ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟನೆ
ಹಗರಿಬೊಮ್ಮನಹಳ್ಳಿ 27: ರಸಗೊಬ್ಬರ ಹಾಗೂ ಬೀಜ ಮಾರಾಟದಲ್ಲಿ ನಿಗಧಿ ಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡಿದ್ದು ಕಂಡುಬಂದರೆ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸುವುದರ ಜೊತೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಈ ಅಧಿಕ ಮಾರಾಟದ ಜಾಲಕ್ಕೆ ಬ್ರೇಕ್ ಹಾಕಲು ಸಮಿತಿ ರಚಿಸಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ 22/23ನೇ ಸಾಲಿನ ಮುಂಗಾರು ಹಂಗಾಮಿನ ಶುಕ್ರವಾರ ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ತಾಲೂಕಿನಲ್ಲಿನ ರೈತರಿಗೆ ಯಾವುದೇ ರೀತಿ ಬೀಜ ಮತ್ತು ಗೊಬ್ಬರ ಖರೀದಿಯಲ್ಲಿ ಅನ್ಯಾಯವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು, ರೈತರಿಗೆ ಮೋಸ ಮಾಡುವ ರಸಗೊಬ್ಬರದ ಅಂಗಡಿಗಳ ಪರವಾನಿಗೆ ಅನಧಿಕೃತಗೊಳಿಸಲಾಗುವುದು, ರೈತರಿಗೆ ಸರಕಾರದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳನ್ನು ಮುಟ್ಟಿಸುವ ಪ್ರಮಾಣಿಕ ಪ್ರಯತ್ನ ಮಾಡವ ಭರವಸೆಯನ್ನು ನೀಡಿದರು, ಕೃಷಿ ಅಧಿಕರಿಗಳಾಗಲಿ ಅಂಗಡಿ ಮಾಲೀಕರಾಗಲಿ ರೈತರ ವಿಷಯದಲ್ಲಿ ಲೋಪದೋಷಗಳು ಕಂಡುಬಂದರೆ ನೇರವಾಗಿ ನನಗೆ ಕರೆ ಮಾಡಲಿ ಶೀಘ್ರವೇ ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿ ಅಂಗಡಿ ಮಾಲೀಕರು ದಿನಪ್ರತಿ ದರಗಳ ದರಪಟ್ಟಿಯನ್ನು ಪ್ರಕಟಿಸಬೇಕು, ತಾಲೂಕಿನ ರೈತರಿಗೆ ಅವಶ್ಯಕವಿರುವ ಬೀಜ ಸೇರಿದಂತೆ ರಸಗೊಬ್ಬರಗಳ ಅಭಾವ ಸೃಷ್ಠಿಯಾಗದಂತೆ ಅಧಿಕರಿಗಳಿಗೆ ತಾಕೀತು ಮಾಡಲಾಗಿದೆ, ಲೋಪದೋಷಗಳು ಕಂಡುಬಂದರೆ ರೈತ ಸಂಪರ್ಕ ಕೇಂದ್ರಗಲೀಗೆ ಭೇಟಿ ನೀಡಿ ಪರಿಶಿಲಿಸಿಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.
ಕೃಷಿ ಸಂಜೀವಿನಿ ಹಾಗೂ ಸ್ವಸಹಾಯ ಸಂಘಕ್ಕೆ ನೀಡಿದ ಟ್ರ್ಯಾಕ್ಟರ್ಗೆ ರಿಬ್ಬನ್ ಕಟ್ ಮಾಡುವುದರ ಮೂಲಕ ಶಾಸಕ ಭಿಮಾನಾಯ್ಕ್ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ತಹಶಿಲ್ದಾರ್ ಶರಣಮ್ಮ, ಕೃಷಿ ಸಹಾಯಕ ನಿರ್ದೇಶಕ ಜೀವನ್ ಸಾಬ್, ಪ್ರಭಾರಿ ತಾಲೂಕು ಪಂಚಾಯತ್ ಕಾಯ್ನಿರ್ವಾಹಧಿಕರಿ ರಮೇಶ ಮಹಲಿಂಗಾಪುರ, ಪುರಸಭೆ ಮಾಜಿ ಸದಸ್ಯ ಅಲ್ಲಾಭಕ್ಷಿ, ಹನ್ಸಿ ದೇವರಾಜ್, ಹುಡೇದ್ ಗುರುಬಸವರಾಜ, ಡಿಶ್ ಮಂಜುನಾಥ್, ಮೈಲಾರ್ಪ , ಭೋಜಾನಾಯ್ಕ್ ಸೇರಿದಂತೆ ಇನ್ನಿತರರು ಇದ್ದರು.