ಸಿಂಧಗಿ

ಹೆಣ್ಣುಮಕ್ಕಳು ಸಂಕೋಚದ ಸ್ವಭಾವ ಬಿಟ್ಟು ಧೈರ್ಯದಿಂದ ಮುನ್ನುಗ್ಗಬೇಕು: ತೋಳಬಂದಿ

ಹೆಣ್ಣುಮಕ್ಕಳು ಸಂಕೋಚದ ಸ್ವಭಾವ ಬಿಟ್ಟು ಧೈರ್ಯದಿಂದ ಮುನ್ನುಗ್ಗಬೇಕು:  ತೋಳಬಂದಿ

ಸಿಂದಗಿ09: ನಾವು ಹೆಣ್ಣುಮಕ್ಕಳು ಸಂಕೋಚದ ಸ್ವಭಾವವನ್ನು ಬಿಟ್ಟು ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಬೇಕು ಎಂದು ಜಿಲ್ಲಾ ಸಂಯೋಜಕರು ಮಕ್ಕಳ ಸಹಾಯವಾಣಿ ವಿಜಯಪೂರ ಸುನಂದಾ ತೋಳಬಂದಿ ಹೇಳಿದರು. 

ಪಟ್ಟಣದ ಪ್ರಜಾಪೀತಾ ಬ್ರಹ್ಮಾಕುಮಾರೀಯ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಥಮದಲ್ಲಿ  ಮನೇಯೇ ಪಾಠ ಶಾಲೇ ಮನೆಯೆಲ್ಲಿ ಒಳ್ಳೆಯ ಆಚಾರ ವಿಚಾರದ ಹಾಗೂ ಹಿರಿಯರನ್ನು ಕಂಡರೇ ಗೌರವಿಸುವ ಮನೋಭಾವವನ್ನು ಮಕ್ಕಳಲ್ಲಿ ತಿಳಿಸಿಕೊಡುವ ಕರ್ತವ್ಯ ತಾಯಿಯ ಪ್ರಥಮ ಅಸ್ತ್ರ.  ಹಿಂದಿನ ಕಾಲದಿಂದಲೂ ಹೆಣ್ಣು ಮಕ್ಕಳ ಬುದ್ಧಿ ಮೊಳಕಾಲ ಕೆಳಗೆ ಎಂದು ಹೇಳುತ್ತಾರೆ ಆದರೆ ಅವರಿಗೆ ಗೊತ್ತಿಲ್ಲ ಕಿತ್ತೂರೂ ರಾಣಿ ಚನ್ನಮ್ಮ ಓನಕೆ ಓಬವ್ವ ಇಂದಿರಾ ಗಾಂಧೀ ಹೆಣ್ಣು ಶಿವಾಜಿ ಮಹಾರಾಜ ಸಂಗೊಳ್ಳಿ ರಾಯಣ್ಣ, ಭಗತಸಿಂಗ ಇನ್ನೂ ಅನೇಕ ದೇಶ ಭಕ್ತರನ್ನು ಹೆತ್ತು ಬೆಳೆಸಿದ್ದು ಹೆಣ್ಣು. ಹೀಗಿರೂವಾಗ ಹೆಣ್ಣು ಹೇಗೆ ಅಬಲೆಯಾಗುತ್ತಾಳೆ ಆದಕಾರಣ ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿ ಬದುಕು ನಡಿಸಬೇಕು ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ಶಿಲ್ಪಾ ಕುದರಗೊಂಡ ಮಾತನಾಡಿ ಹೆಣ್ಣು ತಾಯಿಯಾಗಿ ತಂಗಿಯಾಗಿ ಅಕ್ಕನಾಗಿ ಗ್ರಹಿಣಿಯಾಗಿ ಹುಟ್ಟಿದ ಮನೆ ಗಂಡನ ಮನೆ ಬೆಳಗಿಸುವಂತ ನಾರಿಸಿರೊಮಣಿಯಾಗಿದ್ದಾಳೆ.ನಾವೆಲ್ಲರು ಇಂದು ಆಚರಿಸುತ್ತಿರುವ ಮಹಿಳಾ ದಿನಾಚರಣೆಯನ್ನು ಪದಕ್ಕೆ ನಿಜವಾದ ಅರ್ಥ ಸಿಗಬೇಕೆಂದರೆ ಹೆಣ್ಣನ್ನು ಗೌರವದಿಂದ ಕಾಣಬೇಕು ಎಂದರು.  

ಅಬಕಾರಿ ಇಲಾಖೆಯ ಅಧಿಕಾರಿ ಆರತಿ ಖೈನೊರ ಮಾತನಾಡಿ ಮಕ್ಕಳಿಗೆ  ಮನೆಯೇ ಮೊದಲ ಪಾಠಶಾಲೆಯಾಗಬೇಕು ಅದೇ ಮೂಲ ಅಡಿಪಾಯ ಮಕ್ಕಳಲ್ಲಿ ಧೈರ್ಯತುಂಬು ಕೆಲಸ ತಾಯೀ ತಂದೆ ಮಾಡಬೇಕು ಎಂದರು. 

ತಾಲೂಕಾ ಹಿಂದುಳಿದ ಕಲ್ಯಾಣ ಅಧಿಕಾರಿ ಶಿವಲೀಲಾ ಕೊಣ್ಣೂರ ಮಾತನಾಡಿ ಮಕ್ಕಳಿಗೆ ಸಿಗಬೇಕಾದ ಸರಕಾರಿಯ ಸೌಲತ್ತಿನ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.  

ಬ್ರ.ಕು.ಮಾ. ಡಾ.ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ ಇಡಿ ವಿಶ್ವದಲ್ಲಿ ಹೆಣ್ಣಿಗೆ ಪ್ರತಮ ಆದ್ಯತಿಕೊಟ್ಟದ್ದು ಬ್ರಮ್ಮಾಬಾಬಾರವರು ಒಂದೇ ಮಾತರಂ ಎಂಬ ಶಬ್ದಕ್ಕೆ ಅರ್ಥ ಹೇಳಿಕೊಟ್ಟು. ಅದಕ್ಕೆಂದು ಜ್ಞಾನ ಕಲಶವನ್ನು ಮಾತೆಯರ ಕೈಯಲ್ಲಿ ಕೊಟ್ಟಿದ್ದಾರೆ ಎಂದರು.  

ಕಾರ್ಯಕ್ರಮದಲ್ಲಿ ಅನೇಕ ಮಾತೆಯರು ಹಲವು ದೇವಿಯ ರೂಪಕಗಳು ಕಾಳಮ್ಮನವತಾರ ಕರಿಲಕ್ಷ್ಮೀ ದೇವಿ ಅವತಾರ. ಮಾತ ಮಮ್ಮಾ ಸರಸ್ವತಿ,ಅಕ್ಕಮಹಾದೇವಿ. ಹೇಮರೆಡ್ಡಿ ಮಲ್ಲಮ್ಮ.ಇನ್ನೂ ಅನೇಕ ದೇವಿಯರ ರೂಪಕಗಳು ನೆರೆದವರ ಮನ ಸೂರಗೊಂಡವು. 

ಇದೇ ಸಂಧರ್ಭದಲ್ಲಿ ಸ್ಥಳೀಯ ಪ್ರಜಾಪಿತಾ ಮುಖ್ಯಸಂಚಾಲಕಿಯಾದ ಪವಿತ್ರಾಜಿ ಅಕ್ಕನವರಿಗೆ ಹಾಗೂ ಆಲಮೇಲದ ಪ್ರ.ಹ್ರ.ಈ.ವಿ. ಸಂಚಾಲಕರು ರೇಣುಕಾ ಅಕ್ಕನವರಿಗೆ ನಾಗರತ್ನಾ ಮನಗೂಳಿ.ಸುನಂದಾ ತೋಳಬಂದಿ ರಾಜಯೋಗಿನಿ ಸಿಮಾಅಕ್ಕ ಸೇರಿ ಗೌರವಿಸಿ ಸನ್ಮಾನಿಸಿದರು. 

ರಾಜಯೋಗಿಗಳಾದ ಕೆ.ಎಸ.ಪತ್ತಾರ,ಸೋಮನಾಥ ಬುಳ್ಳಾ, ಮಲ್ಲಪ್ಪ ಮಣೂರ, ಶಿವನಗೌಡ ಬಿರಾದಾರ, ಎಸ್‌.ಎಸ್‌.ಪಾಟೀಲ, ತಮಣ್ಣ ಸುಣಗಾರ, ಸಿದ್ದಣ್ಣ ಪುಜಾರಿ, ಗಂಗಾಧರ ಬಡಿಗೇರ, ತಾನಾಜಿ ಕನಸೆ, ವಿಜು ತೇಲಿ,ಸಿವಾನದ ರಾಣಾಗೊಳ ಇನ್ನು ಮಾತೆಯರು ಮತ್ತು ಸಹೋದರ ಸಹೊದರರಿಯರು ಪಲಗೊಂಡಿದ್ದರು  ಪವಿತ್ರಾ ಅಕ್ಕನವರು ಸ್ವಾಗತಿಸಿದರು ಸಿದ್ದಲಿಂಗ ಚೌಧರಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ