ಸಿರುಗುಪ್ಪ

ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಅಗತ್ಯ: ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ

ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಅಗತ್ಯ: ಖಾಜಿ  ಸೈಯದ್ ಅಬ್ದುಲ್ ರಜಾಕ್ ಖಾದ್ರಿ
ಅಂತರರಾಷ್ಟ್ರೀಯ ಶಾಂತಿ ದಿನಾಚರಣೆ

ಸಿರುಗುಪ್ಪ - ಇಂದಿನ ಸ್ಪರ್ಧಾತ್ಮಕ ಪ್ರಸ್ತುತ ಸಮಯದಲ್ಲಿ ವಿಶ್ವದಲ್ಲಿ ಶಾಂತಿ ಸ್ಥಾಪನೆ ಅಗತ್ಯ ವಿದೆ ಎಂದು ಧಾರ್ಮಿಕ ಗುರುಗಳು ಸರ್ಕಾರಿ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ,  ತಾಲ್ಲೂಕು ಮಿಲಾದ್ ಕಮಿಟಿ ಸ್ಥಾಪಕ  ಅಧ್ಯಕ್ಷರು ಭಾವೈಕ್ಯ ಸಿರಿ ಪ್ರಶಸ್ತಿ ಪುರಸ್ಕೃತರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯ ಹಾಜಿ ಎ ಅಬ್ದುಲ್ ನಬಿ ಚಿಸ್ತಿ  ನಿಜಾಮಿ  ಅವರು ಅಭಿಪ್ರಾಯಪಟ್ಟರು.ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಇಂಟರ್ ನ್ಯಾಶನಲ್ ಜಶ್ನೇ ಈದ್ ಮಿಲಾದ್ ಉನ್ ನಬಿ ಸೊಲ್ಲೆಲ್ಲಾಹು ಅಲೈಹಿವ ಸಲ್ಲಮ್ ಜಾಗತಿಕ ಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿ ದಿನಾಚರಣೆಯನ್ನು ನೆನಪಿಸಿ ಈ  ಉಭಯರು ಮಾತನಾಡುತ್ತಾ ಎಲ್ಲಾ ಶಾಲಾ ಕಾಲೇಜು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಸೇವಾದಳ ಎನ್ ಎಸ್ ಎಸ್ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೆಡ್ ಕ್ರಾಸ್ ಸಂಸ್ಥೆಗಳಲ್ಲಿ ಪ್ರತಿಯೊಬ್ಬರೂ ಸದಸ್ಯರಾಗಬೇಕು ಶಾಂತಿ ಸದ್ಭಾವನೆ ದೇಶದ ಏಕತೆ ಶಾಂತಿ ಸೌಹಾರ್ದತೆ ಸಮಾನತೆ ಸಾಮಾಜಿಕ ಸಾಮಾಜಿಕ ಕಳಕಳಿ ಎಂತಹ ವಿಷಯಗಳನ್ನು ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು ಭಾರತ ಶಾಂತಿಪ್ರಿಯ ದೇಶ ನಾವೆಲ್ಲಾ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಶಾಂತಿ ಕದಡದಂತೆಯತ್ನಿಸಬೇಕು ಶಾಂತಿ ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪ್ರದರ್ಶಿಸಬೇಕು ಎಲ್ಲರಿಗೂ ಇಂಟರ್ನ್ಯಾಷನೇಲ್ ಜಶ್ನೇ ಈದ್ ಮಿಲಾದ್ ಉನ್ ನಬಿ ಸೊಲ್ಲೆಲ್ಲಾಹು ಅಲೈಹಿವ ಸಲ್ಲಮ್ ಹಬ್ಬದ ಶುಭಾಶಯ ಕೋರಿದ ಖಾಜಿ ಅಬ್ದುಲ್ ರಜಾಕ್ ಖಾದ್ರಿ,ಹಾಜಿ ಅಬ್ದುಲ್ ನಬಿ,ಖತೀಬ್ ಜಹೀರುದ್ದೀನ್ ಬಾಬು,ಸೌದಾಗರ್ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ,ಹಂಡಿ ಹಾಶಿಮ್,ಡಾ ಮೊಹಮ್ಮದ್ ಅಲಿ ,  ಮೊಹಮ್ಮದ್ ನೌಶಾದ್ ಅಲಿ,ಎ ಮೊಹಮ್ಮದ್ ರಫೀಕ್, ಹಾಜಿ ಮೊಹಮ್ಮದ್ ಇಬ್ರಾಹಿಂ,ಹಾಜಿ ಅಬ್ದುಲ್ ಹಮೀದ್ ಫಾರೂಕಿ,ಡಬಲ್ ಬಾಂಡ್  ಹಾಜಿ ಟಿ ಜಿ ಅಬ್ದುಲ್ ಗನಿ,ಖಾಲಿ ಚೀಲ ಹಾಜಿ ಹುಸೇನ್ ಸಾಬ್ ಮತ್ತಿತರ ಗಣ್ಯರು ಹಾರೈಸಿದರು.

ಸುದ್ದಿ ಓದಿ