ಹನುಮ ಶಿಲಾಮೂರ್ತಿ ಪ್ರತಿಷ್ಠಾಪನೆ
ಮಹಾಲಿಂಗಪುರ 14: ಪವಿತ್ರ ಶ್ರಾವಣಮಾಸದ ಶನಿವಾರ ದಿವಸ ಸ್ಥಳೀಯ ಎಪಿಎಂಸಿ ಪ್ರಥಮ ದ್ವಾರಬಾಗಿಲು ಹತ್ತಿರ ಅರಳೆ ಗಿಡದ ಪಂಚಮುಖಿ ಹನುಮ ಶಿಲಾಮೂರ್ತಿಯನ್ನು ಎಲ್ಲ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆಯೊಂದಿಗೆ ಪ್ರತಿಷ್ಠಾಪಿಸಿದರು.
ದೇಗುಲದ ಮುಂಭಾಗದಲ್ಲಿ ಖ್ಯಾತ ಪಾರಿಜಾತ ಹಾಗೂ ಕುಂಚ ಕಲಾವಿದ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಂಡಿತ ಬಡಿಗೇರ ಅವರು ನೆಲಹಾಸಿನ ಮೇಲೆ ರಂಗೋಲಿಯಿಂದ ಬಿಡಿಸಿದ ಗದೆ ಹಿಡಿದ ಹನುಮಂತದೇವರ, ಅಶ್ವ ಹಾಗೂ ಆನೆ ಸ್ತಬ್ಧಚಿತ್ರಗಳು ಮನಮೋಹಕವಾಗಿ ಎಲ್ಲರ ಗಮನ ಸೆಳೆಯುತ್ತಿದ್ದವು.
ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದ ಕಿರಿಯ ಸ್ವಾಮೀಜಿಗಳಿಂದ ಪೂಜೆ ನೆರವೇರಿತು ಮತ್ತು ತರುವಾಯ ದರ್ಶನಕ್ಕೆ ಆಗಮಿಸುತ್ತಿರುವ ಎಲ್ಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.