ಘಟಪ್ರಭೆಗೆ ಒಳಹರಿವು ಹೆಚ್ವಳ : ಮುಳುಗುವ ಹಂತದಲ್ಲಿ ಹುನ್ನೂರು ವಿಠ್ಠಲ ಮಂದಿರ

ಘಟಪ್ರಭೆಗೆ ಒಳಹರಿವು ಹೆಚ್ವಳ : ಮುಳುಗುವ ಹಂತದಲ್ಲಿ ಹುನ್ನೂರು ವಿಠ್ಠಲ ಮಂದಿರ

ಬೆಳಗಾವಿ : ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಸದಾ ಇರುತ್ತಿದ್ದ ಹುನ್ನೂರು ವಿಠಲ ದೇವಸ್ಥಾನವು ಜಲಾಶಯದ ನೀರು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ತೆರವು ಆಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ವಳವಾಗಿದ್ದು, ವಿಠ್ಠಲ ದೇವಸ್ಥಾನವು ಮುಳುಗುವ ಹಂತದಲ್ಲಿ ಇದೆ.

     ಕಳೆದ ಕೆಲವು ದಿನಗಳ ಹಿಂದೆ ಚುನಾವಣೆ ವೇಳೆ ಓರ್ವ ಹಿರಿಯ ಅಧಿಕಾರಿ ಮಾಡಿದ ಯಡವಟ್ಟಿನಿಂದ ಹಿಡಕಲ್ ಜಲಾಶಯದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಘಟಪ್ರಭಾ ನದಿಗೆ ಹರಿದು ಬಿಡಲಾಗಿತ್ತು. ಈ ನಿಟ್ಟಿನಲ್ಲಿ ಹಿಡಕಲ್ ಜಲಾಶಯದಲ್ಲಿನ ನೀರಿನ‌ ಸಂಗ್ರಹ ಸಂಪೂರ್ಣವಾಗಿ ಕಡಿಮೆಯಾಗಿತ್ತು.

    ಇದರಿಂದ ಜಲಾಶಯದಲ್ಲಿ ಕೇವಲ 2 ಟಿಎಮ್ ಸಿ ನೀರು ಮಾತ್ರ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರು ಗ್ರಾಮದ ಶ್ರೀ ವಿಠ್ಠಲ ದೇವಸ್ಥಾನವು ತೆರವಾಗಿತ್ತು. ಇದರಿಂದ ಇಲ್ಲಿ ಭಕ್ತರ ದಂಡು ದಿನ ನಿತ್ಯ ಆಗಮಿಸುತ್ತಿತ್ತು. 

    ಆದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ನೀರಿನ ಒಳಹರಿವು ಹೆಚ್ಚಳವಾಗುತ್ತಿರುವದರಿಂದ ಹಿಡಕಲ್ ಜಲಾಶಯದಲ್ಲಿ ನೀರಿನಮಟ್ಟ ಹೆಚ್ವುತ್ತಿದೆ. ಇದರಿಂದ ಹುನ್ನೂರು ವಿಠ್ಠಲ ಮಂದಿರವು ಸದ್ಯ ಮುಳುಗುವ ಹಂತಕ್ಕೆ ಬಂದಿದೆ.

ಸುದ್ದಿ ಓದಿ