋಕಾಕ ಸಿಪಿಐ ಗೋಪಾಲ ರಾಠೋಡ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.
ಈ ತನಿಖಾ ತಂಡವು ಹೆಚ್ಚುವರಿ ಎಸ್.ಪಿ ಎಂ.ವೇಣುಗೋಪಾಲ ಹಾಗೂ ಡಿಎಸ್ ಪಿ ದೂದಪೀರ್ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣಗಳಲ್ಲಿ ತನಿಖೆ ನಡೆಸಿ ದಿ. 30 ರಿಂದ ದಿ. 24-07-2023 ರ ವರೆಗೆ 8 ಜನ ಆರೋಪಿತರನ್ನು ಬಂಧಿಸಿ, ಕಳುವಾಗಿದ್ದ 55,60,000 ರೂ ಮೌಲ್ಯದ 810 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 8.5 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಗೋಪಾಲ ರಾಠೋಡ, ಬೆಳಗಾವಿ ಸಿ.ಇ.ಎನ್. ಸಿ.ಪಿ.ಐ ಬಿ.ಆರ್.ಗಡೇಕರ, ಹುಕ್ಕೇರಿ ಪಿಐ ಆರ್.ಎಮ್.ತಹಶೀಲ್ದಾರ, ಗೋಕಾಕ ಪಿಎಸ್ ಐಗಳಾದ ಕಿರಣ ಮೋಹಿತ, ಎಮ್.ಡಿ.ಘೋರಿ ಹಾಗೂ ಅಂಕಲಗಿ ಪಿಎಸ್ ಐ. ಎಚ್.ಡಿ.ಯರಝರ್ವಿ ಮತ್ತು ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ವಿ.ಆರ್.ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಬಿ.ಮಾನಪ್ಪಗೋಳ, ಎಸ್.ಎಚ್.ಈರಗಾರ, ಎಮ್.ಬಿ.ಗಿಡಗಿರಿ, ಎಮ್.ಎಮ್.ಹಾಲೋಳ್ಳಿ, ಎಸ್.ಎಸ್.ದೇವರ, ಜಿ.ಎಚ್.ಗುಡಿ, ಎಮ್.ಬಿ.ತಳವಾರ, ಎಸ್.ಬಿ.ಪೂಜೇರಿ,ಹಾಗೂ ಶ್ರೀಮತಿ ಆರ್.ಎಮ್.ತುಬಾಕಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗದಸಚಿನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಎಸ್.ಪಿ. ಡಾ. ಸಂಜೀವ ಪಾಟೀಲ ಅವರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ.