ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ಭಾರತ ವಿಶ್ವಗುರುವಾಗಬೇಕು : ಶ್ರೀನಿವಾಸ ಪಾಟೀಲ.
ಮಹಾಲಿಂಗಪುರ 02: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ವಿಶ್ವಗುರುವಾಗಿತ್ತು, 2047 ಕ್ಕೆ ಅದು ಮರುಕಳಿಸಬೇಕೆಂಬ ನಿಟ್ಟಿನಲ್ಲಿರಾಷ್ಟ್ರೋತ್ಥಾನ ಪರಿಷತ್ ನಿರಂತರವಾಗಿ ಶ್ರಮಿಸುತ್ತದೆಎಂದುರಾಷ್ಟ್ರೋತ್ಥಾನ ಪರಿಷತ್ ಬಾಗಲಕೋಟೆಜಿಲ್ಲಾ ಸಂಯೋಜಕ ಶ್ರೀನಿವಾಸ ಪಾಟೀಲ ಹೇಳಿದರು.
ರಾಷ್ರ್ಟೋತ್ಥಾನ ಪರಿಷತ್, ಬೆಂಗಳೂರು, ಪ್ರಶಿಕ್ಷಣ ಭಾರತಿಬಾಗಲಕೋಟೆಇವರಸಹಯೋಗದಲ್ಲಿ ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಉಪನ್ಯಾಸಕಾರ್ಯಕ್ರಮದಲ್ಲಿ ಮಾತನಾಡಿದಅವರು, ಇಂದು ಭಾರತಜಿಡಿಪಿಯಲ್ಲಿ ವಿಶ್ವದ 3 ನೇ ಸ್ಥಾನದಲ್ಲಿದ್ದು ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ಭಾರತ ವಿಶ್ವದ ನಂಬರ್ಒನ್ ಆಗುವ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಲುಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನಿರಂತರಉಪನ್ಯಾಸ ಕಾರ್ಯಕ್ರಮಗಳು, ಓದ್ಯೋಗಿಕ ಅವಕಾಶಗಳು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಉಪನ್ಯಾಸ ನೀಡಿ ಮಾತನಾಡಿದ ಪತ್ರಕರ್ತ ನಾರನಗೌಡಉತ್ತಂಗಿ, ವಿದ್ಯಾರ್ಥಿಗಳು ಮೆಕಾಲೆ ಮೈಂಡ್ಆಗಬಾರದು, ನಮ್ಮದೇಶದ ಹಿರಿಮೆ, ಗರಿಮೆಗಳನ್ನು ಅರ್ಥ ಮಾಡಿಕೊಂಡುದೇಶಾಭಿಮಾನ ಮೈಗೂಡಿಸಿಕೊಂಡು, ಸದಾದೇಶ ಸೇವೆಗೆ ತುಡಿಯಬೇಕು, ಜಗತ್ತಿಗೇ ಮಾದರಿಯಾದನಮ್ಮ ಸದಾಚಾರ, ಸತ್ಸಂಪ್ರದಾಯಗಳನ್ನು ಗೌರವಿಸುತ್ತಾ, ಸನಾತನ ಸಂಸ್ಕೃತಿಯನ್ನು ಅಳವಡಿಸಿಕೊಂಡು ರಾಮರಾಜ್ಯಕನಸನ್ನು ನನಸು ಮಾಡಬೇಕುಎಂದರು.
ಪ್ರಾಚಾರ್ಯಎಸ್.ಆರ್.ನಾಯಕೋಡಿಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ದೇಶಾಭಿಮಾನದಂತಹ ಮೌಲ್ಯಗಳನ್ನು ಬಿತ್ತಲು ಶ್ರಮಿಸುತ್ತಾ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವಾರು ಶ್ರೇಷ್ಥ ಕಾರ್ಯಗಳನ್ನು ಮಾಡುತ್ತಿರುವರಾಷ್ತ್ರೋತ್ಥಾನ ಪರಿಷತ್ ಸೇವಾ ಕಾರ್ಯ ಶ್ಲಾಘನೀಯಎಂದರು.
ಉಪನ್ಯಾಸಕ ಬಿ.ಸಿ.ಬೊಮ್ಮನ್ನವರ ಸ್ವಾಗತಿಸಿ, ಉಪನ್ಯಾಸಕಡಾ.ಸಂಗಮೇಶ ನಿರೂಪಿಸಿದರು.