ಮೂಡಲಗಿ ಸಹಕಾರಿ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗೆ ಕಾರ್ಯಗಾರ ಉದ್ಘಾಟನೆ
ಮೂಡಲಗಿ 17: ಸಹಕಾರಿ ತಳಹದಿಯ ಮೇಲೆ ಹುಟ್ಟಿರುವ ಸಹಕಾರಿ ಸಂಘಗಳು ಬೆಳೆಯಬೇಕಾದರೆ ಸಹಕಾರಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರಿಗೆ ತರಬೇತಿ ಅವಶ್ಯ ಎಂದು ಬಾಗಲಕೋಟ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟದ ಅಧ್ಯಕ್ಷ ಮುಚಖಂಡಯ್ಯ ಹಂಗರಗಿ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸಾಯಿಟಿಯ ಸಭಾಭವನದಲ್ಲಿ ಮೂಡಲಗಿ ನಗರ ಸಹಕಾರ ಸಂಘಗಳ ಒಕ್ಕೂಟ ಮತ್ತು ಬಾಗಲಕೋಟ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಮೂಡಲಗಿ ತಾಲೂಕಿನ ಎಲ್ಲ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ಮಾರಾಟಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘದವರು ವೈಯಕ್ತಿಕ ಸಾಲ ನೀಡುವಾಗ ಸರಿಯಾಗಿ ಚಿಂತಿಸಿ ಸಾಲ ನೀಡಬೇಕು, ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ಸರಿಯಾದ ರೀತಿ ಉಯೋಗ ಮಾಡಿಕೊಳ್ಳುವರಿಗೆ ಸಹಾಯ ಸಹಕಾರ ಮಾಡಬೇಕೆಂದರು.
ಬಾಗಲಕೋಟ ಒಕ್ಕೂಟದ ನಿರ್ದೇಶಕ ನಿಂಗಪ್ಪ ಕಡಪಟ್ಟಿ ಮಾತನಾಡಿ, ಆಸಕ್ತಿಯಿಂದ ಕಟ್ಟಿದ ಸಂಸ್ಥೆಗಳು ಆಸಕ್ತಿಯಿಂದ ಪ್ರಗತಿ ಸಾಧಿಸಬೇಕು, ಇಂದು ಸಹಕಾರಿ ಸಂಸ್ಥೆಗಳು ನಡೆಯುವುದು ಬಹಳ ಕಷ್ಟವಾಗಿದೆ. ಮೂಡಲಗಿ ಪಟ್ಟಣದಲ್ಲಿಯೇ ಸುಮಾರು 70 ಸಹಕಾರಿ ಸಂಸ್ಥೆಗಳು ಹೊಂದಿ ಪ್ರಗತಿ ಪತಥದತ್ತ ಸಾಗುತ್ತಿರುವದು ಶ್ಲಾಘನಿಯ, ಸಾಲ ನೀಡುವದರಲ್ಲಿ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ಕಾರ್ಯ ಬಹಳ ಮುಖ್ಯವಾದರೆ ಆಡಳಿ ಮಂಡಳಿಯ ಸಹಕಾರವು ಮುಖ್ಯವಾಗಿರುತ್ತದೆ. ಒಳ್ಳೆಯ ವ್ಯಕ್ತಿಗಳಿಗೆ ಸಾಲ ನೀಡಿದರೆ ಮುಂದೆ ಗಂಡಾತರ ಬರುವುದಿಲ್ಲ ಎಂದರು.
ಗೋಕಾಕದ ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಪ್ರಗತಿ ಪತಥದ ಕೊಂಡಯ್ಯಬೇಕಾದರೆ ಎಲ್ಲ ಸಹಕಾರಿಗಳು ಒಗಟ್ಟಿನಿಂದ ಬಯ ಮುಕ್ತವಾಗಿ ಸಂಸ್ಥೆಗಳನ್ನು ನಡೆಸಬೇಕು, ಸಹಕಾರಿ ಕ್ಷೇತ್ರದಲ್ಲಿ ಹೊಸ ಹೊಸ ನಿಯಮಗಳನ್ನು ಅರ್ಥಯಿಸಿಕೊಳ್ಳಬೇಕು ಹಾಗೂ ಸಾಮಾಜಿಕ ಜವಾಬ್ದಾರಿ ಎಲ್ಲ ಆಡಳಿತ ಮಂಡಳಿ ಮೇಲೆ ಇರುತ್ತದೆ, ಸಾಲಗಾರನಿಂದ ಬಡ್ಡಿ ಮಾತ್ರ ಬರಣಾ ಮಾಡಿಸಿಕೊಳ್ಳದೆ ಅಸಲು ಸಹಿತ ಬರಣಾ ಮಾಡಿಸಿಕೊಳ್ಳಬೇಕು ಎಂದ ಅವರು ಸಾಲ ಹಂಚಿಕೆ ಮತ್ತು ವಸುಲಾತಿಯಲ್ಲಿ ಬಹಳ ಎಚ್ಚರವಹಿಸ ಬೇಕೆಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕುರುಹಿನಶೆಟ್ಟಿ ಸೊಸಾಯಿಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ ಮಾತನಾಡಿ, ಸಹಕಾರಿ ಸಂಸ್ಥೆಗಳು ಪೈಪೋಟಿ ಮಾಡದೆ ಸಾಲ ನೀಡುವಲ್ಲಿ ಹಿರಿಯ ಸಲಹೆ ಸಹಕಾರ ಪಡೆದುಕೊಳುವುದು ಬಹಳ ಮುಖ್ಯ ಎಂದರು
ಸಮಾರಂಭದ ವೇದಿಕೆಯಲ್ಲಿ ಕ.ರಾಸ.ಪ.ಸಂ ಮಹಾಮಮಂಡಳ ನಿರ್ದೇಶಕ ತವ್ಮ್ಮಣ್ಣ ಕೆಂಚರಡ್ಡಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವರ್ಧಮಾನ ಬೋಳಿ, ಬಾಗಲಕೋಟ ಒಕ್ಕೂಟದ ಉಪಾಧ್ಯಕ್ಷ ಸಿದ್ದಪ್ಪ ಹಲಕಾಟಿ, ನಿರ್ದೇಶಕರಾದ ಭೀಮಶಿ ಕದಂ, ನಿಂಗಪ್ಪ ಗೋಡಿ, ಭರತೇಶ ಮೂಕನ್ನವರ, ಶಿವಪ್ಪ ಅವಟಿ ಇದ್ದರು
ತರಬೇತಿ ಕಾರ್ಯಗಾರದಲ್ಲಿ ಮೂಡಲಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳ ವ್ಯವಸ್ಥಾಪಕರು, ಮಾರಾಟಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಮೂಡಲಗಿ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸಾಯಿಟಿಯ ಸಭಾಭವನದಲ್ಲಿ ಜರುಗಿದ ತಾಲೂಕಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ಮಾರಾಟಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರಿಗೆ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಮುಚಖಂಡಯ್ಯ ಹಂಗರಗಿ ಮತ್ತಿತರರು ಉದ್ಘಾಟಿಸಿದರು.