ಮಾಹಿತಿ ಹಕ್ಕು ಸೇವಾ ಭೂಷಣ ಪ್ರಶಸ್ತಿಗೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಆಯ್ಕೆ

ಮಾಹಿತಿ ಹಕ್ಕು ಸೇವಾ ಭೂಷಣ ಪ್ರಶಸ್ತಿಗೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಆಯ್ಕೆ

ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತು ಮಾಹಿತಿ ಹಕ್ಕು ತಜ್ಞರಿಗಾಗಿ ಮೀಸಲಿಟ್ಟಿರುವ “ಮಾಹಿತಿ ಹಕ್ಕು ಸೇವಾ ಭೂಷಣ” ದತ್ತಿ ಪ್ರಶಸ್ತಿಗಾಗಿ ನಾಡಿನ ಹಿರಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರನ್ನು ಆಯ್ಕೆ ಮಾಡಲಾಗಿದೆ.

     ಕನ್ನಡ ನಾಡಿನಲ್ಲಿ ಮಾಹಿತಿ ಹಕ್ಕಿನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು ಕಳೆದ 8 ರ್ಷ ಗಳಿಂದ ಪರಿಷತ್ತು ನಿರಂತರವಾಗಿ ನೀಡುತ್ತ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.

    2023ನೇ ಸಾಲಿನ ಮಾಹಿತಿ ಹಕ್ಕು ತಜ್ಞರಿಗಾಗಿ ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ಅವರ ಹೆಸರಿನ “ಮಾಹಿತಿ ಹಕ್ಕು ಸೇವಾ ಭೂಷಣ” ದತ್ತಿ  ಪ್ರಶಸ್ತಿಗಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿರುತ್ತದೆ. ಪ್ರಶಸ್ತಿಯು 5,000 (ಐದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಮಾಹಿತಿ ಹಕ್ಕು ತಜ್ಞ ಜೆ.ಎಂ ರಾಜಶೇಖರ ಅವರ ಹೆಸರಿನಲ್ಲಿ ಪಿ. ಮಹೇಶ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿ ನಿಧಿಯನ್ನು 2014ರಲ್ಲಿ ಸ್ಥಾಪಿಸಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಭ್ರಷ್ಟಾಚಾರದ ನರ್ಮೂಯಲನೆ ಮಾಡುವ ಹಿನ್ನೆಲೆಯಲ್ಲಿ ಪಾರರ್ಶಪಕ ಆಡಳಿತ ನೀಡುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವುದಕ್ಕೆ ಮಾಹಿತಿ ಹಕ್ಕು ಸರ್ವರಜನಿಕರಿಗೆ ವರದಾನವಾಗಿದೆ. ಈ ಹಕ್ಕನ್ನು ಬಳಸಿಕೊಂಡು ಕಾನೂನಾತ್ಮಕ ಹೋರಾಟ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಬೇಕು ಎನ್ನುವುದು ದತ್ತಿ ದಾನಿಗಳ ಮೂಲ ಆಶಯವಾಗಿದೆ. ಇಂಥಹ ಮಹತ್ವದ ದತ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ವಾಸಹ್ರ್ತೆಗೆ ಮತ್ತೊಂದು ಗರಿಯಾಗಿದೆ. ಮಾಹಿತಿ ಹಕ್ಕು ಜಾರಿಗೆ ಬಂದಾಗಿನಿಂದ ಕೆಲವು ಮಾಹಿತಿ ಹಕ್ಕು ಕಾರ್ಯಯರ್ತರು ಸರ್ಪಣಾ ಭಾವದಿಂದ ಕಾರ್ಯ ವಹಿಸುತ್ತಿದ್ದಾರೆ. ಅಂಥವರಿಗಾಗಿ ಮೀಸಲಿಟ್ಟಿರುವ ಈ ಪ್ರಶಸ್ತಿ ನಾಡಿನ ಹೆಮ್ಮೆಯ ಪ್ರಶಸ್ತಿಯಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

   ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು* ಅವರು ಉಪಸ್ಥಿತರಿದ್ದರು.  


ಸುದ್ದಿ ಓದಿ