ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಮೂಡಲಗಿ 26: ಮಾದಕ ಸೇವನೆಯಿಂದ ಸ್ನೇಹ, ತಂದೆ, ತಾಯಿ, ಪತ್ನಿ ಮಕ್ಕಳು ಎಂಬ ಸಂಬಂಧಗಳು ಹಾಳಾಗುತ್ತಿವೆ. ಮಾದಕ ಸೇವನೆ ಅಪಘಾತಕ್ಕೆ ಹಾಗೂ ಬಾಂಧಲಿಗಳಿಗೆ ಕಾರಣವಾಗುತ್ತೆ ಎಂದು ಕುಲಗೋಡ ಪಿ.ಎಸ್.ಐ ಆನಂದ ಬಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಎಮ್.ಎಸ್ ಅಮ್ಮಣಗಿ ಕಾಲೇಜಿನಲ್ಲಿ ಕುಲಗೋಡ ಪೊಲೀಸ್ ಠಾಣೆ ವತಿಯಿಂದ ಇಂದು ಮುಂಜಾನೆ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕುರಿತು ಮಾತನಾಡಿ ಯುವಕರಿಗೆ ರಸ್ತೆ ಸಂಚಾರಿ ನಿಯಮ, ಬಾಲ್ಯ ವಿವಾಹ ಮತ್ತು ಕಾನೂನುಗಳ ಬಗ್ಗೆ ತಿಳಿಸಿದರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೌಜಲಗಿ ಹಾಗೂ ಯಾದವಾಡ ಗ್ರಾಮಗಳಲ್ಲಿ ನಡೆಯಿತು.
ಸಂಸ್ಥೆ ಅಧ್ಯಕ್ಷ ಸುರೇಶ ಗಂಗನ್ನವರ, ಮುಖ್ಯೋಪಾಧ್ಯಯ ಡಿ.ಜಿ ಹರಿಜನ, ಶಂಕರ ಹಾದಿಮನಿ ಹಾಗೂ ಸಹಶಿಕ್ಷಕರು ವಿದ್ಯಾರ್ಥಿಗಳು ಇದ್ದರು.