ವಿವಿಧ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಲೋಕದರ್ಶನ ವರದಿ
ಯರಗಟ್ಟಿ 21 : ದೈಹಿಕ ಹಾಗೂ ಮಾನಸಿಕ ಸದೃಢತೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಯೋಗವನ್ನು ನಮ್ಮ ದಿನಚರಿಯನ್ನಾಗಿ ಮಾಡಿಕೊಳ್ಳಬೇಕೆಂದು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಹೇಳಿದರು. ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ, ಬಸವೇಶ್ವರ ಪ್ರೌಢ ಶಾಲೆ, ಕರ್ನಾಟಕ ಪ್ರಾಥಮಿಕ ಶಾಲೆ, ಬಾಲಾಜಿ ಪ್ರೌಢ ಶಾಲಾ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಆರೋಗ್ಯ ಬಲಿಷ್ಟವಾಗಿ ಬೆಳಸಿಕೊಳ್ಳಲು ಮೊದಲು ಯೋಗ ಮಾಡಲು ಮುಂದಾಗಬೇಕು ಎಂದು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕ ಬಿ. ಎಂ. ಸರದಾರ ಮಾತನಾಡಿ, ನಿರಂತರ ಯೋಗಾಭ್ಯಾಸ ಮಾಡುವದರಿಂದ ರೋಗ ಸಂಪೂರ್ಣ ದೂರವಾಗಿ, ನಿರೋಗಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಪ್ರಧಾನ ಗುರುಗಳಾದ ಎ. ಎ. ಮಕ್ತುಮನವರ, ರಾಜ್ಯ ಸಂಪ್ಮೂಲ ವ್ಯಕ್ತಿಗಳಾದ ಎಂ. ಎಂ. ಚೀಲದ, ಪ್ರಧಾನಗುರುಗಳಾದ ಬಿ. ಎಸ್. ಆಲದಕಟ್ಟಿ, ಎಸ್. ಬಿ. ಮಿಕಲಿ, ಪ್ರಧಾನ ಗುರುಗಳಾದ ಆನಂದ ವಜ್ರಮಟ್ಟಿ, ಮಂಜುನಾಥ ತಡಸಲೂರ, ಡಾ. ವ್ಹಿ. ಎಂ. ತಾವಂಶಿ, ಡಾ. ಕೆ. ಎನ್. ಕಡಕೋಳ, ಎನ್. ಎಸ್. ಕಾಂಬಳೆ, ಎಸ್. ಜೆ. ಸತ್ತಿಗೇರಿ, ಡಾ. ಕುಮಾರ ದಾಸರ, ಶ್ರೀಮತಿ ಡಿ. ಎಂ. ಪಾಟೀಲ, ಎಲ್. ಎಸ್. ಹೊನ್ನಪ್ಪಗೋಳ, ರಾಜೇಂದ್ರ ಶೆಟ್ಟಿ, ಶಿಕ್ಷಕರಾದ ವ್ಹಿ. ಎಂ. ಹಾದಿಮನಿ, ಯಲ್ಲಪ್ಪ ಸತ್ತಿಗೇರಿ, ಮನೋಜ ಜಗಮೈನ್ನವರ, ಆರ್. ಎನ್. ನದಾಫ, ಎಲ್. ಎನ್. ನೀಲಪ್ಪನ್ನವರ, ಆರ್. ಎಮ್. ಮುನವಳ್ಳಿ, ಆರ್. ಸಿ. ಬಡಿಗೇರ, ಕೆ. ಬಿ. ಸವದತ್ತಿ, ಪಿ. ಎಸ್. ಹರಿಹರ, ಮಂಗಲಾ ನಾಯ್ಕ, ಪಲ್ಲವಿ ಕಳಸಿ, ಅಶೋಕ ಹೊಂಗಲ, ಎಸ್ಡಿಎಂಸಿ ಸದಸ್ಯರಾದ ಶಂಕುತಲಾ ಹಡಪದ, ಫೀರೊಜ ಖಾದ್ರಿ, ವಿಜಯ ಬಡಿಗೇರ ಸೇರಿದಂತೆ ಎನ್.ಸಿ.ಎನ್, ವಿದ್ಯಾರ್ಥಿಗಳು ಇದ್ದರು.