ಮಹಲಿಂಗಪುರ

ಅಂಬೇಡ್ಕರ್‌ರಿಗೆ ಅಪಮಾನ: ಆರೋಪಿಯ ಗಡಿಪಾರಿಗೆ ಆಗ್ರಹ

ಅಂಬೇಡ್ಕರ್‌ರಿಗೆ ಅಪಮಾನ: ಆರೋಪಿಯ ಗಡಿಪಾರಿಗೆ ಆಗ್ರಹ


ಮಹಾಲಿಂಗಪುರ 03: ಇತ್ತೀಚೆಗೆ ಬೆಳಗಾವಿ ಜಿಲ್ಲೆ ಸುಣಧೋಳಿ ಗ್ರಾಮದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಅವರ ಪ್ರತಿಮೆಯ ಕಟ್ಟೆ ಒಡೆದು, ಅವರ ಭಾವಚಿತ್ರ ಕಿತ್ತೆಸೆದು, ಸಂವಿಧಾನ ನಿರ್ಮಾತೃಗೆ ಮಾಡಿದ ಘೋರ ಅಪಮಾನಕ್ಕಾಗಿ ಶಿವಾನಂದ ಪಾಟೀಲರನ್ನು ಕೂಡಲೇ ಗಡಿಪಾರು ಮಾಡಿ, ಉಗ್ರ ಶಿಕ್ಷೆ ವಿಧಿಸಬೇಕೆಂದು ಶುಕ್ರವಾರ ಪಟ್ಟಣದ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯು ಪುರಸಭೆಯ ವ್ಯವಸ್ಥಾಪಕ ರಾಘು ನಡುವಿನಮನಿ ಅವರಿಗೆ ಸಂಘದ ಪರವಾಗಿ ಅಧ್ಯಕ್ಷ ಅಬ್ದುಲ್ಲಾ ಆಲಗೂರ್ ಮನವಿ ಅರ​‍್ಿಸಿದರು. 

ದಲಿತ ಸಂಘರ್ಷ ಸಮಿತಿ ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಪರಶುರಾಮ ಮೇತ್ರಿ ಹಾಗೂ ದಲಿತ ಮುಖಂಡ ಲಕ್ಷ್ಮಣ ಮಾಂಗ ಮಾತನಾಡುತ್ತಾ ಸಮೀಪದ ಸುಣಧೋಳಿ ಗ್ರಾಮದ ಹರಿಜನ ಕೇರಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಳಿಸಿ ಒಂದು ಹಂಚಿನ ಮನೆ ಮತ್ತು ತಗಡಿನ ಶೆಡ್ ನಿರ್ಮಿಸಿಕೊಂಡಿದ್ದಾನೆ. ಹಠಮಾರಿ ಧೋರಣೆಯಿಂದ ಮಾಡಿರುವ ಈ ಕೃತ್ಯ ಅಂಬೇಡ್ಕರ್ ಅವರಿಗೆ ಮತ್ತು ಭಾರತ ಸಂವಿಧಾನಕ್ಕೆ ಘೋರ ಅಪಮಾನವಾಗಿದೆ. ಈತನ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಿ, ಅಕ್ರಮ ಕಟ್ಟಡ ತೆರವುಗೊಳಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ಮುಂದೆ ಇಂತಹ ಕುಕೃತ್ಯಗಳು ನಡೆಯದಂತೆಯೂ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.  

ಸದಾಶಿವ ಪೂಜಾರಿ ಮಾತನಾಡಿದರು. ಮುಖಂಡ ಅರ್ಜುನ ದೊಡಮನಿ, ಪುರಸಭಾ ಸದಸ್ಯರಾದ ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ಭೀಮ್ ಆರ್ಮಿ ಅಧ್ಯಕ್ಷ ಜಯರಾಜ ಗಸ್ತಿ, ಸಯದ್ ನದಾಫ್, ಮಹಾಲಿಂಗ ಭಜಂತ್ರಿ, ಯಾಸೀನ್ ಅವಟಿ, ಯುನುಸ್ ಬೀಳಗಿ, ಈರಯ್ಯ ದೊಡಮನಿ, ಜಾಕೀರ್ ಶೇಖ್, ಮೂಸಾ ಬೂದಿಹಾಳ, ಯಾಸಿನ್ ಜಮಾದಾರ, ಸಾಧಿಕ್ ಕೋಲಾರ, ಅಶ್ರಫ್ ಅಂಬಿ, ಗೌಸ್ ನದಾಫ್, ಮೀರಾ ಐನಾಪುರ, ಶೇರ ಅಲಿ ಶೇಖ್, ಭಾಷಾ ಬಿಸ್ತಿ ಇತರರು ಇದ್ದರು. 


ಸುದ್ದಿ ಓದಿ