ಮುದ್ದೆಬಿಹಾಲ್

ವಿದ್ಯಾರ್ಥಿಗಳ ವಸತಿ ನಿಲಯದ ನೂತನ ಕಟ್ಟಡ ಲೋಕಾರ್ಪಣೆ

ವಿದ್ಯಾರ್ಥಿಗಳ ವಸತಿ ನಿಲಯದ ನೂತನ ಕಟ್ಟಡ ಲೋಕಾರ್ಪಣೆ

ಮುದ್ದೇಬಿಹಾಳ 06: ಡಾ, ಬಿ ಆರ್ ಅಂಬೇಡ್ಕರವರು ನಿಜವಾದ ಶೋಷಿತ ಹಾಗೂ ಬಡ ಸಮಾಜದ ಕುಟುಂಬ ವರ್ಗದ ಮಕ್ಕಳು ಶಿಕ್ಷಣವಂತರಾಗಿ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಆಯಾ ಸಮಾಜಕ್ಕೆ ವಿಶೇಷ ಸ್ಥಾನ ಮಾನಗಳನ್ನು ನೀಡಿ ಸಂವಿಧಾನ ರಚಿಸಿದ್ದು ನಮಗೆಲ್ಲ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಗ್ರಾಮೀಣ ಮಟ್ಟದ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಗುಣಮಟ್ಟ ಶಿಕ್ಷಣ ಒದಗಿಸುವ ಸಲುವಾಗಿ ಇಂತಹ ವಸತಿ ನಿಲಯಗಳನ್ನು ನಿರ್ಮಿಸುವ ಮೂಲಕ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ ಕಾರಣ ಸರಕಾರದ ಸೌಲಭ್ಯಗಳನ್ನು ಸಮರ​‍್ಕವಾಗಿ ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿದ್ಯಾವಂತರಾಗಿ ಅಂಬೇಡ್ಕರವರ ಕನಸು ನನಸು ಮಾಡಬೇಕು ಎಂದರು. 

ಪಟ್ಟಣದ ತಗಡಗಿ ರಸ್ತೆ ಮಾರ್ಗದಲ್ಲಿರುವ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಎಸ್‌ಸಿ, ಎಸ್‌ಟಿ ಮೆಟ್ರಿಕ್ ನಂತರ ವಿವಿಧ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಸತಿ ನಿಲಯದ ನೂತನ ಕಟ್ಟಡವನ್ನು ಶುಕ್ರವಾರ ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು.  

ಈಗಾಗಲೇ ತಾಲೂಕಿನಲ್ಲಿ ಒಟ್ಟು 12 ಎಸ್‌ಸಿ ವಿದ್ಯಾರ್ಥಿಗಳ ವಸತಿ ನಿಲಯಗಳು ಇದ್ದು, ಅದರಲ್ಲಿ 2008 ರಲ್ಲಿ ಈ ವಸತಿ ನಿಲಯ ಮಂಜೂರಿಗೊಂಡು ಖಾಸಗಿ ಮಾಲಿಕತ್ವದ ಬಾಡಗಿ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು,  ಅಲ್ಲಿಂದ ಇಲ್ಲಿಯವರೆಗೂ ಸ್ವಂತ ಕಟ್ಟಡವಿಲ್ಲದಾಗಿತ್ತು ವಿದ್ಯಾರ್ಥಿಗಳಿಗೂ ವಸತಿ ನಿಲಯದ ಅವಶ್ಯಕತೆ ಮನಗಂಡ ಆಡಳಿತ ಮಂಡಳಿಯ ತೀರ್ಮಾನಿಸಿ, 20 ಮಾರ್ಚ 23 ರಂದು 4. ಕೋಟಿ 21 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಒಟ್ಟು 32 ವಾಸದ ಕೋಠಡಿಗಳನ್ನೊಳಗೊಂಡ 300ರಿಂದ 400 ವಿದ್ಯಾರ್ಥಿಗಳು ಪ್ರವವೇಶ ಪಡೆದು ವಸತಿಗೆ ಅವಕಾಶ ಕಲ್ಪಿಸಲಾಗಿದೆ.  

 ಕಟ್ಟಡವನ್ನು ನಗುತ್ತಿಗೆದಾರರು ಸಂಪೂರ್ಣ ಗುಣಮಟ್ಟದಿಂದ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ ಸಧ್ಯ ವಸತಿ ನಿಲಯದಲ್ಲಿ ಊಟದ ಜತೆ ವಿಶಾಲ ಕೋಣೆಗಳು, ಕಾಟು, ಕಪಾಟು, ಫ್ಯಾನ್, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ, ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಪಾಕಿಂರ್ಗ್ ವ್ಯವಸ್ಥೆ ಮಾಡಲಾಗಿದ್ದು,  ವಿವಿಧ ಕೋರ್ಸುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಎಲ್ಲವೂ ಆನ್ ಲೈನ ಮೂಲಕವೇ ಆಯ್ಕೆ ಪ್ರಕ್ರೀಯೆ ನಡೆಯುತ್ತಿದೆ. 

ಸಂಸ್ಕಾರ, ಸಂಸ್ಕೃತಿಯೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಈಗ  ನಮ್ಮ ಸರಕಾರ ಹೊಸ ಹೆಜ್ಜೆಯನ್ನಿಟ್ಟು ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆದುಕೊಳ್ಳುವುದರ ಜೊತೆಗೆ ಕಟ್ಟಡವನ್ನು ನಾಜೂಕಿನಿಂದ ನಿಲಯದ ಯಾವೂದೆ ವಸ್ತುಘಲು ಹಾನಿಯಾಗದಂತೆ ಮತ್ತು ಸ್ವಚ್ಛತೆಯಿಂದೆ ನೋಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಲ ಮೇಲೆ ಇರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ವಿನಂತಿಸಿದರು. 

ಇಂದಿನ ಸ್ಪಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ನೀಡುವ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವ ಮೂಲಕ ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಹೆತ್ತವರ ವಿದ್ಯೆ ಕಲಿಸಿದ ಗುರುಗಳ ಮತ್ತು ಊರಿನ ದೇಶದ ಕೀರ್ತಿ ಬೆಳೆಗಿಸಿದಂತಾಗುತ್ತದೆ.   

ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕ ಟಿ ವಿ ಮಂಟೂರ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಸದಸ್ಯರಾದ ಹಣಮಂತ ಭೋವಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಶಾಹಾಜದಬಿ ಹುಣಸಗಿ, ರಪೀಕ ದ್ರಾಕ್ಷೀ, ಪುರಸಭೆ ನಾಮ ನಿರ್ಧೇಶಿತ ಸದಸ್ಯರಾದ ಗೋಪಿ ಮಡಿವಾಳರ,  ಸಂತೋು ನಾಯ್ಕೋಡಿ, ಹರೀಷ ಬೇವೂರ, ಅಶೋಕ ಪಾದಗಟ್ಟಿ, ವಿವಿಧ ವಸತಿ ನಿಲಯದ ವಾರ್ಡನ್ ಗಳು, ಸಿಬ್ಬಂದಿ ವರ್ಗದವರು, ಗುತ್ತಿಗೆದಾರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ