ಬಳ್ಳಾರಿ

ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ ಉದ್ಘಾಟನಾ ಸಮಾರಂಭ

ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ ಉದ್ಘಾಟನಾ ಸಮಾರಂಭ

ಬಳ್ಳಾರಿ 07: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅಃ ಖಖಇಖಿಋ) ಆವರಣದಲ್ಲಿ 30ದಿನಗಳ ಹೋಲಿಗೆ ತರಬೇತಿ ಕಾರ್ಯಕ್ರಮ ದಿ. 06ರಂದು ಹಮ್ಮಿಕೊಂಡಿದ್ದು. ತರಬೇತಿ ಉದ್ಘಾಟನಾ ಸಮಾರಂಭದ ಮುಖ್ಯ ಅಥಿತಿಗಳಾಗಿ ರಾಜೇಂದ್ರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಜಿಲ್ಲಾ ಪಂಚಾಯತ ಬಳ್ಳಾರಿ,  ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಹಿಳೆಯರು ಬಟ್ಟೆ ಹೊಲೆಯುವ ಸ್ವ-ಉದ್ಯೋಗ ಮಾಡಿಕೊಂಡು  ಸೃಜನಾತ್ಮಕವಾಗಿ ಹೊಸ ಹೊಸ ವಿನ್ಯಾಸದ ಬಟ್ಟೆ ಹೋಲೆಯುವ ಕೌಶಲ್ಯವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈ ಹೋಲಿಗೆ ತರಬೇತಿ ನಿಮಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ  ಮಂಜುಳಾ ಸಂಪನ್ಮೂಲ ವ್ಯಕ್ತಿಗಳು, ಜಡೇಪ್ಪ ತರಬೇತಿ ಕಾರ್ಯಕ್ರಮ ಸಂಯೋಜಕರು, ಮಹಮ್ಮದ ನಿಸಾರ, ಉಪನ್ಯಾಸಕರು.  ಸಿದ್ದಲಿಂಗಮ್ಮ, ಸಂತೋಷ ಕುಮಾರ್,  ಕಿರಣ ಕುಮಾರ ಹಾಗೂ 26 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ