ಹಪ್ಪಳ ಉಪ್ಪಿನಕಾಯಿ ಮಸಾಲೆ ಪೌಡರ್ ತಯಾರಿಕಾ ತರಬೇತಿ ಉದ್ಘಾಟನೆ
ಬಳ್ಳಾರಿ16: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲಾ ಪೌಡರ್ ತಯಾರಿಕಾ ತರಬೇತಿ ಉದ್ಘಾಟನೆಯನ್ನು ಗಿಡ ನೇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು
ಈ ಕಾರ್ಯಕ್ರಮವನ್ನು ಡಿವಿಪಿಆರ್ ಮುರಳಿಕೃಷ್ಣ, ಸಹಾಯಕ ಮಹಾ ಪ್ರಬಂಧಕರು, ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ಬಳ್ಳಾರಿ ಇವರು ಇಂದಿನ ಕಾಲದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸ್ವ-ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು ಆಗ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಮಾರ್ಗದರ್ಶನ ಮಾಡಿದರು.
ಗೀರೀಶ್ ವಿ ಕುಲಕರ್ಣಿ, ಎಲ್ಡಿಎಮ್, ಕೆನರಾ ಬ್ಯಾಂಕ್ ಬಳ್ಳಾರಿ.ಇವರು ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಜೀತ್ ನಾಯ್ಕ ಸಹಾಯಕ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ, ಇವರು ಮಹಿಳೆಯರು ಗುಡಿ ಕೈಗಾರಿಕೆಗಳನ್ನು ಮಾಡಿಕೊಳ್ಳುವದರ ಜೊತೆಗೆ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ವೈಭವ ವಿಭಾಗೀಯ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಬಳ್ಳಾರಿ. ಪ್ರೇಮಲತಾ ವ್ಯವಸ್ಥಾಪಕರು ವರ್ಲ್ಡ ವಿಜನ್ ಬಳ್ಳಾರಿ. ರಾಜೆಸಾಬ್ ಎಚ್ ಯರಿಮನಿ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ರಾಮಚಂದ್ರ, ರಮೇಶ ಕೆನರಾ ಬ್ಯಾಂಕ್ ಬಳ್ಳಾರಿ. ಜಡೇಪ್ಪ, ಸಿದ್ದಲಿಂಗಮ್ಮ, ಜ್ಯೋತಿ, ಸಂತೋಷ ಕುಮಾರ, ಕಿರಣ ಕುಮಾರ ಉಪಸ್ಥಿತರಿದ್ದರು.