ರೋಟರಿ ಕಂಟೋನ್ಮೆಂಟ್ ನೂತನ ಅಧ್ಯಕ್ಷ, ಕಾರ್ಯದರ್ಶಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಬಳ್ಳಾರಿ 29: ರೋಟರಿ ಕಂಟೋನ್ಮೆಂಟ್ ಬಳ್ಳಾರಿಯ ನೂತನ ಅಧ್ಯಕ್ಷರ, ನೂತನ ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬಳ್ಳಾರಿ ರೋಟರಿ ಕಂಟೋನ್ಮೆಂಟ್ ಗುರು ಕಾಲೋನಿಯಲ್ಲಿ ನೆರವೇರಿತು. ನೂತನ ಪದಾಧಿಕಾರಿಗಳಿಗೆ ಪಿ.ಡಿ.ಜಿ. ಬಿ.ಆರ್.ಆನಂದ್ರಾವ್ ರವರು ಬೋಧಿಸಿದರು. ನೂತನ ಅಧ್ಯಕ್ಷರಾಗಿ ರೋಟರಿ ಪಿ.ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ರೋಟರಿ ಸುಬ್ರಮಣ್ಯಮ್ ಅವರು ಅಧಿಕಾರ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್ ಮಾತನಾಡಿ, ರೋಟರಿಯ ಸೇವೆಯನ್ನು ಶ್ಲಾಘಿಸಿದರು. ಮತ್ತು ಬಳ್ಳಾರಿಯನ್ನು ಸ್ವಚ್ಛ ಮತ್ತು ಹಸಿರುಭರಿತ ನಗರವನ್ನಾಗಿಸಲು ರೋಟರಿ ಸದಸ್ಯರು ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಫಾದರ್ ಫ್ರಾನ್ಸಿಸ್ ಅವರು ಮಾತನಾಡಿ, ರೋಟರಿ ಸೇವೆ ಮತ್ತು ಕೈಂಡ್ನೆಸ್ ಎಂದು ಬಣ್ಣಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಚಂದ್ರಶೇಖರಗೌಡ ನೆರವೇರಿಸಿದರು. ಎಲ್.ವಿರುಪಾಕ್ಷಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಗುರುಮ್ಯಾಥ್ಯೂ, ಡಾ. ನಾರಾಯಣರಾವ್, ವಿಷ್ಣುವರ್ಧನರೆಡ್ಡಿ, ಮಹಾರುದ್ರಗೌಡ, ಗುರುಪ್ರಸಾದ್, ಕೋಟೇಶ್ವರರಾವ್, ಯತಿರಾಜುಲು, ವಸಂತಕುಮಾರ್, ವೇಣುಗೋಪಾಲ್, ನ್ಯಾಮೇಶ್, ರಮೇಶ ಸೋನಿ, ವೆಂಕಟರಾಮಪ್ಪ, ಜೆ.ಶ್ರೀಧರ, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.