ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿಗೆ ಸನ್ಮಾನ
ಮಹಾಲಿಂಗಪುರ 11: ಸ್ಥಳೀಯ ಪುರಸಭೆ ಉಪಚುನಾವಣೆಯಲ್ಲಿ ಜಯಗಳಿಸಿದ ಪಕ್ಷೇತರ ಅಭ್ಯರ್ಥಿ ಹಾಗೂ ಸಮಾಜದ ಹಿರಿಯ ಸಜನಸಾಬ ಪೆಂಡಾರಿಯವರನ್ನು ಸ್ಥಳೀಯ ಅಂಜುಮನ್ ಏ ಇಸ್ಲಾಂ ಭವನದಲ್ಲಿ ಪಟ್ಟಣದ ಮುಸ್ಲಿಂ ಸಮುದಾಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು, ಸಜನಸಾಹೇಬರು ಮುಸ್ಲಿಂ ಸಮುದಾಯದಕಲ್ಲದೆ ಇತರೆ ಜಾತಿ ಜನಾಂಗದ ಜನರ ಒಳಿತನ್ನು ಬಯಸಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದವರಾಗಿದ್ದಾರೆ.ಮುಂಬರುವ ದಿನಗಳಲ್ಲಿ ವಾರ್ಡಿನಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಅಭಿವೃದ್ಧಿಯ ಹರಿಕಾರರಾಗಲಿ ಎಂದರು.
ನೂತನ ಪುರಸಭೆ ಸದಸ್ಯ ಸಜನಸಾಬ ಪೆಂಡಾರಿ ಮಾತನಾಡಿ, ನನ್ನ ವಾರ್ಡಿನ ಜನಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ ಮತ್ತು ನನ್ನ ಗೆಲುವಿಗೆ ಪರೋಕ್ಷ ಹಾಗೂ ಅಪರೋಕ್ಷವಾಗಿ ಪ್ರಯತ್ನಿಸಿದ ಎಲ್ಲ ಹಿರಿಯರು ಹಾಗೂ ಬಂಧುಗಳಿಗೆ ಧನ್ಯವಾದಗಳು ಎಂದರು.
ಯಾಸೀನ್ ಅತ್ತಾರ, ಬಂದೇನವಾಜ ಸಿಂದಗಿ, ಕಮಾಲ ತರ್ಕಾರ, ಶಮ್ಸುದ್ದಿನ್ ತೇರದಾಳ, ಮುಸ್ತಾಖ ಚಿನಗುಂಡಿ, ಗೈಬುಸಾಬ ಪೆಂಡಾರಿ, ಸಲಿಂ ಕರೋಶಿ , ಜಮೀರ್ ಯಕ್ಸoಬಿ, ನಬೀಸಾಬ ಯಕ್ಷoಬಿ, ಯಾಕೂಬಸಾಬ ಪೆಂಡಾರಿ, ಸದ್ದಾಂ ಮಕಾಂದಾರ, ಇಲಾಯಿ ಬಳಗಾರ, ನೂರಅಹಮದ ಪೆಂಡಾರಿ, ಶಿರಾಜ ಪಾಂಡು ಉಸ್ಮಾನ್ ಪೆಂಡಾರಿ ಇನ್ನೂ ಅನೇಕರಿದ್ದರು.