ಮಹಲಿಂಗಪುರ

ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರ: ಸುತಾರ

ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರ: ಸುತಾರ

ಮಹಾಲಿಂಗಪುರ: ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ಪ್ರಜೆಗಳು ತಮಗೆ ಬೇಕಾದ ನಾಯಕನನ್ನು ಮತದಾನ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳುವ ಒಂದು ಸಂವಿಧಾನದ ಹಕ್ಕನ್ನು ನೀಡಲಾಗಿದೆ. ಎಂಬ ವಿಚಾರವನ್ನು ಪ್ರಸ್ತಾವಕವಾಗಿ ತಿಳಿಸುವುದರ ಜೊತೆಗೆ ಮತದಾನದ ಮಹತ್ವವನ್ನು ಪ್ರತಿ ನಾಗರಿಕರಿಗೆ ತಿಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಬೆಳಗಲಿಯ ಚುನಾವಣೆ ಸೆಕ್ಟರ್ ಆಫೀಸರ ಎಸ್ಎಂ ಸುತಾರ್ ಹೇಳಿದರು.

ರನ್ನ ಬೆಳಗಲಿಯ ಪಟ್ಟಣ ಪಂಚಾಯತ್ ಕಾರ್ಯಾಲಯದ ಆಶ್ರಯದಲ್ಲಿ 2023ರ ಕನರ್ಾಟಕ ಸಾರ್ವತ್ರಿಕ ಚುನಾವಣೆಯ ಜಾಗೃತಿ ಕಾರ್ಯಕ್ರಮ ಜರುಗಿತು.

ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ಅಜಯ ಭಂಡಾರಕರ್ ರವರು ಈ ಒಂದು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲಾ ಬಿಎಲ್ಓ ಗಳಿಗೂ ಅಂಗನವಾಡಿ ಕಾರ್ಯಕರ್ತರಿಗೂ ಶಾಲಾ ಶಿಕ್ಷಕರಿಗೂ ಅಭಿನಂದನೆ ತಿಳಿಸುವುದರ ಜೊತೆಗೆ ಭಾರತ ದೇಶವು ಜಗತ್ತಿನಲ್ಲಿ ದೊಡ್ಡ ಸಂವಿಧಾನ ಹೊಂದಿರುವ ಏಕೈಕ ರಾಷ್ಟ್ರ. ಪ್ರಜಾಪ್ರಭುತ್ವದ ಹಬ್ಬವೇ ಪ್ರಜೆಗಳ ಹಬ್ಬ ಅದುವೇ ಮತದಾನದ ಪವಿತ್ರವಾದ ಹಬ್ಬ ಆ ಹಬ್ಬದಂದು ಪ್ರತಿಯೊಬ್ಬರು ಮತದಾನ ಮಾಡುವಹಾಗೆ ಜಾಗೃತ ಮೂಡಿಸುವುದು ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿನಂತಿಸಿಕೊಳ್ಳುವುದು. ನಮ್ಮ ಮತ ನಮ್ಮ ಹಕ್ಕು ಎಂಬ ಸಂದೇಶವನ್ನು ತಿಳಿಸಬೇಕು ಎಂದು ಹೇಳಿದರು.

ಸ್ಥಳೀಯ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯಂತೆ ರಾಜವಂಶದ ರಾಣಿಯ ಹೊಟ್ಟೆಯಲ್ಲಿ ಅಂದು ರಾಜ್ಯ ಜನಿಸುತ್ತಿದ್ದ. ಇಂದು ಮತ ಪೆಟ್ಟಿಗೆಯಲ್ಲಿ ಜನನಾಯಕ ಜನ್ಮ ತಾಳುತ್ತಾನೆ. ಇದುವೇ ಪ್ರಜಾಪ್ರಭುತ್ವದ ಭವಿಷ್ಯದ ಭದ್ರಬುನಾದಿಯಾಗಿದೆ. ಮತದಾನ ಎಂಬುದು ಮನೆಯ ಮಗಳಿದ್ದಂತೆ ಅವಳನ್ನು ಯಾವುದೇ ಆಸೆ ಆಮಿಷಗಳಿಗೆ ಮಾರಿಕೊಳ್ಳದೆ. 

ಪ್ರಜೆಗಳಿಗೆ ಆಸರೆಯಾಗುವ ಜನ ನಾಯಕನಿಗೆ ಮತ ನೀಡಿ ನಮ್ಮ ನಾಡಿನ ಭವಿಷ್ಯವನ್ನು ಪ್ರಜ್ವಲಿಸುವಂತೆ ಅಭಿವೃದ್ಧಿಪಡಿಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕೆ ಮತದಾನದ ಹಕ್ಕು ಅದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬ ವಿಚಾರವನ್ನು ತಿಳಿಸಿದರು.

ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಚುನಾವಣೆ ಅಧಿಕಾರಿಗಳಾದ ಎಸ್ ಎಸ್ ತಟ್ಟಿಮನಿ, ಅಂಗನವಾಡಿ ಮೇಲ್ವಿಚಾರಕರಾದ ವಿ ಎಸ್ ಮುನ್ನವಳ್ಳಿ, ಪೊಲೀಸ್ ಇಲಾಖೆಯ ಸುರೇಶ್ ಎಸ್ ಕಡಪಟ್ಟಿ, ಪಂಚಾಯತ್ ಸಿಬ್ಬಂದಿಗಳಾದ ಪಿ. ಡಿ ನಾಗನೂರು, ಸುರೇಶ ಹರಿಜನ್,ಎಸ್ ಬಿ ಚೌದ್ರಿ,ಸಚಿನ್ ಕಾಸರ, ಪೂನಂ ಕುಂಬಾರ ಮತ್ತು ಬಿ ಎಲ್ ಓ ಗಳು, ಅಂಗನವಾಡಿ ಕಾರ್ಯಕರ್ತರು, ಸಹಾಯಕರು,ಪಟ್ಟಣದ ನಾಗರಿಕರು ಭಾಗವಹಿಸಿದ್ದರು 

ಸುದ್ದಿ ಓದಿ