ಸರ್ವಧರ್ಮ ಸಭೆ ಬದಲು ಮಾನವ ಧರ್ಮ ಸಭೆ ಮಾಡಿ: ಅಪ್ಪಾಜಿ
ಮುದ್ದೇಬಿಹಾಳ : ನಾವುಗಳು ಇಂದು ಧರ್ಮವನ್ನು ಉಳಿಸಿಕೋಳ್ಳುವ ಕಾಯಕ ಮಾಡಬೇಕು, ಸರ್ವಧರ್ಮ ಸಭೆ ಬದಲು ಮಾನವ ಧರ್ಮ ಸಭೆ ಮಾಡಬೇಕು, ಮನುಷ್ಯನ ಹತ್ತಿರ ಮಾನವಿಯತೆಯ ಗುಣಗಳು ನಮ್ಮಲ್ಲಿ ಬೇಳಸಿಕೋಳ್ಳಬೇಕು ಎಂದು ಮಾಜಿ ಸಚಿವ ಸಿ ಎಸ್ ನಾಡಗೌಡ ಅಪ್ಪಾಜಿ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದ ಆರಾಧ್ಯ ದೇವರಾದ ದ್ಯಾಮಣ್ಣ ಮುತ್ಯಾನ ಜಾತ್ರಾ ಮಹೋತ್ಸವದ ಅಂಗವಾಗಿ ಐದು ಜೋಡಿಗಳ ಸಾಮೂಹಿಕ ಕಾರ್ಯಕ್ರಮ ಮತ್ತು ಸರ್ವಧರ್ಮ ಸಭೆಯನ್ನು ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ಈ ಹಿಂದೆ ಕರೋನಾ ಸಂಧರ್ಭದಲ್ಲಿ ಜಾತ್ರೆಗಳು ವಿಜೃಂಭಣೆಯಿಂದ ನಡೆಯುವದು ನಿಂತು ಹೋಗಿದ್ದವು, ಈ ವರ್ಷ ಈ ಜಾತ್ರೆಯನ್ನು ಅದ್ದೂರಿಯಾಗಿ ಮಾಡುತ್ತಿರುವದು ಸಂತಸ ಮತ್ತು ಈ ಜಾತ್ರೆಯಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೋಳ್ಳುತ್ತಿರುವರು ಪುಣ್ಯವಂತರು , ಇಷ್ಟು ದಿನಾ ನೀವುಗಳು ಒಬ್ಬರೇ ಇರುತ್ತಿದ್ದಿರಿ ಇವತ್ತಿನಿಂದ ನಿಮ್ಮ ಮದುವೆ ಎನ್ನುವ ಬಂದನದಿಂದ ನೀವುಗಳು ಒಂದೇ ಆತ್ಮದಂತೆ ಬದುಕಬೇಕು ಎಂದು ನವ ದಂಪತಿಗಳಿಗೆ ಕಿವಿ ಮಾತು ಹೇಳಿದರು.ನಂತರ ಅನೇಕ ಸ್ವಾಮೀಜಿಗಳಿಂದ ಆಶೀರ್ವಚನ ನೀಡಿದರು. ಸರೂರ ಗ್ರಾಮದ ಹಾಲುಮತ ಮೂಲಗುರುಪೀಠದ ಗುರುಗಳಾದ ಸಾದೇವಯ್ಯಾ ಗುರುವಿನ, ಬಸವರಾಜ ದೇವರು ರೇವಣ ಸಿದ್ದೇಶ್ವರ ಸಂಸ್ಥಾನಮಠ, ಮನಸೂರ, ದಾರವಾಡ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಂಸ್ಥಾನಮಠ, ನಿಡಗುಂದಿ, ಹಡಗಲಿ, ಶ್ರೀ ಮಲ್ಲಿಕಾರ್ಜುನ ಮಾಹಾಸ್ವಾಮಿಗಳು ದಾಸೂಹಮಠ, ಪಡೇಕನೂರ,ಬಳ್ಳಾರಿ ಶ್ರೀಗಳು ಕುಂಟೋಜಿ,ಡಾ,ಲಾಲಲಿಂಗೇಶ್ವರ ಶರಣರು.ಎನ್ ಸಿ ಪಾಟೀಲ್,ಮತ್ತಣ್ಣ ನಾವದಗಿ,ಡಾ, ಚನ್ನವೀರದೇವರು ಸಂಸ್ಥಾನಮಠ, ಕುಂಟೋಜಿ, ಮಲ್ಲಿಕಾರ್ಜುನ ಮದರಿ, ನಿಂಗಪ್ಪ ಬಪ್ಪರಗಿ,ಸಿದ್ರಾಮಯ್ಯಾ ಗುರುವಿನ, ಗ್ರಾಮ ಪಂ ಅಧ್ಯಕ್ಷರು ಕವಡಿಮಟ್ಟಿ, ಪ್ರತಿಬಾ ಅಂಗಡಗೇರಿ ಪುರಸಭೆ ಅದ್ಯಕ್ಷರು ಮುದ್ದೇಬಿಹಾಳ,ಗುರು ತಾರನಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು,ಹುಲಗಪ್ಪ ನಾಯಕಮಕ್ಕಳ, ಗೀರಿಜಾ ಬಂಡಿ, ರಮೇಶ ಕಂಟಿ, ಸ್ವಾಗತ ಸಮಿತಿ, ಜಾತ್ರಾ ಕಮೀಟಿ ಅಧ್ಯಕ್ಷ ಆರ್ ಬಿ ರಾಜನಾಳ, ನಂದನಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇನ್ನೀತರರು ಇದ್ದರು.