ಬಳ್ಳಾರಿ

ಆವಿಷ್ಕಾರ ಮತ್ತು ಸಧೃಡವಾದ ಮನಸ್ಸು ಯಶಸ್ಸಿಗೆ ದಾರಿ: ಮಲ್ಲಿಕಾರ್ಜುನ ಅಲ್ಲಾಪುರ

ಆವಿಷ್ಕಾರ ಮತ್ತು ಸಧೃಡವಾದ ಮನಸ್ಸು ಯಶಸ್ಸಿಗೆ ದಾರಿ: ಮಲ್ಲಿಕಾರ್ಜುನ ಅಲ್ಲಾಪುರ

ಬಳ್ಳಾರಿ 12: ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸಿ-್ಟಟ್ಯೂಟ್ ಆಫ್ ಮ್ಯಾನೇಜ್ಮೇಂಟ್ (ಅಕಿಮ್) ಕಾಲೇಜಿನಲ್ಲಿಹಿ “ಪಾಂಚಜನ್ಯ 2024” ಒಂದು ದಿನದ ರಾಷ್ಟ್ರೀಯ ಮಟ್ಟದ  ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೇಂಟ್ ಪೆಸ್ಟ್‌ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಮಲ್ಲಿಕಾರ್ಜುನ ಅಲ್ಲಾಪುರ ಬಳ್ಳಾರಿ ಇವರು ಉದ್ಘಾಟಿಸಿ ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.  

ಹಲವಾರು ಅವಕಾಶಗಳು ಇರುತ್ತವೆ ಅದರಲ್ಲಿ ಗೆಲವು ಸಾಧಿಸಲು ನಿರ್ಧಿಷ್ಟವಾದ ಚಿಂತನೆ ಮತ್ತು ಪ್ರಯತ್ನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ನಿರ್ವಹಣೆ ಶಾಸ್ತ್ರದಲ್ಲಿ ಹೊಸ ಹೊಸ ಅವಕಾಶಗಳ ಆವಿಷ್ಕಾರ ನಡೆಯಬೇಕು. ಕಲಿಕೆಗಳಲ್ಲಿ ಏನೇ ಕಷ್ಟಗಳು ಬರಲಿ ಕುಗ್ಗದೇ, ಧೃತಿಗೆಡದೆ ಮುನ್ನುಗ್ಗಬೇಕು ಹಾಗಿದ್ದಲ್ಲಿ ಮಾತ್ರ ಜೀವನದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ವೃತ್ತಿ ಆಧಾರಿತ ಕೌಶಲ್ಯ ಮತ್ತು ಬುದ್ಧಿಶಕ್ತಿಯನ್ನು ಬೆಳಸಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕರಾಗಿ ಬೆಳೆಯಬೇಕೆಂದು ತಿಳಿಸಿದರು.  

ಇದನ್ನು ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಗಳು ತಪ್ಪದೇ ಪಾಲಿಸಬೇಕು ಎಂದು ಕರೆಕೊಟ್ಟರು. ವೀ ವಿ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇಂದಿನ ಯುಗದಲ್ಲಿ ಸಾಕಷ್ಟು ಕಲಿಕಾ ವಿಧಾನಗಳು ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಸಮಗ್ರವಾಗಿ ಬಳಸಿಕೊಂಡು ಇನ್ನು ಹೆಚ್ಚು ಉತ್ತೇಜಕರಾಗಬೇಕೆಂದು ಕರೆಕೊಟ್ಟರು.  ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಅರವಿಂದ್ ಪಟೇಲ್, ಕಾರ್ಯದರ್ಶಿಗಳು ವೀ ವಿ ಸಂಘ ಇವರು ವಿದ್ಯಾರ್ಥಿಗಳು ತನ್ನದೇ ಆದ ಶೈಕ್ಷಣಿಕ ಮತ್ತು ವೃತ್ತಿಗಳ ಮೌಲ್ಯವನ್ನು ಹೊಂದಿರಬೇಕು ಎಂದು ತಿಳಿಸಿದರು.   

ಆಡಳಿತ ಮಂಡಳಿ ಅಧ್ಯಕ್ಷರಾದ ಟಿ. ನರೇಂದ್ರಬಾಬು ಇವರು ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಎಲ್ಲಾರು ಸದುಪಯೋಗ ಪಡಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಲು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಟಿ.ಗೋಪಿಯವರು ಸ್ವಾಗತಿಸಿದರು. ಡಾ.ಬಿ. ಶೈಲಜ, ಸಹ ಪ್ರಾಧ್ಯಾಪಕರು ನಿರೂಪಿಸಿದರು. ಇಂದಿನ ಮ್ಯಾನೇಜ್ಮೇಂಟ್ ಪೆಸ್ಟ್‌ನಲ್ಲಿ ರಾಜ್ಯದ 20 ಕ್ಕಿಂತ ಹೆಚ್ಚು ಪದವಿ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಸಹಾಯಕ ಪ್ರಾಧ್ಯಾಪಕರಾದ ಬಿ. ದಿವಾಕರ, ಅರುಣ್ ಕುಮಾರ್, ಪಲ್ಲವಿ ಜಿ ಹಾಗೂ ಬೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ