ಪಟ್ಟಣದ ಜಲಜೀವನ್ ಮಿಷನ ಪ್ರಾರಂಭಿಸಲು ನಾಮನಿರ್ದೇಶನ ಸದಸ್ಯರಿಂದ ಒತ್ತಾಯ
ಶಿಗ್ಗಾವಿ,25 : ಪಟ್ಟಣ ವ್ಯಾಪ್ತಿಯ 24. ಗಂಟೆ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆಯ ಸಂಪೂರ್ಣ ಮಾಹಿತಿ ಹಾಗೂ ಪ್ರಯೋಜನಗಳ ಬಗ್ಗೆ ನಾಗರೀಕರಿಗೆ ಮಾಹಿತಿ ನೀಡಿ ಕಾಮಗಾರಿ ಪ್ರಾರಂಭಿಸಲು ಪುರಸಭಾ ನಾಮನಿರ್ದೇಶನ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಕಾರ್ಯರೂಪಕ್ಕೆ ತರಲು ಒತ್ತಾಯಿಸಿದರು.
ಪಟ್ಟಣದಲ್ಲಿ 24. ಗಂಟೆ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಎರಡು ವರ್ಷಗಳಿಂದಲೂ ಹಾಗೂ ಯೋಜನಾಧಿಕಾರಿಗಳು ಪುರಸಭೆಯಲ್ಲಿ ಸಭೆ ಮಾಡಿದಾಗ ಯೋಜನೆಯ ಸರಿಯಾದ ರೀತಿಯಲ್ಲಿ ಇಲ್ಲ ಎಂದು ಚುನಾಯಿತ ಪ್ರತಿನಿಧಿಗಳ ವಿರೋಧವಿತ್ತು ಆದರೆ ಮಳೆಗಾಲವಿದ್ದರೂ ತಕ್ಷಣವೇ ಕೆಲಸ ಪ್ರಾರಂಭಿಸಿರುವುದು ಸಂಶಯಕ್ಕೆ ಎಡೆ ಮಾಡಿದೆ ಪ್ರಮುಖವಾಗಿ ಪಟ್ಟಣದ ಹಲವು ವಾರ್ಡಗಳಲ್ಲಿ ಕಾಮಗಾರಿ ಮಾಡುತ್ತಿದ್ದು ನಿರಂತರ ಮಳೆಯಿಂದ ಇರುವ ಮೂಲಭೂತ ಸೌಕರ್ಯಗಳು ಹಾಳಾಗುತ್ತಿದ್ದು ನಾಗರೀಕರಿಗೆ ತೊಂದರೆಕೊಟ್ಟಂತಾಗಿದೆ ಪ್ರಮುಖವಾಗಿ ಯೋಜನೆಯ ಹಾಗೂ ಕಾಮಗಾರಿ ವಿವರವನ್ನು ನಿರ್ವಹಿಸುತ್ತಿರುವ ಮಾಹಿತಿಯನ್ನು ಯಾರಿಗೂ ತಿಳಿಸಿಲ್ಲ ನಾಮಫಲಕವನ್ನು ಅಳವಡಿಸಿಲ್ಲ ಜೊತೆಗೆ ಈಗಾಗಲೇ ಇರುವ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಆಗುತ್ತಿದ್ದು ಪೈಪ್ ಲೈನ್ಕಾರ್ಯ ಮಾಡುತ್ತಿರುವುದರಿಂದ ಸರಕಾರಕ್ಕೆ ಇದರಿಂದ ನಷ್ಟವಾಗಲಿದೆ ಮಳೆಗಾಲ ಇರುವುದರಿಂದ ಜನರಿಗೂ ತೊಂದರೆ ಆಗಿದೆ ಈಗಿರುವ ಮೂಲಭೂತ ಸೌಕರ್ಯಗಳ ಚರಂಡಿ ರಸ್ತೆ ಹಾಗೂ ಪೈಪ್ ಲೈನ್ಗಳು ಉತ್ತಮವಾಗಿದ್ದರೂ ಪಕ್ಕದಲ್ಲಿ ಹೊಸ ಪೈಪ್ ಲೈನ್ ಜೆಸಿಬಿಯಿಂದ ಹಾಕುತ್ತಿರುವುದರಿಂದ ಮೂಲಭೂತ ಸೌಕರ್ಯಗಳಿಗೆ ನಷ್ಟ ಉಂಟಾಗುತ್ತಿರುವುದು ಕಂಡು ಬಂದಿದೆ ನಷ್ಟವನ್ನು ಸರಿಪಡಿಸುವ ಜವಾಬ್ದಾರಿ ಏಜೆನ್ಸಿ ಹೊಂದಿದ್ದರೆ ಜನರಿಗೆ ತಿಳಿಸಲಿ ಒಟ್ಟಾರೆ ಬಹುಕೋಟಿಯೋಜನೆಯ ಸಂಪೂರ್ಣ ಮಾಹಿತಿಯನ್ನು ನಾಗರಿಕರಿಗೆ ತಿಳಿಸಿ ಇರುವ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಯಾಗದಂತೆ ಕೆಲಸ ನಿರ್ವಹಿಸಬೇಕು ನಾಗನೂರು ಕೆರೆ ಹೂಳೆತ್ತುವ ಕಾರ್ಯ ತಡೆಗೋಡೆ ನಿರ್ಮಾಣ ಮಾಡಬೇಕು ನೀರು ಸಂಗ್ರಹಣ ರಿಸರ್ವಾಯರ್ ಹಾಗೂ ಫಿಲ್ಟರ್ ಎಷ್ಟು ಲೀಟರ್ ಸಾಮರ್ಥ್ಯದ ಎನ್ನುವುದನ್ನು ತಿಳಿಸಬೇಕು ಸರ್ಕಾರದ ಹಣ ಪೋಲಾಗದಂತೆ ಅಧಿಕಾರಿಗಳು ಕ್ರಮಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾಧಿಕಾರಿಗಳಿಗೆ ನಾಮ ನಿರ್ದೇಶಕ ಸದಸ್ಯರಾದ ಮಂಜುನಾಥ ಮಣ್ಣಣ್ಣವರ, ಮಾರುದ್ರ್ಪ ಕೊಡ್ಲಿವಾಡ, ಪರ್ವೀಜ್ ಅಹ್ಮದ್ ಮುಲ್ಲಾ ಸಾಧಿಕ್ ಮೊಘಲಲ್ಲಿ ಜಲಾಲ ವಿಜಯ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.