ಮಹಲಿಂಗಪುರ

ನೂತನ ಕಾಳಿಕಾದೇವಿ ದೇವಸ್ಥಾನ ಉದ್ಘಾಟನೆ

ನೂತನ ಕಾಳಿಕಾದೇವಿ ದೇವಸ್ಥಾನ ಉದ್ಘಾಟನೆ


ಮಹಾಲಿಂಗಪುರ : ಪಟ್ಟಣದ ಹಳ್ಳದ ಪಕ್ಕ ಮಾರುತಿ ದೇವಸ್ಥಾನದ ಹತ್ತಿರ ನೂತನ ಕಾಳಿಕಾದೇವಿ ದೇವಸ್ಥಾನದ ಉದ್ಘಾಟನೆ, ಶ್ರೀ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳ ಪ್ರಯುಕ್ತವಾಗಿ ಫೆಬ್ರವರಿ 7 ಸೋಮವಾರ ರಂದು ಮಧ್ಯಾಹ್ನ 3ರಿಂದ ಫೆ. 9 ಬುಧವಾರ ರವರೆಗೆ ಮೂರು ದಿವಸಗಳ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪಟ್ಟಣದ ವಿಶ್ವಕರ್ಮ ಸಮಾಜ ಈ ಮೂಲಕ ತಿಳಿಸಿದೆ. 

ಸ್ಥಳೀಯ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ವಿಶ್ವಕರ್ಮ ಸಮಾಜ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರು ಮಾತನಾಡುತ್ತಾ ಫೆ. 7ರಂದು ಬಸ್ಟ್ಯಾಂಡ್ ಹತ್ತಿರದ ಗಣಪತಿ ದೇವಸ್ಥಾನದಿಂದ ಸಕಲ ಮಂಗಳವಾದ್ಯ, ಕಳಸ, ಆರತಿ ಹಾಗೂ ಪೂರ್ಣ ಕುಂಭಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಕಾಳಿಕಾದೇವಿ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು ಮತ್ತು 3:00 ಗಂಟೆಯ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುವವು.  

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಶ್ರೀ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳು ಮತ್ತು ಸಾನಿಧ್ಯವನ್ನು ಚಿಮ್ಮಡದ ಜನಾರ್ಧನ್ ಮಹಾರಾಜರು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತೇರದಾಳ ಶಾಸಕ ಸಿದ್ದು ಸವದಿ, ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬಸನಗೌಡ ಪಾಟೀಲ್, ಸ್ಥಳೀಯ ಕಾ.ನಿ.ಪ ಸಂಘ ಅಧ್ಯಕ್ಷ ಮಹೇಶ ಆರಿ, ಅತಿಥಿಗಳಾಗಿ ಜಮಖಂಡಿ, ಮುಧೋಳ, ಮೂಡಲಗಿ, ಬನಹಟ್ಟಿ, ರಬಕವಿ, ತೇರದಾಳ, ಹನಗಂಡಿ, ಬೆಳಗಲಿ ಈ ಪಟ್ಟಣಗಳ ವಿಶ್ವಕರ್ಮ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಮಹಾಲಿಂಗಪ್ಪ ಬಟ್ಟಲ ವಹಿಸಲಿದ್ದಾರೆ. 

ಮಂಗಳವಾರ ಮುಂಜಾನೆ ಫೆಬ್ರವರಿ 8ರಂದು ಮಹಾಗಣಪತಿ ಪೂಜೆಯೊಂದಿಗೆ ಎರಡನೇ ದಿವಸದ ಕಾರ್ಯಕ್ರಮಗಳು ಆರಂಭವಾಗಿ, ಸಾಯಂಕಾಲದವರೆಗೆ ಅನೇಕ ವೈದಿಕ ಸಂಸ್ಕಾರಗಳು ನೆರವೇರಲಿವೆ. 9ರಂದು ಬೆಳಗ್ಗೆ ಶುಭ ಮುಹೂರ್ತದೊಂದಿಗೆ 8 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ಜರುಗಿ, 10 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆದು ಮುಂಜಾನೆ 11ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. 

ಪ್ರತಿ ದಿವಸ ಗಣ್ಯ ಮಾನ್ಯರಿಗೆ, ದಾನಿಗಳಿಗೆ ಸನ್ಮಾನ ಕಾರ್ಯಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿವೆ ಆದ್ದರಿಂದ ಪಟ್ಟಣದ ಹಾಗೂ ಸುತ್ತಲಿನ ಊರುಗಳ ಸದ್ಭಕ್ತರು ಈ ಕಾರ್ಯಕ್ರಮ ಯಶಸ್ವಿಗೊಳ್ಳಲು ತಮ್ಮ ಭಾಗವಹಿಸುವಿಕೆಯೇ ಪ್ರಮುಖವಾಗಿದೆ ತಮ್ಮ ಬರುವಿಕೆಗೆ ನಮ್ಮ ಸ್ವಾಗತವಿದೆ ಎಂದು ಈ ಮೂಲಕ ವಿನಂತಿಯ ಕೋರಿಕೆ ಮಾಡಿದರು. 

ಈ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಮಹೇಶ್ ಬಡಿಗೇರ್ ಹಾಗೂ ಶಂಭುಲಿಂಗ ಬಡಿಗೇರ್ ಮಾತನಾಡಿದರು. ಮನೋಹರ್ ಪತ್ತಾರ, ಸಿಂಧೂರ ಬಾಳಿಗೇರಿ, ಈರ​‍್ಪ ಬಡಿಗೇರ, ಸುರೇಶ್ ಬಡಿಗೇರ್ ಉಪಸ್ಥಿತರಿದ್ದರು. ಹನುಮಂತ ಬಡಿಗೇರ್ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹೇಶ್ ಬಟ್ಟಲ್ ವಂದಿಸಿದರು. 


ಸುದ್ದಿ ಓದಿ