ಮಹಲಿಂಗಪುರ

ವಿದ್ಯುತ್ ಕುರಿತ ಮಾಹಿತಿ ಪ್ರತಿಯೊಬ್ಬರು ಅರಿಯಬೇಕು: ಸುನೀಲ ಮುಧೋಳ

ವಿದ್ಯುತ್ ಕುರಿತ ಮಾಹಿತಿ ಪ್ರತಿಯೊಬ್ಬರು ಅರಿಯಬೇಕು: ಸುನೀಲ ಮುಧೋಳ

ಮಹಾಲಿಂಗಪುರ 17:  ವಿದ್ಯುತ್ ಉಪಯೋಗದ ಹಾಗೂ ಅದರಿಂದಾಗುವ ಅನಾಹುತಗಳ ಕುರಿತ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಅವಶ್ಯಕತೆ ಇದೆ ಎಂದು ಹೆಸ್ಕಾಂ ರಬಕವಿ ವಿಭಾಗೀಯ ಅಧಿಕಾರಿ ಸುನೀಲ ಮುಧೋಳ ಹೇಳಿದರು. 

ಚಿಮ್ಮಡಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೋಳ್ಳಲಾಗಿದ್ದ ವಿದ್ಯುತ್ ಸುರಕ್ಷತಾ ಮಾಶಾಚರಣೆ ಹಾಗೂ ಅಭಿಯಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯುತ್ ಪ್ರಸರಣದಿಂದ ಪ್ರತಿಯೊಬ್ಬರು ಸುರಕ್ಷತೆತಯ ಅಂತರ ಕಾಯ್ದುಕೊಳ್ಳಬೇಕು, ವಿದ್ಯುತ್ ಉಳಿತಾಯಕ್ಕಾಗಿ ಐಎಸ್‌ಐ ಮಾರ್ಕ ಹೊಂದಿರುವ ಗುಣಮಟ್ಟತದ ಸುರಕ್ಷತೆ ಹೊಂದಿರುವ ವಿದ್ಯುತ್ ಸಲಕರಣೆಗಳನ್ನು ಮಾತ್ರ ಖರೀದಿಸಬೇಕು. ಅನವಶ್ಯಕ ವಿದ್ಯುತ್ ಬಳಕೆ ನಿಲ್ಲಿಸಬೇಕು, ವಿದ್ಯುತ್ ಕಂಬ, ತಂತಿಗಳ ಮೇಲೆ ಬಟ್ಟೆ ಒನಹಾಕುವುದು, ಅದಕ್ಕೆ ದನ ಕರುಗಳನ್ನು ಕಟ್ಟುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು, ಮಕ್ಕಳು ವಿದ್ಯುತ ಪ್ರಸರಣವಿರುವ ರ್ಸಥಳಗಳಲ್ಲಿ ಗಾಳಿಪಟ ಹಾರಿಸುವುದು ಅದರ ಹತ್ತಿರ ಆಟ ಆಡುವುದು ಮಾಡಬಾರದು ಎಂದರು. 

ಶಾಲೆಯ ಮುಖ್ಯ ಗುರು ಬಿ.ಎಸ್‌.ಹಲಗಿ ಮಾತನಾಡಿ ವಿದ್ಯುತ್ ಇಲಾಖೇಯ ಪ್ರತಿಯೊಬ್ಬ ಸಿಬ್ಬಂದಿ ಬೆಳಕು ಕೊಡುವ ದೇವರಿದ್ದಂತೆ ಅವರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕೆಂದರು. 

ಕಾರ್ಯಕ್ರಮದಲ್ಲಿ ವಿದ್ಯುತ್ ಸಹಾಯಕರಾದ ಕೆ.ಜಿ. ಮಕಾನದಾರ, ಎಫ್‌.ಎಚ್‌. ಪಲ್ಟನ್, ಮಲ್ಲೇಶ ಸನದಿ, ಕಿರಣ ಕಲ್ಲೋಳಿ, ಮಹಾಲಿಂಗ ಕಂಟೆಪ್ಪಗೋಳ, ಮುದಕಪ್ಪಾ ಜಟ್ಟರಕಿ, ಶಿವು ನಾಯಿಕವಾಡಿ, ಸೈಯದ ನದಾಫ, ಶ್ರೀನಿವಾಸ ಮಲ್ಲಾರಿ, ಸರಕಾರಿ ಉರ್ದು ಶಾಲೆಯ ಮುಖ್ಯ ಗುರು ಝಾಕಿರಹುಸೇನ ಇಂಡಿಕರ ಸೇರಿದಂತೆ ಹಲವಾರು ಜನ ಪ್ರಮುಖರು, ಶಾಲಾ ಶಿಕ್ಷಕೀಯರು ಉಪಸ್ಥಿತರಿದ್ದರು. 


ಸುದ್ದಿ ಓದಿ