ಬಳ್ಳಾರಿ

ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂದೆ ಬರಲು ಪ್ರೋತ್ಸಾಹಿಸಬೇಕು: ನಂದಿನಿ

ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂದೆ ಬರಲು ಪ್ರೋತ್ಸಾಹಿಸಬೇಕು: ನಂದಿನಿ

ಬಳ್ಳಾರಿ 09: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಬಳ್ಳಾರಿ ಶಾಖೆಯಲ್ಲಿ ಮಾರ್ಚ್ 8ರಂದು ಅಂತರಾಷ್ತ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ಸ್ ಆಚರಿಸಿದರು. 

ನಂದಿನಿ ಐಏಎಸ್ ಅವರು ಮಾತನಾಡಿ ಮಹಿಳೆಯರ ಪ್ರಾಮುಖ್ಯತೆ ಮತ್ತು ಅವರ ಹಕ್ಕುಗಳನ್ನು ವಿವರಿಸಿದರು ಹಾಗೂ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂದೆ ಬರಲು ಪ್ರೋತ್ಸಾಹಿಸಿದರು. 

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಂದಿನಿ ಐಏಎಸ್ Z.P. ಅಇಔ., ಮತ್ತು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್‍ನ, ಕಾರ್ಯದರ್ಶಿಯಾದ ಸಿಎ. ಪನ್ನರಾಜ್. ಎಸ್., ಅವರನ್ನು ಆಹ್ವಾನಿಸಲಾಗಿತ್ತು. ಸಿಎ. ಪನ್ನರಾಜ್. ಎಸ್.,  ಎಲ್ಲರಿಗೂ ಅಂತರಾಷ್ತ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಸುದ್ದಿ ಓದಿ