ಹಗರಿಬೊಮ್ಮನಹಳ್ಳಿ

ಕರಿಯಮ್ಮದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ

ಕರಿಯಮ್ಮದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ

ಹಗರಿಬೊಮ್ಮನಹಳ್ಳಿ 30: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಗ್ರಾಮದೇವತೆ  ಕರಿಯಮ್ಮದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಗಂಗೆ ಪೂಜೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ತುಂಬಿದ ಕಳಸದೊಂದಿಗೆ ಮೆರವಣಿಗೆ ಮೂಲಕ ಸಕಲ ವಾದ್ಯಗಳೊಂದಿಗೆ ಕಾರ್ಯಕ್ರಮ ಜರುಗಿತು. 

ಗ್ರಾಮ ಪುರೋಹಿತ ಜೆ.ಸತ್ಯನಾರಾಯಣ ಆಚಾರ್ ಧಾರ್ಮಿಕ ವಿಧಿ, ವಿಧಾನಗಳನ್ನು ಮಾಡಿ, ನೂತನ ಮೂರ್ತಿಗೆ ಗಂಗಾಭಿಷೇಕದೊಂದಿಗೆ ಜೋಗಪಂಥಿಯರ ಪಡ್ಲಿಗಿ ತುಂಬಿಸಿ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹೆಚ್‌.ಭೀಮಣ್ಣ, ಜಿ.ತಿಮ್ಮಣ್ಣ, ಬುಡ್ಡಿ ಬಸವರಾಜ, ಮೀಸೆ ಹುಲುಗಪ್ಪ, ಉಪ್ಪರ ಕಾಳಪ್ಪ, ಮಾಲ್ವಿ ಕೃಷ್ಣಪ್ಪ, ಬುಳ್ಳನಗೌಡ, ವಿ.ಗೋವಿಂದ, ಬಿ.ನಾಗರಾಜ, ಸೆರೆಗಾರ ಚಂದ್ರ​‍್ಪ, ಶಿವಣ್ಣಗೌಡ್ರು, ಯು.ಕನಕಪ್ಪ, ಹೆಚ್‌.ಹುಲುಗಪ್ಪ ನೂರಾರು ಜನ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ