ಅಂತರಾಷ್ಟಿಯ ವಿಮಾನ ನಿಲ್ದಾಣ ದರ್ಜೆ : ಬೆಳಗಾವಿಗೆ ಮಲತಾಯಿ ಧೋರಣೆ, ರಾಜ್ಯದ ಹೆಬ್ಬಾಗಿಲಿಗೆ ಅನ್ಯಾಯ

ಅಂತರಾಷ್ಟಿಯ ವಿಮಾನ ನಿಲ್ದಾಣ ದರ್ಜೆ :  ಬೆಳಗಾವಿಗೆ ಮಲತಾಯಿ ಧೋರಣೆ, ರಾಜ್ಯದ ಹೆಬ್ಬಾಗಿಲಿಗೆ ಅನ್ಯಾಯ
International airport rating: Stepmotherly attitude towards Belgaum, injustice to the state's gatewa

 ಪಾರೇಶ ಭೋಸಲೆ 

ಬೆಳಗಾವಿ : ಬೆಂಗಳೂರು ಹೊರತುಪಡಿಸಿ ಅತಿವೇಗವಾಗಿ ಬೆಳೆಯುತ್ತಿರುವ ಹಾಗೂ ಎರಡನೇ ರಾಜಧಾನಿಯ ಸ್ಥಾನದಲ್ಲಿರುವ ಗಡಿ ಜಿಲ್ಲೆ ಬೆಳಗಾವಿಯು ಗೋವಾ, ಮಹಾರಾಷ್ಟç ಸೇರಿದಂತೆ ದಕ್ಷಿಣ ಭಾರತ ಸಂಪರ್ಕಕೊAಡಿಯಾಗಿದ್ದು, ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಬೆಳಗಾವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಂಚಿತವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ ಕೂಡಾ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಕೊಂಡೊಯುತ್ತಿದ್ದು, ಸರಕಾರ ಈ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ. 

      ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಎರಡನೇ ರಾಜಧಾನಿ ಸ್ಥಾನದಲ್ಲಿರುವ ಬೆಳಗಾವಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡದೆ ಬೆಂಗಳೂರಲ್ಲಿ ಸದ್ಯ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದ್ದರೂ ಕೂಡಾ ಬೆಂಗಳೂರಿಗೆ ಮತ್ತೊಂದು ಬೇಕಿತ್ತಾ ಎನ್ನುವ ಪ್ರಶ್ನೆ ಈ ಭಾಗದ ನಾಗರಿಕರಲ್ಲಿ ಮನೆಮಾಡಿದ್ದು, ಸರಕಾರ ಪ್ರತಿ ವಿಷಯದಲ್ಲು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.

     ಬೆಳಗಾವಿ ಜಿಲ್ಲೆಯು ಕರ್ನಾಟಕದ ಹೆಬ್ಬಾಗಿಲು ಆಗಿದ್ದು, ಗೋವಾ ಮತ್ತು ಮಹಾರಾಷ್ಟöç ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತಿದೆ. ಅದೇ ರೀತಿಯಾಗಿ ಇಲ್ಲಿ, ಸುವರ್ಣ ವಿಧಾನ ಸೌಧ, ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಗಳು, ಪ್ರವಾಸಿ ತಾಣಗಳು, ವಿದೇಶಿ ವಿವಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಕೆಎಲ್‌ಇ ಸಂಸ್ಥೆ, ರೈಲು ನಿಲ್ದಾಣ, ಹೀಗೆ ಹತ್ತು ಹಲವಾರು ಸೌಕರ್ಯಗಳನ್ನು ಹೊಂದಿರುವ ಬೆಳಗಾವಿ ಯಾವುದರಲ್ಲಿಯೂ ಕಮ್ಮಿ ಇಲ್ಲ ಅನ್ನುವದನ್ನು ಸಾಬೀತು ಮಾಡಿದೆ.  

    ಈ ಭಾಗದಿಂದ ದಿನನಿತ್ಯ ಹಲವಾರು ಜನರು ವಿದೇಶಗಳಿಗೆ ತೆರಳುತ್ತಾರೆ. ಆದರೆ ಈ ಭಾಗದ ಜನರು ವಿದೇಶಗಳಿಗೆ ತೆರಳಬೇಕಾದರೆ ಬೆಳಗಾವಿಯಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರು ಅಥವಾ ನೆರೆಯ ರಾಜ್ಯ ಗೋವಾಕ್ಕೆ ಸುಮಾರು 250ರಿಂದ 300 ಕಿಲೋ ಮೀಟರ್ ಸಂಚರಿಸಿ ವಿದೇಶಕ್ಕೆ ತೆರಳುವ ಅನಿವಾರ್ಯತೆ ಈ ಭಾಗದ ಜನರಿಗಿದೆ. ಈಗಾಗಲೇ ಬೆಳಗಾವಿಯಿಂದ ರಾಜ್ಯ ರಾಜಧಾನಿ ಬೆಂಗಳೂರು ದೇಶದ ರಾಜಧಾನಿ ದೆಹಲಿ ಸೇರಿದಂತೆ ಗೋವಾ, ತಮಿಳನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ವಿಮಾನ ಸೇವೆ ಪ್ರಾರಂಭ ಇದ್ದು, ಈ ಸೇವೆಯಲ್ಲಿ ಹೊರದೇಶಗಳಿಗೂ ವಿಸ್ತರಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿ ಕೊಡಬೇಕಾದ ಕರ್ತವ್ಯ ಸರಕಾರದ್ದಾಗಿದೆ.

ಆದರೆ ಸರಕಾರ ಮಾತ್ರ ಬೆಂಗಳೂರಲ್ಲಿ ಈಗಾಗಲೆ ದೇವನಹಳ್ಳಿ ವಿಮಾನ ನಿಲ್ದಾಣವನ್ನು ಹೊಂದಿದ್ದರೂ ಉತ್ತರ ಕರ್ನಾಟಕ ಭಾಗಕ್ಕೆ ಅಂತರಾಷ್ಟಿçÃಯ ವಿಮಾನ ನಿಲ್ದಾಣವನ್ನು ನೀಡದೆ ಈ ಭಾಗಕ್ಕೆ ಮಲತಾಯಿ ಧೋರಣೆಯನ್ನು ಮುಂದುವರೆಸಿದ್ದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಆದರೆ ಸರಕಾರ ಮಾತ್ರ ಈ ಭಾಗದ ಕಡೆಗಣನೆ ಮಾಡಿದ್ದು, ಮತ್ತೊಂದು ಅಂತರರಾಷ್ಟಿöçÃಯ ವಿಮಾನ ನಿಲ್ದಾಣವನ್ನು ಮತ್ತೆ ಬೆಂಗಳೂರಿಗೆ ನೀಡುತ್ತಿರುವದು ಈ ಭಾಗಕ್ಕೆ ಮಾಡಿದ ಅನ್ಯಾಯ ಎನ್ನಲಾಗಿದೆ.

ಬೆಳಗಾವಿಯ ರೈಲು ನಿಲ್ದಾಣಕ್ಕೆ ದಿವಂಗತ ಸುರೇಶ ಅಂಗಡಿಯವರು ನೀಡಿದ ಹಲವು ಯೋಜನೆಗಳಿಂದ ಕಾಯಕಲ್ಪ ದೊರೆತಿದ್ದು, ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕರ‍್ಯ ಮುಗಿದು ಒಂದು ಹಂತದಲ್ಲಿ ರೈಲು ನಿಲ್ದಾಣ ತನ್ನ ಅಂದವನ್ನು ಹೆಚ್ಚಿಸಿಕೊಂಡು ಕರ‍್ಯ ಮಾಡುತ್ತಿದೆ. ಇದರ ಜೊತೆಗೆ ಬೆಳಗಾವಿ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಅವಶಕತೆ ಇದ್ದು, ಅದರ ಕಡೆಗೆ ಸರಕಾರ ಗಮನ ಹರಿಸಬೇಕು ಎನ್ನುವದು ಈ ಭಾಗದ ಜನರ ಒತ್ತಾಯವಾಗಿದೆ. 

ಸುದ್ದಿ ಓದಿ