ಅಂತರರಾಜ್ಯದ ಕಳ್ಳನ ಬಂಧನ : 51 ಲಕ್ಷ ಮೌಲ್ಯದ 925 ಗ್ರಾಂ ಚಿನ್ನಾಭರಣಗಳ ವಶ : ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿನ ಘಟನೆ
ಬೆಳಗಾವಿ : ಜಿಲ್ಲೆಯ ಸಂಕೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ವ್ಯಾಪಾರಿ ಬ್ಯಾಗನಲ್ಲಿದ್ದ ಸುಮಾರು 51 ಲಕ್ಷ ಮೌಲ್ಯದ 925 ಗ್ರಾಮದ ಚಿನ್ನಾಭರಣವನ್ನು ಎಗ್ಗರಿಸಿ ಫರಾರಿಯಾಗಿದ್ದ ಅಂತರಾಜ್ಯ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಬಂಧಿಸಿದ್ದು ಬಂಧಿತನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿನೋದ ವಿಶ್ರಾಂ ಚೌಹಾಣ (ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆ) ಈತ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಖಾಸಗಿ ಬಸ್ಸಿನಲ್ಲಿ ದಿ. 04/02/2023ರಂದು ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಚಿನ್ನದ ಆಭರಣಗಳ ವ್ಯಾಪಾರಸ್ಥನು ಸಂಕೇಶ್ವರ ಪೆÇಲೀಸ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೊಟೇಲ ಒಂದರ ಹತ್ತಿರ ಉಪಹಾರಕ್ಕೆ ತೆರಳಿದಾಗ ಬಸ್ಸಿನಲ್ಲಿ ಇಟ್ಟಿದ್ದ ಚಿನ್ನಾಭಣ ಇದ್ದ ಬ್ಯಾಗ್ ಕಳ್ಳತನವಾಗಿತ್ತು. ಈ ಬ್ಯಾಗಿನಲ್ಲಿ 61 ಲಕ್ಷ ಮೌಲ್ಯದ 1306 ಗ್ರಾಂ ಚಿನ್ನಾಭರಣ ಇತ್ತು. ಈ ಬಗ್ಗೆ ಸಂಕೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್.ಪಿ. ಡಾ ಸಂಜೀವ ಪಾಟೀಲ ಅವರು ಈ ಪ್ರಕರಣದ ಪತ್ತೆಗಾಗಿ ಹುಕ್ಕೇರಿ ಸಿಪಿಐ ಎಂ.ಎಂ.ತಹಶೀಲ್ದಾರ ಇವರ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚಿಸಿದ್ದರು. ಸದರಿ ತನಿಖಾ ತಂಡವು ಹೆಚ್ಚುವರಿ ಎಸ್.ಪಿ. ಎಂ. ವೇಣುಗೋಪಾಲ ಹಾಗೂ ಗೋಕಾಕ ಡಿ.ಎಸ್.ಪಿ. ದೂದಪೀಠ ಎಚ್. ಮುಲ್ಲಾ ಮಾರ್ಗದರ್ಶನದಲ್ಲಿ ಸದರಿ ಪ್ರಕರಣವನ್ನು ಬೆನ್ನಟ್ಟಿ ಮಧ್ಯಪ್ರದೇಶದ ಧಾರ ಜಿಲ್ಲೆಯ ಮನಾವರದಲಿ ಇದೇ ದಿ. 27ರಂದು ಈ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ರೂ. 51,00,000 ಮೌಲ್ಯದ 925 ಗ್ರಾಂ ವಿವಿಧ ಪ್ರಕಾರದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಸಂಕೇಶ್ವರ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹುಕ್ಕೇರಿ ಪಿ.ಐ ಎಮ್.ಎಮ್.ತಹಶಿಲ್ದಾರ. ಹಾಗೂ ಎಸ್.ಎಚ್.ಪವಾರ ಪಿ.ಎಸ್.ಐ ಮತ್ತು ಸಿಬ್ಬಂದಿ ಜನರಾದ ಎ.ಎಸ್.ಸನದಿ ಎ.ಎಸ್.ಐ, ಜಿ.ಎಸ್. ಕಾಂಬಳೆ ಸಿಪಿಸಿ 3255, ಎಸ್.ಆರ್. ರಾಮದುರ್ಗ ಸಿಪಿಸಿ 1512, ಯು.ವಾಯ್.ಅರಭಾಂವಿ ಸಿಪಿಸಿ 3769, ಎ.ಎಲ್.ನಾಯಕ ಸಿ.ಪಿ.ಸಿ 3277 ಮತ್ತು ಸಂಕೇಶ್ವರ ಪೆÇಲೀಸ್ ಠಾಣೆಯ ನರಸಿಂಹರಾಜು ಜೆ.ಡಿ. ಪಿ.ಎಸ್.ಐ, ರಾಜು ಮಮದಾಪೂರ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಬಿ.ವಿ.ಹುಲಕುಂದ ಸಿಎಚ್‍ಸಿ ಬ.ನಂ.2499. ಎಂ.ಎಂ.ಕರಗುಪ್ಪಿ ಸಿಪಿಸಿ ಬ.ನಂ.1203, ಎಂ.ಜಿ.ದೊಡಮಲಕ ಸಿಪಿಸಿ ಬ.ನಂ.3047, ಬಿ.ಟಿ.ಪಾಟೀಲ ಸಿಪಿಸಿ ಬ.ನಂ.2790, ಹಾಗೂ ಜಿಲ್ಲಾ ಪೆÇಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗ ವಿನೋದ ಠಕ್ಕನ್ನವರ ಮತ್ತು ಸಚೀನ ಪಾಟೀಲ ಇವರ ಕಾರ್ಯವನ್ನು ಎಸ್.ಪಿ. ಡಾ. ಸಂಜೀವ ಪಾಟೀಲ ಅವರು ಶ್ಲಾಘಿಸಿರುತ್ತಾರೆ.
ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ. ಅಲ್ಲದೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅವರಿಗೆ ಸಂಬಂಧ ಪಟ್ಟ ಬೆಲೆಬಾಳುವ ವಸ್ತು ಹಾಗೂ ಆಭರಣಗಳ ಬಗ್ಗೆ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಎಸ್‍ಪಿ ಡಾ. ಸಂಜೀವ ಪಾಟೀಲ ಅವರು ಸಾರ್ವಜನಿಕರಲ್ಲಿ ಕೋರಿರುತ್ತಾರೆ.