ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ
ರಾಣೆಬೆನ್ನೂರು 21: ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ17 ರಲ್ಲಿ ರವಿವಾರ ಆರೋಗ್ಯಕರ ವೃದ್ಧಪಕ್ಕಾಗಿ ಯೋಗ ಘೋಷ ವಾಕ್ಯದಡಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ. ನಡೆಯಿತು ಯೋಗ ಶಿಕ್ಷಕ ಆರ್. ಬಿ. ಪಾಟೀಲ ಅವರು ನೂರಾರು ಮಕ್ಕಳಿಗೆ ಯೋಗದ ಮಹತ್ವ ಕುರಿತು ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರ, ಆರ್. ಟಿ. ತಾಂಬೆ, ಆರ್. ಬಿ. ಚಲವಾದಿ, ಪ್ರತಿಭಾ ಮೈಲಾರಕಳ್ಳಿಮಠ, ಶ್ವೇತಾ, ಎಚ್. ವಿ. ಕುಸುಮಾ ಎನ್ ಹಲಗೇರಿ,ಸುಮಾ ಎ.ಬಿ.ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಮಕ್ಕಳು ಮೂಲಕ ಧ್ಯಾನ ಪ್ರಾಣಾಯಾಮ ಮಾಡಿ ಸಾರ್ವಜನಿಕರ ಗಮನ ಸೆಳೆದರು.