ಶಿಗ್ಗಾವ್

ಶುದ್ದ ನೀರಿನ ಘಟಕ ಉದ್ಘಾಟನೆ: ಶಶಿಧರ ಯಲಿಗಾರ

ಶುದ್ದ ನೀರಿನ ಘಟಕ ಉದ್ಘಾಟನೆ: ಶಶಿಧರ ಯಲಿಗಾರ

ಶಿಗ್ಗಾವಿ 10: ವಿಧ್ಯಾರ್ಥಿಗಳಿಗೆ ನಾನು ಮೊದಲೇ ಹೇಳಿದ್ದೆ ನಿಮಗೆ ಉಪಯೋಗವಾಗುವಂತಹ ಶುದ್ದ ನೀರಿನ ಘಟಕವನ್ನು ಸ್ಥಾಪಿಸುತ್ತೇನೆ ಎಂದು ಮಾತು ಕೋಟ್ಟಿದ್ದೇ ಆ ನಿಟ್ಟಿನಲ್ಲಿ ಇಂದು ಶುದ್ದ ನೀರಿನ ಘಟಕ ಸ್ಥಾಪಿಸಿದ್ದೇನೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ಪಟ್ಟಣದ ಸರಕಾರಿ ಗೌರಮ್ಮ ಅಂಕಲಕೋಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುದ್ದ ನೀರಿನ ಘಟಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಸುತ್ತಮುತ್ತಲಿನ ಹಳ್ಳಿಯಿಂದ ಸುಮಾರು ಸಾವಿರಾರು ಮಕ್ಕಳು ಬರುತ್ತಾರೆ ಅಲ್ಲದೇ ಇದು ಪಟ್ಟಣದ ಹೊಸ ಬಸ ನಿಲ್ದಾಣ ಹಾಗೂ ಹಳೇ ಬಸ ನಿಲ್ದಾಣದಿಂದ ಬರೋಬ್ಬರಿ ಸುಮಾರು 2 ಕಿ.ಮೀ ದೂರದಲ್ಲಿದೆ ಈಗಿದ್ದಾಗ ಅವರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಕಾಲೇಜಿಗೆ ಬಂದ ವಿಧ್ಯಾರ್ಥಿಗಳು ದಣೀವಾರಸಿಕೊಂಡು ಆಸಕ್ತಿಯಿಂದ ಪಾಠಗಳನ್ನು ಆಲಿಸಬಹುದು ಎಂಬ ಉದ್ದೇಶದಿಂದ ಶುದ್ದ ನೀರಿನ ಘಟಕ ಸ್ಥಾಪಿಸಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಕಾಲೇಜಿನ ಭೂದಾನಿ ಈರಣ್ಣಾ ಅಂಕಲಕೋಟಿ, ಪ್ರಾಚಾರ್ಯ ಡಾ.ಸಿ.ಎಸ್‌.ಕುಮ್ಮೂರ, ಡಾ.ಶ್ರೀಶೈಲ ಹುದ್ದಾರ, ಡಾ.ಎಂ.ಸಿ.ರಾಠೋಡ, ಡಾ.ಕೆ.ಎಸ್‌.ಪಾಟೀಲ, ಡಾ.ಡಿ.ಬಿ.ಸೊಗಲದ, ಪ್ರೋ ಅಂಬೇರಿ ಪಿಳ್ಳೆ, ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ