ಮಹಲಿಂಗಪುರ

ತೇರದಾಳ ಶಾಸಕರಿಂದ ನೂತನ ಬಸ್ ತಂಗುದಾಣಕ್ಕೆ ಚಾಲನೆ

ತೇರದಾಳ ಶಾಸಕರಿಂದ ನೂತನ ಬಸ್ ತಂಗುದಾಣಕ್ಕೆ ಚಾಲನೆ

ಮಹಾಲಿಂಗಪುರ01: ರಬಕವಿ ಬನಹಟ್ಟಿ ತಾಲೂಕಿನ ಮಧಬಾವಿ ಗ್ರಾಪಂ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದಲ್ಲಿ 2019-20 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 5 ಲಕ್ಷ ರೂಗಳ ಮೊತ್ತದಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಕ್ಕೆ ಮಂಗಳವಾರ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿ ಲೋಕಾರ್ಪಣೆಗೊಳಿಸಿದರು. 

 ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಮಹತೇಶ ಹಿಟ್ಟಿನಮಠ, ಲಕ್ಷ್ಮಣ ಇಟ್ನಾಳ, ರಾಜು ಸೈದಾಪುರ, ಶಾಂತವ್ವ ಪೂಜಾರಿ, ಮಹಾನಂದಾ ಗಾಡಿಕಾರ, ಹಿರಿಯರಾದ ಗಿರಿಮಲ್ಲಪ್ಪ ಶಿವಾಪುರ, ರಾಚಪ್ಪ ಉಳ್ಳಾಗಡ್ಡಿ, ಪ್ರಕಾಶ ಪಾಯಗೊಂಡ, ರಾಮಣ್ಣಗೌಡ ಉಳ್ಳೆಗಡ್ಡಿ, ರವಿ ಯಲ್ಲಟ್ಟಿ, ಮಹಾದೇವ ಹುದ್ದಾರ, ಮುತ್ತಪ್ಪ ಯಲ್ಲಟ್ಟಿ, ಜಾಯಪ್ಪ ಅವರಾದಿ, ಶಿವಲಿಂಗ ಕೌಜಲಗಿ, ಲಕ್ಷ್ಮಣ ನಾವಿ, ದಯಪ್ಪ ಸೈದಾಪುರ ಇನ್ನೂ ಅನೇಕ ಭಾಜಪ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿ ಓದಿ