ಚಿಕ್ಕೋಡಿ

ಅಂಕಲಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ

ಅಂಕಲಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ

ಲೋಕದರ್ಶನ ವರದಿ 

ಮಾಂಜರಿ 20 : ಗ್ರಾಮೀಣ ಭಾಗದ ಬಡ ಕುಟುಂಬ ಮಕ್ಕಳಿಗೆ ಗುಣಾತ್ಮಕದ ಶಿಕ್ಷಣ ದೊರೆಯಬೇಕೆಂದು ಶಿಕ್ಷಣ ಕ್ರಾಂತಿ ಮಾಡಿರುವ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ಇವರ ಕಾರ್ಯ ಜನಮಚ್ಚುವಂತಾಗಿದೆ ಅವರ ಶೈಕ್ಷಣಿಕ ಕ್ರಾಂತಿಯ ಮುಖಾಂತರ ಎಂದು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಪ್ರತಿಯೊಂದು ಕುಟುಂಬದ ಬಡ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಶಿಕ್ಷಣ ದೊರೆಯುವಂತಾಗಿದೆ ಎಂದು ಚಿದಾನಂದ ಕೋರೆ ಸಹಕಾರಿಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಹೇಳಿದರು. 

ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ಇವರು ದಾನ ನೀಡಿದ ತಮ್ಮ ಸ್ವಂತ ಜಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಮತ್ತು ಗ್ರಾಮ ಪಂಚಾಯಿತಿಯ ನೆರಗ ಯೋಜನೆಯ ಮುಖಾಂತರ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರೇಶ್ ಪಾಟೀಲ್ ರನಜಿತ್ ಶಿರಶೆಟ್ ಶಿವಾಜಿ ಕೋಟಿವಾಲೆ ವಿಕಾಸ್ ಪಾಟೀಲ್ ಹಾಜರಿದ್ದರು.

ನೂತನವಾಗಿ ನಿರ್ಮಿಸಿದೆ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಮಲ್ಲಿಕಾರ್ಜುನ್ ಕೋರೆ ಸುರೇಶ್ ಪಾಟೀಲ್ ಶಿವಾಜಿ ಕೋಟಿ ವಾಲೆ ವಿಕಾಸ್ ಪಾಟೀಲ್ ಇವರ ಹಸ್ತದಿಂದ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪಾಂಡುರಂಗ ವಡ್ಡರ್ ಪಾಂಡುರಂಗ ಸನದಿ ಅಲ್ಲಾ ಬಾಕ್ಸ್‌ ಪಟವೇಗಾರ ವಿವೇಕ್ ಕಮತೆ ಕೃಷ್ಣ ಕಿಲಿಕತ್ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ವಿನೋದ್ ಭಂಡಾರಿ ಹಾಗೂ ಇನ್ನುಳಿದ ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು. 


ಸುದ್ದಿ ಓದಿ