ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 4ನೇ ಶಾಖೆ ಉದ್ಘಾಟನೆ
ಮಾಂಜರಿ, 24 : ಸಹಕಾರ ಮತ್ತು ಸೌಹಾರ್ದ ಕ್ಷೇತ್ರದಲ್ಲಿ ಸಹಕಾರ, ಸಹಯೋಗ, ಸೌಹಾರ್ದತೆಯ ಭಾವನೆಗಳಿರುತ್ತವೆ. ಸಹಕಾರ ಸೌಹಾರ್ದ ಸಂಸ್ಥೆಗಳು ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದರಿಂದ ಇಂತಹ ಸಂಸ್ಥೆಗಳು ಜನಸಾಮಾನ್ಯರ ಉನ್ನತಿಗೆ ಆಧಾರಸ್ತಂಭವಾಗುತ್ತಿವೆ ಎಂದು ಕಾಗವಾಡ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಶ್ರೀಮಂತ ತಾತ್ಯಾ ಪಾಟೀಲ್ ಹೇಳಿದರು.
ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮದಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 4ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬ್ಯಾಂಕ್, ಸೊಸೈಟಿಗಳು ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತವೆ. ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸದಸ್ಯರು ಗ್ರಾಹಕರ ನಂಬಿಕೆ, ವಿಶ್ವಾಸ ಗಳಿಸಿ, ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ನಮಗಿದೆ. ಸೌಹಾರ್ದ ಸಹಕಾರಿ ಸಂಘ ಮುಂದಿನ ದಿನಗಳಲ್ಲಿ ಹೆಚ್ಚಿನಸೌಲಭ್ಯವನ್ನು ಸಾರ್ವನಿಕರಿಗೆ ನೀಡಲು ಎಂದು ಹಾರೈಸಿದರು.
ಮಾಜಿ ಜಿ ಪ ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ, ಮಂಗಸುಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸಮಾಜದ ಎಲ್ಲಾ ವರ್ಗದ ಜನರ ವಿಶ್ವಾಸ, ನಂಬಿಕೆಯ ಬಲವಾದ ಬೆಂಬಲದೊಂದಿಗೆ ಸ್ಥಾಪಿತವಾಗಿದೆ, ರಾಷ್ಟ್ರೀಕೃತ ಬ್ಯಾಂಕಗಳಲ್ಲಿಹೊರ ರಾಜ್ಯದ ನೌಕರರೇ ಹೆಚ್ಚಿರುವುದರಿಂದ ಇಲ್ಲಿನ ಜನರಿಗೆ ವ್ಯವಹಾರ ಕಷ್ಟ ಆಗುತ್ತಿದೆ, ಆದರೆ ಸಹಕಾರಿ ಸಂಘಗಳಲ್ಲಿ ಸ್ಥಳೀಯ ನೌಕರರೇ ಇರುವುದರಿಂದ ಗ್ರಾಹಕರಿಗೆ ಉತ್ತ ಮ ಸೇವೆ ಸಿಗುತ್ತಿದೆ ಎಂದು ಹೇಳಿದರು. ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಮರ ಯಾದವ್ ಮಾತನಾಡಿ, ಸಾಮಾನ್ಯ ಜನರಿಗೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಸೌಲಭ್ಯ ಒದಗಿಸುವ ಸದುದ್ದೇಶದೊಂದಿಗೆ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಗೊಂಡಿತು.
ಅದರ ಭಾಗವಾಗಿ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಆರಂಭವಾದ ಸಹಕಾರಿ ಸಂಘ ರೈತರು, ನಿರ್ಗತಿಕರು, ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಉಪಯುಕ್ತವಾಗಲಿದ್ದು, ಇದರ ಪ್ರಯೋಜನ ವನ್ನು ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಶಾಖ ಉದ್ಘಾಟನಾ ಸಮಾರಂಭಕ್ಕೆ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಕಾಳವಿರೇ ವಿಶ್ವಾಸ ರಸಾಳೆ ಮೋಹನ್ ಲೋಕರೆ ಪರಶುರಾಮ್ ತೋರಸೆ ರಾಮಚಂದ್ರ ಭೋಸಲೆ ಜ್ಞಾನೇಶ್ವರ ಪಾಟೊಳೆ ಅಭಿಮನ್ಯು ಯಾದವ್ ಸಾಗರ್ ಚೌಹಾನ ಚಂದ್ರಕಾಂತ್ ಖಡಕೆ ಜಹಾಂಗೀರ್ ಕೋಥಂಲಿ ಬಬ್ರುವಾಹನ ಸರಾಪೂರ ಶಿವಾಜಿ ರೋಡೆ ಬಾಳಾಸಾಹೇಬ್ ಕಾಡಾಪುರೆ ಸ್ಥಳೀಯ ಶಾಖಾ ಸಲಹಾ ಸಮಿತಿಯ ಸದಸ್ಯರು ಹಾಜರಿದ್ದರು ಅರುಣ್ ಪಾಟೀಲ್ ಸ್ವಾಗತಿಸಿ ಅರುಣ್ ಭಗತ್ ವಂದಿಸಿದರು.