ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ
ಬಳ್ಳಾರಿ 18 : ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಡಿಯನ್ ಸೊಸೈಟಿ ಫರ್ ಟೆಕ್ನಿಕಲ್ ಎಡ್ಯುಕೇಷನ್ (ಐ.ಎಸ್.ಟಿ.ಇ) ವಿದ್ಯಾರ್ಥಿ ಅಧ್ಯಾಯನದ ಘಟಕ - ಆರ್ವೈಎಂಇಸಿ ವತಿಯಿಂದ ಎಮರಿ್ಜಂಗ್ ಡೈರೆಕ್ಷನ್ಸ್ ಇನ್ ಟೆಕ್ನಿಕಲ್ ಎಡ್ಯುಕೇಷನ್ -ತಾಂತ್ರಿಕ ಶಿಕ್ಷಣದಲ್ಲಿ ಉದಯೋನ್ಮುಖ ನಿರ್ದೇಶನ ಕಿರಣಗಳು ಕುರಿತು ಎರಡು-ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ದಿನಾಂಕ ಜುಲೈ 18, ಬೆಳಗ್ಗೆ 10.00 ಜರುಗಿತು.
ಶ್ರೀ ಜಾನೆಕುಂಟೆ ಬಸವರಾಜ ವಿ.ವಿ.ಸಂಘ ಉಪಾಧ್ಯಕ್ಷ ಮತ್ತು ಆರ್ವೈಎಂಇಸಿ ಅಧ್ಯಕ್ಷರು, ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಸುರೇಶ್ ಡಿ.ಎಸ್ ಅಧ್ಯಕ್ಷರು, ಕರ್ನಾಟಕ ಐ.ಎಸ್.ಟಿ.ಇ ವಿಭಾಗ, ಶ್ರೀ ನಿಜಾನಂದ ರೆಡ್ಡಿ, ಕಾರ್ಯದರ್ಶಿ ಕರ್ನಾಟಕ ಐಎಸ್ಟಿಇ, ಪ್ರೊ. ಜಿ ಶರಣಪ್ಪ ಮಲ್ಶೆಟ್ಟಿ ಖಜಾಂಚಿ, ಐ.ಎಸ್.ಟಿ.ಇ, ಸಂಪನ್ಮೂಲ ವ್ಯಕ್ತಿ ಗಳಾಗಿ ಡಾ . ಅಶೋಕ್ ರಾವ್,ಮಾಜಿ ಮುಖ್ಯಸ್ಥರು, ನೆಟ್ವರ್ಕ್ ಪ್ರಾಜೆಕ್ಟ್, ಸಿ.ಇ.ಡಿ.ಟಿ, ಐಐಎಸ್ಸಿ,ಬೆಂಗಳೂರು, ಪ್ರಾಂಶುಪಾಲರು ಡಾ.ಟಿ.ಹನುಮಂತ ರೆಡ್ಡಿ , ಉಪ-ಪ್ರಾಂಶುಪಾಲರು ಡಾ.ಸವಿತಾ ಸೋನೋಳಿ, ಆರ್.ವೈ.ಎಂ.ಇ.ಸಿ-ಐ.ಎಸ್.ಟಿ.ಇ.ಯ ಸಂಚಾಲಕ ಡಾ.ಚಂದ್ರಗೌಡ ಎಲ್ಲಾ ಆರ್.ವೈ.ಎಂ.ಇ.ಸಿ-ಐ.ಎಸ್.ಟಿ.ಇ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.
ಪ್ರಾಂಶುಪಾಲರಾದ ಡಾಽಽ ಟಿ. ಹನುಮಂತರೆಡ್ಡಿ ಶುಭಕೋರಿ, ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಲ್ಲಿ ಪವಿತ್ರವಾದ ಸ್ಪರ್ಧಾತ್ಮಕ ಮನೋಭಾವದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಉತ್ತಮ ಪ್ರತಿಫಲವನ್ನು ನೀರಿಕ್ಷಿಸುವುದರೊಂದಿಗೆ ಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು, ಉಪಪ್ರಾಂಶುಪಾಲರು, ಡಾಽಽ ಸವಿತ ಸೊನೊಳಿ ಇವರು ಐ.ಎಸ್.ಟಿ.ಇ -2024 ರ ಬಗ್ಗೆ ವಿವರಿಸುತ್ತಾ ಮುಖ್ಯ ಅತಿಥಿಗಳ ಸಾಧನೆಯ ಬಗ್ಗೆ ವಿವರಿಸುತ್ತಾ ಇಂಜೀನೀಯರಿಂಗ್ ವಿದ್ಯಾರ್ಥಿಗಳು ನವ್ಯ ತಂತ್ರಜ್ಞಾನದ ಮಾಹಿತಿಗಳನ್ನು ಪಡೆದುಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ್ಳಬೇಕು ಎಂದು ಕೋರಿದರು.
ಮುಖ್ಯ ಅತಿಥಿಗಳಾಗಿ ಡಾ. ಸುರೇಶ್ ಡಿ.ಎಸ್ ಅಧ್ಯಕ್ಷರು, ಕರ್ನಾಟಕ ಐ.ಎಸ್.ಟಿ.ಇ ವಿಭಾಗ, “ ಹೋಸ ಕೌಶಲ್ಯಗಳ ನಾವಿನ್ಯತೆ ಎಂಬುವುದು ಇಂದಿನ ಕಾಲದ ಕ್ರಮವಾಗುತ್ತಲಿವೆ, ತಾಂತ್ರಿಕ ಬೆಳವಣಿಗೆಗಳು ನಿಮ್ಮ ಆಲೋಚನೆಯ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ. ನಿಮ್ಮ ಸ್ಥಳದಲ್ಲಿಯೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ಹುಡುಕಲು ಪ್ರಯತ್ನಿಸಿ, ಸಂಪನ್ಮೂಲಗಳು ಸಂಖ್ಯೆಯಲ್ಲಿ ಸೀಮಿತವಾದಾಗ ಸಮಾಜಕ್ಕೆ ತುಂಬಾ ಉಪಯುಕ್ತವಾದ ಹೊಸ ಆವಿಷ್ಕಾರಗಳು ಫ್ಲಾಶ್ ಆಗಿ ಬರುತ್ತವೆ ಎಂಬುದನ್ನು ದಯವಿಟ್ಟು ನೆನಪಿಡಿ, ದಯವಿಟ್ಟು ನಿಮ್ಮ ಆಸಕ್ತಿಯ ಎಂಜಿನಿಯರಿಂಗ್ ಶಾಖೆಯನ್ನು ಆರಿಸಿ, ಬೇರೆಯವರ ನಿರ್ದೇಶನಗಳನ್ನು ಮಾತ್ರವಲ್ಲ, ನಾನು ಈ ಎಂಜಿನಿಯರಿಂಗ್ ಶಾಖೆಯನ್ನು ಏಕೆ ಆರಿಸಿದ್ದೇನೆ ಮತ್ತು ಈ ಎಂಜಿನಿಯರಿಂಗ್ ಪ್ರೋಗ್ರಾಂನಲ್ಲಿ ನಾನು ಏನು ಮಾಡಬಲ್ಲೆ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ, ಆಗ ಅದರಲ್ಲಿ ನಿಮ್ಮ ಪ್ರತಿಭೆಗಳು ಸ್ವಯಂಚಾಲಿತವಾಗಿ ಹೊರಹೊಮ್ಮುತ್ತವೆ, ಅಧ್ಯಾಪಕರು ಯಾವಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ” ಎಂದು ತಿಳಿಸಿದರು,
ಈ ದಿನದ ಶೀರ್ಷಿಕೆ ತಾಂತ್ರಿಕ ಶಿಕ್ಷಣಕ್ಷೇತ್ರದಲ್ಲಿ ಉದಯೋನ್ಮುಖ ನಿರ್ದೇಶನ ದಿಶೆಗಳು ಕುರಿತು ವಿವರಿಸುತ್ತಾ “ಇಂದಿನ ದಿನಗಳಲ್ಲಿ ತಾಂತ್ರಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಫಲಿತಾಂಶ ಆಧಾರಿತ ತಾಂತ್ರಿಕ ಶಿಕ್ಷಣ ಹೊರಬಂದಿದೆ, ಕಲಿತ ನಂತರ ನಾನೇನು ಮಾಡಬಲ್ಲೆ ಎಂದು ಯೋಚಿಸಿ, ಇಂದಿನ ಸ್ಪರ್ಧಾತ್ಮಕ ಜಗತ್ತು ಸಾಗರದಂತಿದೆ, ಮೆಟ್ರೋ ನಗರಗಳಲ್ಲಿರುವುದಕ್ಕಿಂತ ನಿಮ್ಮ ವೃತ್ತಿಗೆ, ಸಮಾಜಕ್ಕೆ, ಹುಟ್ಟಿದ ಹಳ್ಳಿಗೆ ನೀವು ಏನು ಮಾಡಬಹುದು, ಆ ದಿಕ್ಕುಗಳಲ್ಲಿ ಯೋಚಿಸಿ, ಅನ್ವೇಷಿಸದ ತಾಂತ್ರಿಕ ಕ್ಷೇತ್ರಗಳಲ್ಲಿ ಅನ್ವೇಷಿಸಿ, ಕೊಲ್ಲಾಬರೇಟಿವ್ ಮತ್ತು ಕೋಆಪರೇಟಿವ್ ಎಡ್ಯೂಕೇಷನ್ ಸಹಕಾರಿ-ಕಲಿಕೆಯು ತಾಂತ್ರಿಕ ಶಿಕ್ಷಣದ ಪ್ರವೃತ್ತಿಯಾಗಿದೆ, ನಮ್ಮ ವಿದ್ಯಾರ್ಥಿಗಳು 360 ಡಿಗ್ರಿ ಅಭಿವೃದ್ಧಿಯಾಗಬೇಕು, ಎರಡು ಮೂರು ದಶಕಗಳ ಹಿಂದೆ ಹೊಲಿಸಿದರೆ ಇಂದು ನಾವು ಹಲವಾರು ಸೌಲಭ್ಯಗಳನ್ನು ಹೊಂದಿದ್ದೇವೆ, ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಕಾರ್ಯಕ್ರಮಗಳಲ್ಲಿ ಒಮ್ಮೆ ಭಾಗವಹಿಸಿದರೆ ಜಗತ್ತು ಹೇಗೆ ಮುಂದುವರಿಯುತ್ತಿದೆ ಬೆಳೆಯುತ್ತಿದೆ ಎಂದು ತಿಳಿಯುತ್ತದೆ ಮತ್ತು ಅದು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ ಒಂದೆರಡು ಹಂತದಲ್ಲಿ ಪ್ರಯತ್ನ ಪಟ್ಟರೇ ಸಮಾಜಕ್ಕೆ ಹೊಸ ಆವೀಕ್ಷಾರ ಒದಗಿಸಬಹುದು” ಎಂದುತಿಳಿಸಿದರು.
ವೀ.ವಿ.ಸಂಘದ ಅಧ್ಯಕ್ಷರು ಶ್ರೀ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಶ್ರೀ ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಶ್ರೀ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಶ್ರೀ ಬೈಲುವದ್ದಿಗೇರಿ ಎರಿ್ರಸ್ವಾಮಿ ಶುಭಹಾರೈಸಿದರು. ಶ್ರೀಮತಿ ವಾಣಿ ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರು, ಡಾಽಽಮಾನಸಚಿಗಟೇರಿ, ವಂದಿಸಿದರು. ಸಂಚಾಲಕ ಡಾ.ಚಂದ್ರಗೌಡ ಆರ್.ವೈ.ಎಂ.ಇ.ಸಿ-ಐ.ಎಸ್.ಟಿ.ಇ.ಯ ಬಗ್ಗೆ ವಿವರಿಸಿದರು, ಡಾ.ಶಿವಕೇಶೀ,ಹನುಮಂತರೆಡ್ಡಿ, ಕೆ.ಎಂ.ಲೋಕೇಶ, ನಾಗರಾಜ, ವೀರೇಶಯ್ಯ, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ ವೃಂದದವರೂ, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.