ಬಳ್ಳಾರಿ

ಎಫ್‌ಪಿಎಐ ವತಿಯಿಂದ ಅಂತರಾಷ್ಟೀಯ ಆರೋಗ್ಯ ದಿನಾಚರಣೆ

ಎಫ್‌ಪಿಎಐ ವತಿಯಿಂದ ಅಂತರಾಷ್ಟೀಯ ಆರೋಗ್ಯ ದಿನಾಚರಣೆ

ಬಳ್ಳಾರಿ 07: ನಗರದ ಆಶ್ರಯ ಕಾಲೋನಿಯ ವಟ್ಟಪ್ಪಕೇರಿ ಬಡಾವಣೆಯಲ್ಲಿ ಫ್ಯಾಮಿಲಿ ಪ್ಯಾ-್ಲನಿಂಗ್ ಆಸೋಸಿಯೇಷನ್ ಆಫ್ ಇಂಡಿಯಾ ಶಾಖೆ  ಹಾಗೂ ಆಶ್ರಯ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ. ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟೀಯ ಆರೋಗ್ಯ ದಿನಾಚರಣೆ” ಪ್ರಯುಕ್ತ “ನಮ್ಮ ಗ್ರಹ, ನಮ್ಮ ಆರೋಗ್ಯ” ಎಂಬ ಘೋಷ ವಾಕ್ಯದಡಿ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ವೈದ್ಯಾಧಿಕಾರಿ ಡಾ. ಕಾಶಿಪ್ರಸಾದ್‌ರವರು ಮಾತಾನಾಡಿ, ಆರೋಗ್ಯವೇ ಮಹಾಭಾಗ್ಯ.ವೆಂದು ಎಂದು ಹೇಳುವ ಮೂಲಕ ಆರೋಗ್ಯವಾಗಿರುವುದೆಂದರೆ ಯಾವಾಗಾಲೂ  ದೈಹಿಕ ಆರೋಗ್ಯವಲ್ಲ. ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಆರ್ಥೈಸುತ್ತದೆ ಎಂದರು. ಬಳ್ಳಾರಿಯ ಬೇಸಿಗೆಯ ಧಗೆಯನ್ನು ನಿವಾರಿಸಿಬೇಕೆಂದರೆ ಹೆಚ್ಚಿನ ನೀರನ್ನು ಕುಡಿಯಲು ಕರೆ ನೀಡಿದರು. ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. 

ಎಫ್‌ಪಿಎಐನ ಕಾರ್ಯಕ್ರಮಾಧಿಕಾರಿ ಎಂ.ಉಮೇಶ್ ಕುಮಾರ್ ಮಾತಾನಾಡಿ,   ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲದೇ ಸಮಾಜದಲ್ಲಿ ಆರೋಗ್ಯದ ಬಗ್ಗೆ  ಕಾಳಜಿ ವಹಿಸಿಬೇಕು. ಇಂದಿನ ಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ  ಸರ್ಕಾರ ಮತ್ತು ಸರ್ಕಾರತೇರ  ಸಂಘ ಸಂಸ್ಥೆಗಳು  ಆರೋಗ್ಯಕ್ಕೆ  ಮೊದಲ ಆದ್ಯತೆ ನೀಡುತ್ತಿದ್ದಾರೆ. ಆದನ್ನು ಸಾರ್ವಜನಿಕರು  ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ  ಬಡಾವಣೆಯ ಸುಮಾರು 150ಅಧಿಕ ಮಹಿಳೆಯರಿಗೆ ಹಾಗೂ ಪುರುಷರನ್ನು ಆರೋಗ್ಯ  ತಪಾಸಣೆಗೆ ಒಳಪಡಿಸಲಾಯಿತು. ಈ ತಪಾಸಣೆಯ ಶಿಬಿರದಲ್ಲಿ ಮುಖ್ಯವಾಗಿ,  ಮತ್ತು  ಎಚ್‌.ಐ.ವಿ.ಪರೀಕ್ಷೆ, ಹಿಮೋಗ್ಲೋಬಿನ್, ಶುಗರ್ ಪರೀಕ್ಷೆ. ಬಿ.ಪಿ.ಪರೀಕ್ಷೆಗಳ ಬಗ್ಗೆ ಆರೋಗ್ಯ ತಪಾಸಣೆ ನಡೆಸಿದರು. 


ಸುದ್ದಿ ಓದಿ