ರೋಣ

ದೇವಿಯ ಮೆರವಣಿಗೆ ಕಾರ್ಯಕ್ರಮದ ಉದ್ಘಾಟನೆ

ದೇವಿಯ ಮೆರವಣಿಗೆ ಕಾರ್ಯಕ್ರಮದ ಉದ್ಘಾಟನೆ

ರೋಣ 20:  ದೇವಿಯ ಮೆರವಣಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಬಸವಂತಪ್ಪ ಹೆಚ್ ತಳವಾರ ಗದಗ ಜಿಲ್ಲಾ ಬಿ.ಜೆ.ಪಿ. ಎಸ್‌.ಟಿ ಮೊರ್ಚಾದ ಮಾಜಿ ಅಧ್ಯಕ್ಷ  ಮಾತನಾಡಿ ಗ್ರಾಮೀಣ ಪ್ರದೇಶದ  ದೇವಾಲಯಗಳಲ್ಲಿ ನಡೆಯುವ ದೇವಿ ಪುರಾಣವು ಪ್ರವಚನವು ನಿರಂತರವಾಗಿ 86 ವರ್ಷಗಳಿಂದ ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ನಡೆದು ಬಂದಿದೆ ಎಂದರು. ಹುನಗುಂಡಿ ಗ್ರಾಮದ ಮನೆ ಮನೆಗಳಲ್ಲಿ ದೇವಿ ಪುರಾಣ ಓದುವ ಭಕ್ತರನ್ನು ಕಂಡು ಅಂದಿನ ಹಿರಿಯರು ಶ್ರೀ ದೇವಿ ಪುರಾಣವನ್ನು ಊರಿನ ದೈವದ ವತಿಯಿಂದಲೆ ಪ್ರಾರಂಬಿಸಿದರು.1935ರಲ್ಲಿ ಗ್ರಾಮ ದೇವತೆ ಮತ್ತು ಈಶ್ವರ ದೇವಾಲಯದಲ್ಲಿ ಪ್ರಾರಂಭಿಸಿ ಪ್ರಥಮ ಪುರಾಣ ಪ್ರವಚನವನ್ನು ಅಂದಿನ ಗೌಟ್ ನ ಶಾಲೆಯ ಶಿಕ್ಷಕ ಅಂದಯ್ಯ ಮಠದ ನೆಡಸಿಕೊಟ್ಟರು ಅವರೊಂದಿಗೆ ಹುನಗುಂಡಿಯ ಬಸಯ್ಯ ವಸ್ತ್ರದ ಪುರಾಣಿಕ ಪ್ರಾರಂಭದಲ್ಲಿ ಸೇವೆ ಸಲ್ಲಿಸಿದರು.  

 ಈ ವೇಳೆ ಕರಕಿ ಕಟ್ಟಿಯ ಮಹಾಸ್ವಾಮಿಗಳು,ಅರಳಿಕಟ್ಟಿಯ ಅಜ್ಜನವರು ನಡೆಸಿಕೊಟ್ಟರು.ಅಂದಿನ ದೇವಿ ಪುರಾಣ ಹೆಚ್ಚಿನ ಪ್ರಾವೀಣ್ಯತೆ ಪಡೆದುದ್ದರಿಂದ ಕಾರ್ಯಕ್ರಮಗಳು ಜರುಗುತ್ತ ಬಂದಿದೆ.ಕಳೆದ 30 ವರ್ಷಗಳಿಂದ ಷಡಕ್ಷರಯ್ಯ ಸಾಲಿಮಠ ಶಾಸ್ತ್ರಿಗಳು ಪುರಾಣ ವಿವರಣೆ ಮಾಡುತಿದ್ದಾರೆ.ಅವರೊಂದಿಗೆ ಕಲ್ಲಯ್ಯ ಮಠದ ಶಾಸ್ತ್ರಿಗಳು ಪುರಾಣ ಪ್ರವಚನ ನೀಡುತ್ತಾ ಬಂದಿದ್ದಾರೆ.ಆರಂಭದ ದಿನ ದೇವಿ ಪುರಾಣ, ಪುಸ್ತಕ,ದೇವಿ ಭಾವಚಿತ್ರ ಮತ್ತು ಮೂರ್ತಿಗಳನ್ನು ಬಸಪ್ಪ ಬಡಿಗೇರ ಮನೆಯಿಂದ ಮೆರವಣಿಗೆ ಮಾಡುವ ಮೂಲಕ ದೇವಾಲಯಕ್ಕೆ ತರುತ್ತಾರೆ.ಬಡಿಗೇರ ಹಾಗೂ ರೇಷ್ಮಿ ಮನೆತನದವರು ದೇವಿ ಪುರಾಣವನ್ನು 9 ದಿನಗಳ ಕಾಲ ದೇವಿಗೆ ನೈವೇದ್ಯ ಅರ​‍್ಿಸುತ್ತಾರೆ.            

ಶೇಖರಪ್ಪ ಹೂಗಾರ ಮನೆತನದವರು ಈ ಪುರಾಣದ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. ದಸರಾ ಹಬ್ಬದ ನಂತರ ಪುರಾಣ ಮಂಗಲ ಕಾರ್ಯಕ್ರಮ ಅತ್ಯಂತ ವಿಜ್ರಂಭನೆಯಿಂದ ನೆರೆವೇರಿಸುವರು.ಇಲ್ಲಿ ಆದಿಶಕ್ತಿ ಸೇವಾ ಸಮಿತಿ ಸರಕಾರದಿಂದ ಅನುದಾನ ಪಡೆದು ಗ್ರಾಮದೇವತೆ ಹಾಗೂ ಈಶ್ವರ ದೇವಾಲಯ ಜೀರ್ಣೋದ್ಧಾರ ಮಾಡಿದ್ದಾರೆ.ಅಲ್ಲದೆ ಕಮಿಟಿ ವತಿಯಿಂದ ಶಾಲೆಯ ಕೆಲವು ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಿದ್ದು ಸೇವಾ ಸಮಿತಿಯು ಸಾಮಾಜಿಕ  ಕಾಳಜಿಗೆ ಸಾಕ್ಷಿಯಾಗಿದೆ. ಗ್ರಾಮದೇವತೆ ಹಾಗೂ ಈಶ್ವರ ದೇವಾಲಯಗಳಲ್ಲಿ 13 ದಿನಗಳ ಕಾಲ ದೇವಿ ಪುರಾಣ ನಡೆಯುತ್ತಾ ಬಂದಿದ್ದು  ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಭಕ್ತಿ ಪೂರ್ವಕವಾಗಿ ಪುರಾಣ ಪುಣ್ಯ ಕಥೆಗಳನ್ನು  ಹೆಚ್ಚಾಗಿ ಹಮ್ಮಿಕೊಳ್ಳಬೇಕೆಂದು ಯುವಕ ಯುವತಿಯರಿಗೆ ಕರೆ ನೀಡಿದರು. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಕಣ್ಮರೆಯಾಗಿವೆ.ಹುನನುಂಡಿ ಗ್ರಾಮದಲ್ಲಿ ಬಹಳಷ್ಟು ಪುರಾಣಗಳು ಹಚ್ಚುತ್ತಾರೆ.ಇದರಿಂದ ಜನರಿಗೆ ಒಳ್ಳೆಯ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಲು ಸಹಾಯಕಾರಿ ಆಗುತ್ತದೆ ಎಂದು ಹೇಳಿದರು.  ಈ ಕಾರ್ಯಕ್ರಮದಲ್ಲಿ  ಷಡಕ್ಷರಯ್ಯ ಸಾಲಿಮಠ,ಕಲ್ಲಯ್ಯ ಮಠದ,ರಾಚಯ್ಯ ಎಸ್ ಹಿರೆಮಠ,ಜಂಭಯ್ಯ ರೇಷ್ಮಿ,ಎಸ್‌.ಎಚ್‌. ಮಂಡಸೊಪ್ಪಿ,ಎ.ಎಸ್‌.ಗೌಡರ,ಆರ್ ಬಿ ಗುಳಪ್ಪನವರ,ಎಸ್‌.ವಾಯ್ ಮಂಡಸೊಪ್ಪಿ, ಶಿವಾಜಿ ಎಚ್‌.ಮಂಡಸೊಪ್ಪಿ , ಸಂಗನಗೌಡ ದೊಡ್ಡಗೌಡ್ರ,ಎ.ಬಿ ಮಂಡಸೊಪ್ಪಿ ,ಬಿ.ಎಸ್‌. ವಸ್ತ್ರದ ಭರಮಗೌಡ ಸೋಮನಗೌಡ್ರ ,ಎಂ ಎಚ್ ಜಂತಲಿ ಸೇರಿದಂತೆ ಗ್ರಾಮದ ಗುರು ಹಿರಿಯರು,ಯುವಕರು ಸೇರಿ ಇತರರಿದ್ದರು. 


ಸುದ್ದಿ ಓದಿ