ಮೂಡಲಗಿ

ಭಾರತೀಯ ಅಧ್ಯಾತ್ಮಿಕ, ಭಕ್ತಿ ಪರಂಪರೆ ಅಪೂರ್ವ: ಕಡಾಡಿ

ಭಾರತೀಯ ಅಧ್ಯಾತ್ಮಿಕ, ಭಕ್ತಿ ಪರಂಪರೆ ಅಪೂರ್ವ: ಕಡಾಡಿ

ಮೂಡಲಗಿ  18: ಭಾರತೀಯ ಅಧ್ಯಾತ್ಮಿಕ ಮತ್ತು ಭಕ್ತಿ ಪರಂಪರೆಯು ಅಪೂರ್ವವಾಗಿದ್ದು, ಇಡೀ ವಿಶ್ವವೇ ಭಾರತದತ್ತ ಹೆಮ್ಮೆಯಿಂದ ನೋಡುವಂತಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು. 

ಶುಕ್ರವಾರದಂದು ತಾಲ್ಲೂಕಿನ ಖಾನಟ್ಟಿಯ ಶಿವಲಿಂಗೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆಯ ಸಮಾರೋಪ ಮತ್ತು ದಾನಿಗಳ ಮತ್ತು ಸೇವೆ ಸಲ್ಲಿಸಿದ ಮಹನೀಯರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಾರತೀಯರು ಪ್ರಕೃತಿಯಲ್ಲಿ ದೇವರನ್ನು ಕಂಡುಕೊಂಡಿರುವ ದೈವಭಕ್ತರು. ದೇವರ ಕಾರ್ಯಗಳಿಗೆ ಎಲ್ಲ ಸಮುದಾಯದ ಜನರು ಕ್ರೈಜೋಡಿಸುವ ಸಾಮರಸ್ಯತ ಭಾರತದ ನೆಲದಲ್ಲಿದೆ ಎಂದರು. 

ಖಾನಟ್ಟಿಯ ಜನರು ಶಿವಲಿಂಗೇಶ್ವರ ದೇವಸ್ಥಾನಕ್ಕೆ 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಮಹಾದ್ವಾರವು ಮಾದರಿಯಾಗಿದೆ. ಜನರ ಭಕ್ತಿ ಮತ್ತು ಮಾಡುವಂತ ಇಚ್ಛಾಶಕ್ತಿಯು ಶ್ಲಾಘನೀಯವಾಗಿದೆ. ಒಳ್ಳೆಯ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಖಾನಟ್ಟ್ಲಿ ಜನರ ಕಾರ್ಯವು ಉತ್ತಮ ಉದಾಹರಣೆಯಾಗಿದೆ ಎಂದರು. 

ಖಾನಟ್ಟಿ ಗ್ರಾಮದಲ್ಲಿ ನಿರ್ಮಿಸಲು ಸಂಕಲ್ಪ ಮಾಡಿರುವ ಸಮುದಾಯ ಭವನ ನಿರ್ಮಾಣಕ್ಕ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ 110ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು. ಬೆಳಗಾವಿ ಸಂಸದ ಮಂಗಲಾ ಅಂಗಡಿ ಅವರ ಗಮನಕ್ಕೂ ತಂದು ಅವರಿಂದಲೂ ಖಾನಟ್ಟಿಯ ಸಮುದಾಯ ಭವನದ ನಿರ್ಮಾಣಕ್ಕೆ ಸಹಾಯವಾಗುವಂತೆ ಪ್ರಯತ್ನ ಮಾಡುವುದಾಗಿ ತಿಳಿಸಿದರು. 

ಅತಿಥಿ ಬಾಲಶೇಖರ ಬಂದಿ ಮಾತನಾಡಿ ಖಾನಟ್ಟಿ ಗ್ರಾಮವು ಕೃಷಿ, ಶಿಕ್ಷಣ, ಸಂಸ್ಕೃತಿ ಹಾಗೂ ಅಧ್ಯಾತ್ಮಿಕದಲ್ಲಿ ಗುರುತಿಸಿಕೊಂಡಿದೆ. ಗ್ರಾಮದ ಸೌಹಾರ್ದತೆ, ಒಗ್ಗಟ್ಟು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮಿಗಳು ಮಾತನಾಡಿ ನಿಸ್ವಾರ್ಥದಿಂದ ಮಾಡುವ ದಾನವು ನಿಜವಾದ ದಾನವಾಗಿದೆ. ಖಾನಟ್ಟಿಯಲ್ಲಿ ನಿಸ್ವಾರ್ಥದಿಂದ ನಿರ್ಮಿಸಿದ್ದ ಶಿವಲಿಂಗೇಶ್ವರರ ಮಹಾದ್ವಾರವು ಜನರ ಭಕ್ತಿಯನ್ನು ಬಿಂಬಿಸುತ್ತದೆ ಎಂದರು. 

ಶಿವನಪ್ಪ ಅ. ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚೇತನ ರಡ್ಡೆರಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೇಣುಕಾ ಮುಖ್ಯ ಅತಿಥಿಯಾಗಿದ್ದರು. 

ಮಹಾದ್ವಾರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮತ್ತು ಸೇವೆ ಸಲ್ಲಿಸಿದ ಮಹನೀಯರನ್ನು, ಸಂಗೀತ ಕಲಾವಿದರನ್ನು ವೇದಿಕೆಯಲ್ಲಿ ಸನ್ಮಾನಿಸಿದರು. 

ಎಸ್‌.ಬಿ. ಗುದಗನ್ನವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರುತಿ ಜಾಧವ ನಿರೂಪಿಸಿದರು. 


ಸುದ್ದಿ ಓದಿ