ಮಹಲಿಂಗಪುರ

ಶ್ರೀ ಶಿವಸಾಯಿ ಸರೋವರದಿಂದ ನಂದನವನ ನಿರ್ಮಾಣವಾಗಿದೆ : ಶಾಸಕ ಸಿದ್ದು ಸವದಿ

ಶ್ರೀ ಶಿವಸಾಯಿ ಸರೋವರದಿಂದ ನಂದನವನ ನಿರ್ಮಾಣವಾಗಿದೆ : ಶಾಸಕ ಸಿದ್ದು ಸವದಿ

ಶ್ರೀ ಶಿವಸಾಯಿ ಸರೋವರ ಲೋಕಾರ್ಪಣೆ 

ಮಹಾಲಿಂಗಪುರ 04 : ಶ್ರೀ ಶಿವ ಸಾಯಿ ಸರೋವರ ನಿರ್ಮಿಸಿ ಕೆಂಗೇರಿಮಡ್ಡಿಯನ್ನು ನಂದನವನವಾಗಿಸಿದ ಪುರಸಭಾ ಸದಸ್ಯ ಶೇಖರ ಅಂಗಡಿ ಕಾರ್ಯ ಶ್ಲಾಘನೀಯ, ಒಬ್ಬ ಜನನಾಯಕ ಹೇಗಿರಬೇಕೆಂಬುದಕ್ಕೆ ಶೇಖರ ಅಂಗಡಿ ಸ್ಪಷ್ಟ ಉದಾಹರಣೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.  

ಪುರಸಭೆಯ 2021-22 ನೇ ಸಾಲಿನ ಎಸ್‌ಎಫ್‌ಸಿ ಅನುದಾನ ಹಾಗೂ ನಗರೋತ್ಥಾನ ಯೋಜನೆ ಹಂತ 4 ರಡಿಯಲ್ಲಿ ಸ್ಥಳೀಯ ಕೆಂಗೇರಿವಡ್ಡಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿವ ಸಾಯಿ ಸರೋವರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು , ಶೇಖರ ಅಂಗಡಿಯವರ ಹಠ ಮತ್ತು ಛಲದಿಂದಾಗಿ ಇಲ್ಲಿ ಬೃಂದಾವನ ಸೃಷ್ಟಿಯಾಗಿದೆ, ಅವಶ್ಯಬಿದ್ದಲ್ಲಿ ಇನ್ನೂ ಅನುದಾನ ನೀಡುವೆ ಎಂದರು. 

ಸರೋವರ ನಿರ್ಮಾತೃ ಶೇಖರ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರಾದ ಸಿದ್ದು ಸವದಿ, ಮುಖಂಡರಾದ ಬಸನಗೌಡ ಪಾಟೀಲ, ಈರ​‍್ಪ ದಿನ್ನಿಮನಿ ಮುಂತಾದ ಮಹನೀಯರ ಸಹಕಾರದಿಂದ ಇಂತಹ ಶ್ರೇಷ್ಠ ಕಾರ್ಯ ಸಾಧ್ಯವಾಗಿದೆ, ಈ ಹಿಂದುಳಿದ ಪ್ರದೇಸದ ಅಭಿವೃದ್ಧಿಗೆ ತಾವು ಮಂದೆಯೂ ಶ್ರಮಿಸುವುದಾಗಿ ತಿಳಿಸಿದರು. 

ಮಹಾತ್ಮ ಗಾಂಧಿ, ಲಾಲ ಬಹದ್ದೂರ ಶಾಸ್ತ್ರಿಯವರಿಗೆ ನಮನ ಸಲ್ಲಿಸಿದ ಶಾಸಕರು ಸರೋವರಕ್ಕೆ ಬಾಗೀನ ಅರ​‍್ಿಸಿ ಲೋಕಾರೆ​‍್ಣಗೊಳಿಸಿದರು. ಇದೇ ವೇದಿಕೆಯಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಹಾಗೂ ಸನ್ಮಾನ ಜರುಗಿತು. 

ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್‌.ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಲಾವಿದ ಹರೀಶ ಹಿರೂರ,ಅಲ್ಲಪ್ಪ ಲೋಕಾಪುರ ಮಾತನಾಡಿದರು. 

ಮುಖ್ಯತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಈರ​‍್ಪ ದಿನ್ನಿಮನಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ಯುವ ಮೋರ್ಚಾ ಅಧ್ಯಕ್ಷ, ಲಕ್ಕಪ್ಪ ಪಾಟೀಲ, ಸ್ನೇಹಲ್ ಅಂಗಡಿ, ಚನ್ನಬಸು ಯರಗಟ್ಟಿ, ಸುವರ್ಣಾ ಆಸಂಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಚಂದ್ರಶೇಖರ ಗೊಂದಿ, ಲಕ್ಕಪ್ಪ ಚಮಕೇರಿ ಇತರರಿದ್ದರು. ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. 


ಸುದ್ದಿ ಓದಿ