ಮಹಲಿಂಗಪುರ

ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರ ಉದ್ಘಾಟನೆ

ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರ ಉದ್ಘಾಟನೆ

ಮಹಾಲಿಂಗಪುರ 25: ಸ್ಥಳೀಯ ಸಾತ್ವಿಕ ಪದಾರ್ಥಗಳ ವ್ಯಾಪಾರಿ ಸಾತ್ವಿಕ ವಿಚಾರಗಳ ಸದಾಚಾರಿ ಮಹಾಲಿಂಗಪ್ಪ ಬೀಳಗಿ ಅವರು ಸ್ವಯಂಪ್ರೇರಿತ ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರ ಆರಂಭಿಸಿದ್ದಾರೆ. 

ಸಾರ್ವಜನಿಕರಿಗೆ ಆಧ್ಯಾತ್ಮಿಕ ಜ್ಞಾನ, ಧ್ಯಾನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅಮೂಲ್ಯ ಗ್ರಂಥಗಳನ್ನು ಎರವಲು ನೀಡುವ ಮೂಲಕ ಸಾತ್ವಿಕ ವಿಚಾರಗಳನ್ನು ಪಸರಿಸುವ ಉದ್ದೇಶದಿಂದ ತಮ್ಮ ಸಂಗ್ರಹದಲ್ಲಿದ್ದ 50ಕ್ಕೂ ಹೆಚ್ಚು ಗ್ರಂಥಗಳನ್ನು ವಿನಿಮಯ ಕೇಂದ್ರಕ್ಕೆ ಸಮರ​‍್ಿಸಿದ್ದಾರೆ. ಅಲ್ಲದೇ ಅಂದಾಜು 10 ಸಾವಿರ ರೂ. ಮೌಲ್ಯದ ಗ್ರಂಥಗಳನ್ನು ಖರೀದಿಸಿದ್ದಾರೆ. ಹವ್ಯಾಸಿ ಗ್ರಂಥ ಸಂಗ್ರಹಕಾರರಿಂದಲೂ ಎರವಲು ಪಡೆದು ಓದುಗರಿಗೆ ಷರತ್ತುಗಳ ಆಧಾರದ ಮೇಲೆ ಪುಸ್ತಕ ನೀಡುವ ಸೇವೆ ಆರಂಭಿಸಿದ್ದಾರೆ.  

ಯಾವುದೇ ಕಾರಣಕ್ಕೂ ಲಾಭಕ್ಕಾಗಿ ರಾಸಾಯನಿಕ ಮತ್ತು ಅನಾರೋಗ್ಯಕರ ಪದಾರ್ಥಗಳನ್ನು ಮಾರುವುದಿಲ್ಲ ಅಂತ ಸಂಕಲ್ಪ ಮಾಡಿ ಕೇವಲ ಸಾವಯವ ಮತ್ತು ಆರೋಗ್ಯಕರ ವಸ್ತುಗಳನ್ನು ಮಾತ್ರ ಮಾರಾಟ ಮಾಡುವ ಮೂಲಕ ಸಾತ್ವಿಕ ವ್ಯಾಪಾರಿ ಎನಿಸಿದ ಬೀಳಗಿಯವರು ಸಾತ್ವಿಕ ವಿಚಾರಗಳನ್ನು ಹಂಚುವ ಮೂಲಕ ಗ್ರಂಥಗಳ ವಿನಿಮಯ ಕೇಂದ್ರ ಆರಂಭಿಸಿ ಸ್ವಸ್ಥ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿರುವುದು ಶ್ಲಾಘನೀಯ.  

ಸ್ಥಳೀಯ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪಿರಾ​‍್ಯಮಿಡ್ ಧ್ಯಾನ ಮಂದಿರದಲ್ಲಿ ಇತ್ತೀಚೆಗೆ ನಡೆದ ಹುಣ್ಣಿಮೆ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಬೀಳಗಿಯವರ ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರವನ್ನು ಸಹಜಾನಂದ ಸ್ವಾಮಿಜಿ ಉದ್ಘಾಟಿಸಿದರು. ಧ್ಯಾನ ಮಾರ್ಗದರ್ಶಿಗಳಾದ ವಿಶಾಲಾಕ್ಷಿ ಅಥಣಿ, ಎಸ್‌.ಐ.ಕುಂದಗೋಳ, ಮಲ್ಲೇಶಪ್ಪ ಕಟಗಿ, ಜಯಶ್ರೀ ಹಿರೇಮಠ, ಮಹಾಲಿಂಗ ಬೀಳಗಿ, ಬುರುಡ ಬನಹಟ್ಟಿ ಇದ್ದರು. 

ಧ್ಯಾನ ಮತ್ತು ಸತ್ಸಂಗ: ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಆವರಣದಲ್ಲಿರುವ ಪಿರಾ​‍್ಯಮಿಡ್ ಧ್ಯಾನ ಮಂದಿರದಲ್ಲಿ ಬ್ರಹ್ಮರ್ಷಿ ಪಿತಾಮಹ ಡಾ.ಸುಭಾಸ್ ಪತ್ರಿಜಿಯವರ ಆಶೀರ್ವಾದದೊಂದಿಗೆ ನಿಯಮಿತವಾಗಿ ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಧ್ಯಾನ ಮತ್ತು ಸತ್ಸಂಗ ಜರುಗುತ್ತದೆ. ಸಹಜಾನಂದ ಸ್ವಾಮಿಜಿ ಅಧ್ಯಕ್ಷತೆ ಹಾಗೂ ಎಸ್‌.ಐ.ಕುಂದಗೋಳ ಅವರ ಮಾರ್ಗದರ್ಶನ ಇರುತ್ತದೆ. 


ಸುದ್ದಿ ಓದಿ